newsfirstkannada.com

USA ವಿರುದ್ಧ ಪಂದ್ಯಕ್ಕೆ ಮುನ್ನ ಟೀಮ್​ ಇಂಡಿಯಾಗೆ ಬಿಗ್​ ಶಾಕ್ ಕೊಟ್ಟ​​ ಸ್ಟಾರ್​ ಪ್ಲೇಯರ್​​!

Share :

Published June 12, 2024 at 5:40pm

Update June 12, 2024 at 5:55pm

  ಇಂದು 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯ

  ಮೆಗಾ ಹೈವೋಲ್ಟೇಜ್​ ಪಂದ್ಯದಲ್ಲಿ ಯುಎಸ್​ಎ​​, ಟೀಮ್​ ಇಂಡಿಯಾ ಜಿದ್ದಾಜಿದ್ದಿ!

  ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​ ಶಿವಂ ದುಬೆ ಅವರಿಗೆ ಬಿಗ್​ ಶಾಕ್​

ಇಂದು ನಡೆಯಲಿರೋ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಟೀಮ್​ ಇಂಡಿಯಾ, ಯುಎಸ್​​ಎ ಕ್ರಿಕೆಟ್​ ಟೀಮ್ ಮುಖಾಮುಖಿ ಆಗುತ್ತಿವೆ. ನ್ಯೂಯಾರ್ಕ್‌ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯಲಿರೋ ಈ ಪಂದ್ಯಕ್ಕೆ ಇಡೀ ವಿಶ್ವದ ಕ್ರೀಡಾಭಿಮಾನಿಗಳು ಕಾಯುತ್ತಿದ್ದಾರೆ. ಈ ಮಧ್ಯೆ ಟೀಮ್​ ಇಂಡಿಯಾದ ಸ್ಟಾರ್​​ ಆಲ್​ರೌಂಡರ್​ ಶಿವಂ ದುಬೆಗೆ ಬಿಗ್​ ಶಾಕ್​​ ಕಾದಿದೆ.

2024ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಭರ್ಜರಿ ಪ್ರದರ್ಶನ ನೀಡಿದ್ದ ಶಿವಂ ದುಬೆ ಟೀಮ್​ ಇಂಡಿಯಾದ ಮೊದಲ 2 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಯುಎಸ್​ಎ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ ಅವರಿಗೆ ಅವಕಾಶ ನೀಡುವುದು ಡೌಟ್​ ಆಗಿದೆ.

ಶಿವಂ ದುಬೆ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲೂ ಉತ್ತಮ ದಾಖಲೆ ಹೊಂದಿದ್ದಾರೆ. ಅದರಲ್ಲೂ ಸ್ಪಿನ್ ಬೌಲರ್​ಗಳ ವಿರುದ್ಧ ಚೆನ್ನಾಗಿ ಬ್ಯಾಟ್​ ಬೀಸೋ ಸಾಮರ್ಥ್ಯ ದುಬೆಗೆ ಇದೆ. ಹಾಗಾಗಿಯೇ ರಿಂಕು ಸಿಂಗ್ ಬದಲಿಗೆ ದುಬೆ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ, ಯಾಕೋ ದುಬೆ ಅಷ್ಟು ಚೆನ್ನಾಗಿ ಆಡುತ್ತಿಲ್ಲ. ಇದು ರೋಹಿತ್​ ಶರ್ಮಾಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮೊದಲ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ಶಿವಂ ದುಬೆ ತಾನು ಎದುರಿಸಿದ 2 ಬಾಲ್​ನಲ್ಲಿ ಶೂನ್ಯ ಗಳಿಸಿದ್ರು. ಪಾಕ್​ ವಿರುದ್ಧ ಪಂದ್ಯದಲ್ಲಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್​ ಇಂಡಿಯಾ ಪರ ಕಣಕ್ಕಿಳಿದಿದ್ದ ಶಿವಂ ದುಬೆ 9 ಬಾಲ್​ನಲ್ಲಿ 3 ರನ್​ ಗಳಿಸಿ ವಿಕೆಟ್​​ ಒಪ್ಪಿಸಿದ್ರು.

ಇದನ್ನೂ ಓದಿ: ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್​​.. ಭಾರತ, USA ನಡುವಿನ ಟಿ20 ಪಂದ್ಯ ದಿಢೀರ್​ ರದ್ದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

USA ವಿರುದ್ಧ ಪಂದ್ಯಕ್ಕೆ ಮುನ್ನ ಟೀಮ್​ ಇಂಡಿಯಾಗೆ ಬಿಗ್​ ಶಾಕ್ ಕೊಟ್ಟ​​ ಸ್ಟಾರ್​ ಪ್ಲೇಯರ್​​!

https://newsfirstlive.com/wp-content/uploads/2024/05/Team-India_m.jpg

Load More