ವರ್ಷದ ಬಳಿಕ ಕಣಕ್ಕಿಳಿಯಲು ಬೂಮ್ರಾ ರೆಡಿ
ಬೂಮ್ರಾಗೆ ಕಾದಿಗೆ ಸಾಲು ಸಾಲು ಅಗ್ನಿಪರೀಕ್ಷೆ
ಕನ್ನಡಿಗ ಪ್ರಸಿದ್ದ್ ಕೃಷ್ಣಗೂ ಇದೆ ಬಿಗ್ ಚಾಲೆಂಜ್!
ಜಸ್ಪ್ರೀತ್ ಬೂಮ್ರಾ.. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್.. ಯಾರ್ಕರ್ಗಳ ಮೂಲಕವೇ ಎದುರಾಳಿಗೆ ದಂಗುಬಡಿಸುವ ಜಸ್ಪ್ರೀತ್ ಬೂಮ್ರಾ, ಟೀಮ್ ಇಂಡಿಯಾದ ಮೇನ್ ವೆಪನ್. ಇದೀಗ ನಾಯಕನಾಗಿ ಕಮ್ಬ್ಯಾಕ್ ಮಾಡಿರುವ ಜಸ್ಪ್ರೀತ್, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಬೂಮ್ರಾ ಪುನರಾಗಮನ ಗುಡ್ನ್ಯೂಸ್ ಎನಿಸಿದರೂ, ಇದೇ ಕಮ್ಬ್ಯಾಕ್ ತಂಡದಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಇದಕ್ಕೆಲ್ಲಾ ಕಾರಣ ಬೂಮ್ರಾರ ಇಂಜುರಿ ಕಥೆ.
ಹೌದು! 2022ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದ ಬೂಮ್ರಾ, ಟೀಮ್ ಇಂಡಿಯಾದಿಂದಲೇ ಹೊರಬಿದ್ದಿದ್ರು. ಈ ಬಳಿಕ ಬೂಮ್ರಾ ವಿಚಾರದಲ್ಲಿ ಅಕ್ಷರಶಃ ನಡೆದಿದ್ದು ಕಣ್ಣಮುಚ್ಚಾಲೆ ಆಟ. ಇದೀಗ ಇದೇ ಎಲ್ಲರ ಆತಂಕಕ್ಕೆ ಕಾರಣ.
ಎಲ್ಲರ ಚಿತ್ತ ಜಸ್ಪ್ರೀತ್ ಬೂಮ್ರಾ ಮೇಲೆ..!
ಸಾಲು ಸಾಲು ಇಂಜುರಿಯಿಂದ ಮಹತ್ವದ ಸರಣಿಗಳನ್ನ ಮಿಸ್ ಆಗಿದ್ದ ಜಸ್ಪ್ರೀತ್, ಬರೋಬ್ಬರಿ ಒಂದು ವರ್ಷದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ. ಇದು ಸಹಜವಾಗೇ ಬೂಮ್ರಾ ಮೇಲಿನ ಎಕ್ಸ್ಪೆಕ್ಟೇಷನ್ಸ್ ಹೆಚ್ಚಿಸಿದೆ. ಆದರೆ ಇದೇ ವೇಳೆ ಬೂಮ್ರಾ ಸಂಪೂರ್ಣ ಫಿಟ್ ಇದ್ದಾರಾ? ಬೌಲಿಂಗ್ ರಿದಮ್ ಎಷ್ಟರ ಮಟ್ಟಿಗಿದೆ ಎಂಬ ಪ್ರಶ್ನೆ ಕಾಡ ತೊಡಗಿದೆ. ಹೀಗಾಗಿ ಎಲ್ಲರ ಚಿತ್ತ ವೇಗಿ ಬೂಮ್ರಾರ ಮ್ಯಾಚ್ ಫಿಟ್ನೆಸ್ ಮೇಲೆಯೇ ನೆಟ್ಟಿದೆ.
ಬೂಮ್ರಾ ಮುಂದಿದೆ ಸಾಲು ಸಾಲು ಅಗ್ನಿಪರೀಕ್ಷೆ..!
ಒಂದ್ಕಡೆ ಬೂಮ್ರಾ ಮೇಲೆ ಬೆಟ್ಟದಷ್ಟು ಎಕ್ಸ್ಪೆಕ್ಟೇಷನ್ಸ್ ಇದ್ರೆ. ಮತ್ತೊಂದ್ಕಡೆ ಸಾಲು ಸಾಲು ಅಗ್ನಿಪರೀಕ್ಷೆಗಳು ಕ್ಯಾಪ್ಟನ್ ಬೂಮ್ರಾಗೆ ಮುಂದಿದೆ. ಅದರಲ್ಲೂ ಮುಂದಿನ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ದೃಷ್ಟಿಯಿಂದ ಬೂಮ್ರಾ ಟೀಮ್ ಇಂಡಿಯಾಗೆ ಅನಿವಾರ್ಯ. ಯಾಕಂದ್ರೆ ಟೀಮ್ ಇಂಡಿಯಾದ ಮೇನ್ ವೆಪನ್ ಬೂಮ್ರಾ. ಹೀಗಾಗಿ ವೇಗಿ ಜಸ್ಪ್ರೀತ್ ಬೂಮ್ರಾ ಇಂಜರಿಯಿಂದ ಅಂತರಕಾಯ್ದುಕೊಳ್ಳಬೇಕು. ಇಲ್ದಿದ್ರೆ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.
ಬೂಮ್ರಾಗೆ ಮಾತ್ರವಲ್ಲ.. ಪ್ರಸಿದ್ದ್ ಕೃಷ್ಣಗೂ ಚಾಲೆಂಜ್..!
ಯೆಸ್.. ಜಸ್ಪ್ರೀತ್ ಬೂಮ್ರಾಗೆ ಮಾತ್ರವಲ್ಲ. ಕನ್ನಡಿಗ ಪ್ರಸಿದ್ಧ್ ಕೃಷ್ಣಗೂ ಈ ಸರಣಿ ಮಹತ್ವದ್ದಾಗಿದೆ. ಯಾಕಂದ್ರೆ, ಬೂಮ್ರಾರಂತೆಯೇ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಏಕದಿನ ವಿಶ್ವಕಪ್ ಟೂರ್ನಿಯ ಸ್ಟ್ರಾಂಗ್ ಕಂಟೇಟರ್. ಇದೇ ಕಾರಣಕ್ಕೆ ಐರ್ಲೆಂಡ್ ಪ್ರವಾಸಕ್ಕೆ ಕಳುಹಿಸಿರುವ ಸೆಲೆಕ್ಷನ್ ಕಮಿಟಿ, ಉತ್ತಮ ಪ್ರದರ್ಶನದ ಆದಾರದ ಮೇಲೆ ವಿಶ್ವಕಪ್ ಟಿಕೆಟ್ ನೀಡುವ ಲೆಕ್ಕಚಾರದಲ್ಲಿದೆ. ಹೀಗಾಗಿ ಪ್ರಸಿದ್ಧ್ ಟಿ20ಯ ಡೆಬ್ಯೂ ಸಿರೀಸ್ನಲ್ಲಿ ಅದ್ಭುತ ಪ್ರದರ್ಶನದ ನೀಡಬೇಕಿದೆ.
ಮತ್ತೆ ಕೋಲು ಕೊಟ್ಟು ಹೊಡೆಸಿಕೊಳ್ಳುವಂತಾಗುತ್ತಾ?
ಈ ಹಿಂದೆ ಟಿ-20 ವಿಶ್ವಕಪ್ ಆರಂಭಕ್ಕೂ ಮುನ್ನ ಆಸಿಸ್ ವಿರುದ್ಧದ ಟಿ20 ಸರಣಿಯಲ್ಲಿ ಚಾನ್ಸ್ ಪಡೆದಿದ್ದ ಬೂಮ್ರಾ 2 ಪಂದ್ಯಗಳಿಂದ ಜಸ್ಟ್ 6 ಓವರ್ ಎಸೆಯುವಷ್ಟರಲ್ಲಿ ಇಂಜುರಿಗೆ ತುತ್ತಾಗಿ ಹೊರಬಿದ್ದಿದ್ರು. ಪರಿಣಾಮ ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಬೆಲೆ ತೆತ್ತಿತ್ತು. ಇದೀಗ ಮತ್ತೆ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ಗೂ ಮುನ್ನ ಅದೇ ರೀತಿ ಬೂಮ್ರಾಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಬಹು ದಿನಗಳ ಬಳಿಕ ಅಂಗಳಕ್ಕಿಳಿಯುತ್ತಿದ್ದಾರೆ.
ಬೌಲಿಂಗ್ ಜೊತೆಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಈ ಹೆಚ್ಚುವರಿ ವರ್ಕ್ಲೋಡ್ ಬೂಮ್ರಾ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಇದು ಮತ್ತೆ ಟೀಮ್ ಇಂಡಿಯಾ ಹೊಡೆತ ನೀಡಿದರೂ ಅಚ್ಚರಿ ಇಲ್ಲ. ಹೀಗಾಗಿ ಇಂಜುರಿ ಬಳಿಕ ತಂಡ ಸೇರಿರುವ ಬೂಮ್ರಾ ಹಾಗೂ ಪ್ರಸಿದ್ಧ್ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದ್ದೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ