ದೇಶದಲ್ಲಿ ವಿಶ್ವಕಪ್ ಫೀವರ್, ‘ಹಂಗೆ-ಹಿಂಗೆ’ ಚರ್ಚೆ ಜೋರು
ಯಾರಿಗೆ ಚಾನ್ಸ್? ಯಾರಿಗೆಲ್ಲಾ ಕೊಕ್? ಆಯ್ಕೆ ಕಠಿಣ..!
ವಿಶ್ವಕಪ್ ಬಳಿಕ ಕೋಚ್ ಹುದ್ದೆಗೆ ದ್ರಾವಿಡ್ ಗುಡ್ಬೈ?
ನೂತನ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ಗೆ ಅಸಲಿ ಚಾಲೆಂಜ್ ಎದುರಾಗಿದೆ. ಈ ಚಾಲೆಂಜ್ ಗೆಲ್ಲೋದು ಅಷ್ಟು ಸುಲಭವಿಲ್ಲ. ಅದಕ್ಕಾಗಿ ಎರಡೂವರೆ ತಿಂಗಳಿಗೂ ಮುನ್ನವೇ ಅಖಾಡಕ್ಕೆ ಧುಮುಕಿದ್ದಾರೆ. ಆದ್ರೆ ಅಖಾಡ ಅವರು ಅಂದುಕೊಂಡಿದ್ದಕ್ಕಿಂತ ಕಷ್ಟಕರವಾಗಿದೆ.
ಬಹುನಿರೀಕ್ಷಿತ ಏಕದಿನ ವಿಶ್ವಕಪ್ಗೆ ಕೌಂಟ್ಡೌನ್ ಶುರುವಾಗಿದೆ. ಅಕ್ಟೋಬರ್ 5 ರಿಂದ ಕ್ರಿಕೆಟ್ ಮಹಾಜಾತ್ರೆ ನಡೆಯಲಿದ್ದು, ಸಿದ್ಧತೆ ಜೋರಾಗಿದೆ. ದಶಕದಿಂದ ಐಸಿಸಿ ಟ್ರೋಫಿ ಕನಸು ಕಾಣಿಸ್ತಿರೋ ಬಿಸಿಸಿಐ, ಮಹಾ ಸಮರದಲ್ಲಿ ಬಲಾಢ್ಯ ಟೀಮ್ ಇಂಡಿಯಾವನ್ನು ಕಣಕ್ಕಿಳಿಸಲು ಸದ್ದಿಲ್ಲದೇ ತಯಾರಿ ಆರಂಭಿಸಿದೆ.
ವಿಶ್ವಕಪ್ಗೆ ತಂಡ ಪ್ರಕಟಿಸಲು ಸೆ.5 ಡೆಡ್ಲೈನ್
ಏಕದಿನ ವಿಶ್ವಕಪ್ ಸಮೀಪಿಸಿದ ಬೆನ್ನಲ್ಲೇ ಅಂತಿಮ ತಂಡವನ್ನ ಕಳುಹಿಸಲು ಐಸಿಸಿ ಡೆಡ್ಲೈನ್ ನೀಡಿದೆ. ಸೆಪ್ಟೆಂಬರ್ 5 ರ ಒಳಗಾಗಿ 20 ಆಟಗಾರರ ಅಂತಿಮ ಪಟ್ಟಿಯನ್ನು ಐಸಿಸಿಗೆ ನೀಡಬೇಕಿದೆ. ಇದಕ್ಕೆ ಉಳಿದಿರೋದು ಇನ್ನು ಜಸ್ಟ್ 45 ದಿನ ಮಾತ್ರ. ಅಷ್ಟರೊಳಗೆ ಆಯ್ಕೆ ಸಮಿತಿ ವಿಶ್ವಕಪ್ಗೆ ಟೀಮ್ ಇಂಡಿಯಾವನ್ನು ಸಜ್ಜುಗೊಳಿಸಬೇಕಿದ್ದು, ದೊಡ್ಡ ಸವಾಲು ಎದುರಾಗಿದೆ.
ವಿಶ್ವಕಪ್ ಆಡುವ ರೇಸ್ನಲ್ಲಿ 47 ಪ್ಲೇಯರ್ಸ್..!
ವಿಶ್ವಕಪ್ಗೆ ತಂಡವನ್ನ ಸೆಲೆಕ್ಟ್ ಮಾಡೋದು ಆಯ್ಕೆ ಸಮಿತಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾಕಂದ್ರೆ ಕಳೆದ ಕೆಲ ವರ್ಷಗಳಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ ಆಟಗಾರರ ಪಟ್ಟಿಯನ್ನ ಬಿಸಿಸಿಐ ಸಿದ್ಧಪಡಿಸಿದೆ. ಆ ಪೈಕಿ 2019 ಒನ್ಡೇ ವಿಶ್ವಕಪ್ ಬಳಿಕ 47 ಆಟಗಾರರು ಕಾಣಿಸಿಕೊಂಡಿದ್ದಾರೆ.
ಈ 47 ಆಟಗಾರರಲ್ಲಿ ವಿಶ್ವಕಪ್ಗೆ ಅಂತಿಮವಾಗಿ ಆಯ್ಕೆ ಆಗೋದು ಬರೀ 15 ಪ್ಲೇಯರ್ಸ್ ಮಾತ್ರ. ಇವರ ಜೊತೆ ಐವರು ಸ್ಟ್ಯಾಂಡ್ ಬೈ ಆಟಗಾರರು ಇರಲಿದ್ದಾರೆ. ಆದರೆ 47 ಜನರಲ್ಲಿ ಅಂತಿಮ 20 ರ ತಂಡವನ್ನ ಕಟ್ಟುವುದು ನಿಜಕ್ಕೂ ತೀರಾ ಕಷ್ಟದ ಕೆಲಸ. ಅಳೆದು ತೂಗಿ ವಿಶ್ವಕಪ್ ಗೆಲ್ಲಿಸಿಕೊಡುವ ಕೆಪಾಸಿಟಿ ಇರುವ ಆಟಗಾರರನ್ನ ಆಯ್ಕೆ ಮಾಡಬೇಬೇಕಿದೆ. ಹೀಗಾಗಿನೇ ನೂತನ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವೆಸ್ಟ್ ಇಂಡೀಸ್ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಕ್ಯಾಪ್ಟನ್ ರೋಹಿತ್ ಹಾಗೂ ಹೆಡ್ಕೋಚ್ ದ್ರಾವಿಡ್ ಅವರ ಜೊತೆ ಚರ್ಚಿಸಿ ವಿಶ್ವಕಪ್ಗಾಗಿ 20 ಆಟಗಾರರ ಶಾರ್ಟ್ ಲಿಸ್ಟ್ ತಯಾರಿ ರೆಡಿ ಮಾಡಲಿದ್ದಾರೆ.
ಆಯ್ಕೆಯಾದ 20 ಪ್ಲೇಯರ್ಸ್ ಫುಲ್ ಫಿಟ್ ಆಗಿರ್ತಾರಾ?
ಆಯ್ಕೆ ಸಮಿತಿ ಏಕದಿನ ವಿಶ್ವಕಪ್ಗೆ 20 ಸದಸ್ಯರ ತಂಡವನ್ನ ಆಯ್ಕೆ ಮಾಡಿದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಗಲ್ಲ. ಯಾಕಂದ್ರೆ ಇಂಜುರಿಯಿಂದ ಬಳಲುತ್ತಿರುವ ಕೀ ಪ್ಲೇಯರ್ಗಳಾದ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಹಾಗೇನಾದ್ರು ಮ್ಯಾಚ್ ವಿನ್ನರ್ಸ್ ವಿಶ್ವಕಪ್ ಆಡಿದ್ರೆ ಮತ್ತೆ ಇಂಜುರಿಗೆ ತುತ್ತಾಗುವ ಸಾಧ್ಯತೆಯನ್ನ ಅಲ್ಲಗಳೆಯುವಂತಿಲ್ಲ. ಈ ವಿಚಾರವನ್ನ ಆಯ್ಕೆ ಸಮಿತಿ ಹೇಗೆ ನಿಭಾಯಿಸುತ್ತೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಇದರ ಜೊತೆ ವರ್ಕ್ಲೋಡ್ ಹಾಗೂ ಯಂಗ್ಸ್ಟರ್ಸ್ಗಳಲ್ಲಿ ಯಾರಿಗೆಲ್ಲಾ ಚಾನ್ಸ್ ನೀಡ್ಬೇಕು ಅನ್ನೋದು ಆಯ್ಕೆ ಸಮಿತಿಗೆ ಕಗ್ಗಂಟಾಗಿ ಪರಿಣಮಿಸಿದೆ. ಇಶಾನ್ ಕಿಶನ್, ಶುಭ್ಮನ್ ಗಿಲ್ ಸೇರಿದಂತೆ ಹಲವರು ವಿಶ್ವಕಪ್ ರೇಸ್ನಲ್ಲಿದ್ದಾರೆ. ಇವರನ್ನ ಕೈ ಬಿಟ್ಟು ಬರೀ ಅನುಭವಿಗಳಿಗೆ ಮಣೆ ಹಾಕ್ತಾರಾ ? ಇಲ್ಲ ಹಿರಿಯ-ಕಿರಿಯರ ಒಗ್ಗೂಡಿಸಿ ಬ್ಯಾಲೆನ್ಸ್ಡ್ ತಂಡವನ್ನ ಕಟ್ಟಬೇಕಾ ಅನ್ನೋದು ಆಯ್ಕೆ ಸಮಿತಿ ಮುಂದಿರೋ ದೊಡ್ಡ ಚಾಲೆಂಜ್ ಆಗಿದೆ.

ಟೀಮ್ ಇಂಡಿಯಾ ಈ ಬಾರಿ ವಿಶ್ವಕಪ್ ಗೆಲ್ಲಲಿ ಅಥವಾ ಬಿಡಲಿ. ರಾಹುಲ್ ದ್ರಾವಿಡ್ ಹೆಡ್ಕೋಚ್ ಹುದ್ದೆಯಲ್ಲಿ ಮುಂದುವರಿಯಲ್ಲ. ಈಗಾಗ್ಲೇ ದ್ರಾವಿಡ್ ಅವರ ಕಾಂಟ್ರಾಕ್ಟ್ ಅವಧಿ ಮುಗಿದಿದೆ. ಮತ್ತೆ ಮುಂದುವರಿಯುವ ಸಾಧ್ಯತೆ ಕಮ್ಮಿ ಎನ್ನಲಾಗ್ತಿದೆ. ಹಾಗೊಂದು ವೇಳೆ ದ್ರಾವಿಡ್ ಹೆಡ್ಕೋಚ್ ಹುದ್ದೆಗೆ ಗುಡ್ಬೈ ಹೇಳಿದ್ರೆ, ಉತ್ತರಾಧಿಕಾರಿ ಯಾರಾಗ್ತಾರೆ ? ಭಾರತದವರೇ ಹೆಡ್ಕೋಚ್ ಹುದ್ದೇಗೇರ್ತಾರಾ ? ಇಲ್ಲ ಫಾರಿನ್ ವ್ಯಕ್ತಿ ಕೋಚ್ ಆಗ್ತಾರಾ ? ಅನ್ನೋದು ಉತ್ತರವಿಲ್ಲದ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್