ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕುಡಿಯೋ ನೀರಿಗೆ ವ್ಯವಸ್ಥೆ ಇಲ್ಲ
ಬ್ರಿಮ್ಸ್ ಅವ್ಯವಸ್ಥೆ ಬಗ್ಗೆ ವರದಿ ಮಾಡಿದ ನ್ಯೂಸ್ ಫಸ್ಟ್ ವರದಿಗಾರ
ರೋಗಿಗಳಿಗೇನು ಮಿನರ್ ವಾಟರ್ ಕೊಡಲಾ ಅಂತ ಉಡಾಫೆ ಉತ್ತರ
ಬೀದರ್ ಜಿಲ್ಲಾಸ್ಪತ್ರೆ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕುಡಿಯೋ ನೀರಿಗೆ ವ್ಯವಸ್ಥೆ ಇಲ್ಲದಾಗಿದೆ. ಈ ಸಮಸ್ಯೆಗಳ ಹಿನ್ನೆಲೆ ನ್ಯೂಸ್ ಫಸ್ಟ್ ಬ್ರಿಮ್ಸ್ ಅವ್ಯವಸ್ಥೆ ಬಗ್ಗೆ ವರದಿ ಮಾಡಿದೆ. ಈ ವೇಳೆ ಪ್ರತಿಕ್ರಿಯೆ ಕೇಳಿದ್ದಾಗ ನ್ಯೂಸ್ ಫಸ್ಟ್ ವರದಿಗಾರನ ಮೇಲೆ ನಿರ್ದೇಶಕರು ದರ್ಪ ಮೆರೆದಿದ್ದಾರೆ.
ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಮಸ್ಯೆ ಬಗ್ಗೆ ಪ್ರಶ್ನಿಸಿದ್ರೆ ನಿರ್ದೇಶಕರಿಗೆ ಕೋಪ ಬಂದಿದೆ. ಬ್ರಿಮ್ಸ್ ನಿರ್ದೇಶಕ ಶಿವಕುಮಾರ್ ಶೆಟಕಾರ್ ಅವರು ದರ್ಪದಿಂದ ವರ್ತಿಸಿದ್ದು, ಏನೆಲ್ಲಾ ಹಾಕ್ತಿರೋ ಹಾಕಿ ಅಂತ ಹೇಳಿದ್ದಾರೆ. ರೋಗಿಗಳು ನೀರಿಗೆ ಹೊರಗೆ ಹೋದ್ರೆ ನಾನೇನು ಮಾಡಬೇಕು. ಜಿಲ್ಲೆಯಲ್ಲೇ ನೀರಿಗಾಗಿ ಬರ ಇದೆ, ಅದಕ್ಕೆ ನಾನೇನು ಮಾಡಲಿ. ಕಟ್ಟಡದ ಒಳಗಡೆ ನೀರಿದೆ ಅಂತ ಹಾರಿಕೆ ಉತ್ತರ ಕೊಟ್ಟಿದ್ದಾರೆ.
ಕಟ್ಟಡದ ಒಳಗೆ ನೀರಿದೆ ಅಂದ್ರೆ ಬನ್ನಿ ತೋರಿಸಿ ಅಂತ ನ್ಯೂಸ್ ಫಸ್ಟ್ ವರದಿಗಾರ ಕೇಳಿದ್ದಾರೆ. ಆಗ ನಾಳೆ ತೋರಿಸ್ತೇನೆ ಅಂತ ಜಾರಿಕೊಂಡಿದ್ದಾರೆ. ಇನ್ನು, ರೋಗಿಗಳಿಗೇನು ಮಿನರ್ ವಾಟರ್ ಕೊಡಲಾ ಅಂತ ಉಡಾಫೆಯಾಗಿ ಉತ್ತರಿಸಿದ್ದಾರೆ.
ತಪ್ಪಾಯ್ತು ಕ್ಷಮಿಸಿ ಎಂದ ಬ್ರಿಮ್ಸ್ ನಿರ್ದೇಶಕ
ನ್ಯೂಸ್ ಫಸ್ಟ್ ವರದಿಗಾರನ ಮೇಲೆ ಬ್ರಿಮ್ಸ್ ನಿರ್ದೇಶಕ ದರ್ಪದಿಂದ ವರ್ತಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಗೆ ನ್ಯೂಸ್ ಫಸ್ಟ್‌ನಲ್ಲಿ ಈ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆ ಬ್ರಿಮ್ಸ್ ನಿರ್ದೇಶಕ ಶಿವಕುಮಾರ್ ಶೆಟಕಾರ್ ಅವರು ತಪ್ಪಾಯ್ತು ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ