newsfirstkannada.com

ಅನುಷ್ಕಾ ಶೆಟ್ಟಿ ಫ್ಯಾನ್ಸ್​ಗೆ ಭಾರೀ ನಿರಾಸೆ ಆಗಿದ್ದೇಕೆ..? ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

Share :

30-07-2023

    ಮಲಯಾಳಂ ಪೃಥ್ವಿರಾಜ್ ಸುಕುಮಾರನ್ ಜತೆ ಹ್ಯಾಟ್ರಿಕ್ ಹೀರೋ

    ಹ್ಯಾಕ್ ಆಗಿದ್ದ ಡಾರ್ಲಿಂಗ್​ ಪ್ರಭಾಸ್ ಫೇಸ್​ಬುಕ್ ಖಾತೆ ವಾಪಸ್

    ಜ್ಯೂನಿಯರ್ ಎನ್​ಟಿಆರ್​ RRR ಸಿನಿಮಾಗೆ ಜಪಾನ್ ಮಿನಿಸ್ಟರ್​ ಫಿದಾ

ಮತ್ತೊಂದು ಸೌತ್ ಚಿತ್ರದಲ್ಲಿ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಮತ್ತೊಂದು ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ನಂತರ ಧ್ರುವ ಸರ್ಜಾ ಜೊತೆ ಕೆ.ಡಿ ಸಿನಿಮಾ ಮಾಡ್ತಿರೋ ದತ್, ತಮಿಳಿನಲ್ಲಿ ವಿಜಯ್ ನಟನೆಯ ಲಿಯೋ ಚಿತ್ರದಲ್ಲೂ ಆ್ಯಕ್ಟ್​ ಮಾಡ್ತಿದ್ದಾರೆ. ಈಗ ಪುರಿ ಜಗನ್ನಾಥ್ ನಿರ್ದೇಶನದ ಡಬಲ್ ಇಸ್ಮಾರ್ಟ್ ಶಂಕರ್ ಚಿತ್ರದಲ್ಲೂ ಅಭಿನಯಿಸ್ತಿದ್ದು, ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್​ ಲುಕ್ ಪೋಸ್ಟರ್​ ಬಿಡುಗಡೆಯಾಗಿದೆ.

ಮಲಯಾಳಂ ಸ್ಟಾರ್​ ಜೊತೆ ಶಿವಣ್ಣ?

ಸ್ಯಾಂಡಲ್​ವುಡ್​ ಸೂಪರ್​ಸ್ಟಾರ್​ ಶಿವರಾಜ್ ಕುಮಾರ್ ಮತ್ತೊಂದು ಪರಭಾಷೆ ಚಿತ್ರಕ್ಕೆ ಅಸ್ತು ಎಂದಿದ್ದಾರೆ ಎನ್ನಲಾಗಿದೆ. ರಜಿನಿಕಾಂತ್ ಜೊತೆ ಜೈಲರ್ ಹಾಗೂ ಧನುಶ್ ಜೊತೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ನಟಿಸಿರುವ ಶಿವಣ್ಣ ಈಗ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಜೊತೆ ಸ್ಕ್ರೀನ್ ಶೇರ್ ಮಾಡುವ ಸಾಧ್ಯತೆ ಇದೆಯಂತೆ.

ಜಪಾನ್ ಮಿನಿಸ್ಟರ್ ನೆಚ್ಚಿನ ನಟ NTR!

ವಿಶ್ವದಾದ್ಯಂತ ಭಾರೀ ಮೆಚ್ಚುಗೆ ಗಳಿಸಿಕೊಂಡ RRR ಸಿನಿಮಾಗೆ ಈಗ ಜಪಾನ್ ಮಿನಿಸ್ಟರ್​ ಸಹ ಫಿದಾ ಆಗಿದ್ದಾರೆ. ರಿಸೆಂಟ್​ ಆಗಿ ತ್ರಿಬಲ್ ಆರ್ ಸಿನಿಮಾ ನೋಡಿರುವ ಜಪಾನ್ ವಿದೇಶಾಂಗ ಸಚಿವ ಯಶೊಮಸ ಹಯೋಸಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಜ್ಯೂನಿಯರ್ ಎನ್​ಟಿಆರ್​ ನನ್ನ ನೆಚ್ಚಿನ ನಟ ಎಂದಿದ್ದಾರೆ.

ಅನುಷ್ಕಾ ಶೆಟ್ಟಿ ಫ್ಯಾನ್ಸ್​ಗೆ ನಿರಾಸೆ

ಅನುಷ್ಕಾ ಶೆಟ್ಟಿ ಸಿನಿಮಾ ನೋಡಬೇಕು ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. 2020ರ ನಂತರ ಅನುಷ್ಕಾ ನಟನೆಯ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಇದೀಗ ನವೀನ್ ಪೊಲಿಶೆಟ್ಟಿ ಜೊತೆ ನಟಿಸಿರುವ ಮಿಸ್ ಶೆಟ್ಟಿ ಮಿಸಸ್ ಪೋಲಿಶೆಟ್ಟಿ ಸಿನಿಮಾ ಆಗಸ್ಟ್​ 4ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ ಚಿತ್ರದ ಪೋಸ್ಟ್​ ಪ್ರೊಡಕ್ಷನ್ ಕೆಲಸ ಪೂರ್ಣವಾಗದ ಕಾರಣ ಸಿನಿಮಾ ಮುಂದಕ್ಕೆ ಹೋಗಿದ್ದು, ಅನುಷ್ಕಾ ಅಭಿಮಾನಿಗಳಿಗೆ ನಿರಾಸೆಯಾಗಿದ್ದಾರೆ.

ಪ್ರಭಾಸ್​ ಫೇಸ್​ಬುಕ್ ಖಾತೆ ವಾಪಸ್

ಹಾಕ್ ಆಗಿದ್ದ ಡಾರ್ಲಿಂಗ್​ ಪ್ರಭಾಸ್ ಅವರ ಫೇಸ್​ಬುಕ್ ಖಾತೆ ವಾಪಸ್ ಆಗಿದೆ. ಎರಡು ದಿನಗಳ ಹಿಂದೆ ನಟ ಪ್ರಭಾಸ್​ ಎಫ್​ಬಿ ಅಕೌಂಟ್ ಹ್ಯಾಕ್ ಆಗಿ ಕೆಲವು ಅನಿರೀಕ್ಷಿತ ಪೋಸ್ಟ್​ಗಳು ಅಪ್​ಲೌಡ್​ ಆಗಿತ್ತು. ಕೂಡಲೇ ಎಚ್ಚೆತ್ತುಕೊಂಡಿದ್ದ ಡಾರ್ಲಿಂಗ್​ ಫೇಸ್​ಬುಕ್ ಖಾತೆ ಹ್ಯಾಕ್ ಆಗಿದೆ ಎಂದು ಪ್ರಕಟಿಸಿದ್ದರು. ಇದೀಗ ಪ್ರಭಾಸ್ ಅವರ ಫೇಸ್​ಬುಕ್ ಅಕೌಂಟ್​ ವಾಪಸ್ ಆಗಿದ್ದು, ಸಲಾರ್ ಫೋಟೋ ಕವರ್ ಪೇಜ್​ಗೆ ಅಪ್ಡೇಟ್​ ಆಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಅನುಷ್ಕಾ ಶೆಟ್ಟಿ ಫ್ಯಾನ್ಸ್​ಗೆ ಭಾರೀ ನಿರಾಸೆ ಆಗಿದ್ದೇಕೆ..? ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

https://newsfirstlive.com/wp-content/uploads/2023/07/anushka-1.jpg

Load More