/newsfirstlive-kannada/media/post_attachments/wp-content/uploads/2023/11/bigg-boss-2023-11-15T174301.183.jpg)
ಬಿಗ್​ಬಾಸ್​ ಆಟ ಶುರುವಾಗಿ ಈಗಾಗಲೇ ಎರಡು ತಿಂಗಳು ಹತ್ತತ್ರ ಬಂದಿದೆ. ಇಷ್ಟು ದಿನ ಮನೆಯವರಿಂದ ದೂರ ಇರೋ ಸ್ಪರ್ಧಿಗಳಿಗೆ ಬಿಗ್​ಬಾಸ್​ ಸುವರ್ಣ ಅವಕಾಶ ಕಲ್ಪಿಸಿದೆ. ಹೌದು, ಕುಟುಂಬದಿಂದ ದೂರ ಇರುವ ಬಿಗ್​ ಮಂದಿಗೆ ಮನೆಯವರ ಬಗ್ಗೆ ತಿಳಿದುಕೊಳ್ಳೋಕೆ ಬಿಗ್​ಬಾಸ್​ ಟಾಸ್ಕ್​​ವೊಂದನ್ನು​ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2023/11/bigg-boss-2023-11-15T174000.444.jpg)
ಮೂವರು ಸ್ಪರ್ಧಿಗಳಿಗೆ ಪತ್ರ ಪಡೆಯೋ ಅವಕಾಶ ಇದ್ದು, ಆ ಮೂವರನ್ನ ಮನೆಯವರು ಚರ್ಚಿಸಿ ಸೂಚಿಸಬೇಕು. ಈ ಅವಕಾಶವನ್ನು ಪಡೆಯೋದು ಅಷ್ಟು ಸುಲಭವಲ್ಲ. 6 ಆಟವನ್ನು ಕಂಪ್ಲೀಟ್​ ಮಾಡಿದ ಮೂವರಿಗೆ ಈ ಅವಕಾಶ ಸಿಗಲಿದೆ. ಬಿಗ್​ಬಾಸ್​​ ಮನೆಯಲ್ಲಿರೋ ಸ್ಪರ್ಧಿಗಳು ಪತ್ರ ಪಡೆಯೋಕೆ ಹೋರಾಟ ಶುರು ಮಾಡಿಕೊಂಡಿದ್ದಾರೆ. ಈ ನಡುವೆ ತನಿಶಾ ಮೇಲೆ ವಿನಯ್​ ಗರಂ ಆಗಿದ್ದಾರೆ.
View this post on Instagram
ಟಾಸ್ಕ್​ ಕಂಪ್ಲೀಟ್​ ಮಾಡಬೇಕಾದರೇ ತಮ್ಮಿಂದ ಸಾಧ್ಯವಾಗಲಿಲ್ಲ ಅಂದ್ರೆ ಅದನ್ನು ಬೇರೆಯರಿಗೆ ಪಾಸ್​ ಮಾಡಬಹುದು. ಅಲ್ಲಿ ಕುಳಿತುಕೊಂಡಿದ್ದ ಎಲ್ಲರೂ ಪಾಸ್​ ಮಾಡಿ, ತನಿಶಾ ಪಾಸ್​ ಮಾಡಿ ಅಂತಾ ಕೇಳಿಕೊಳ್ಳುತ್ತಾರೆ. ಆದರೆ ತನಿಶಾ ಅವರು ಆಟವನ್ನ ಮುಂದುವರೆಸುತ್ತಾರೆ. ಇದು ವಿನಯ್​ ಅವರನ್ನ ಕೆರಳಿಸಿದೆ. ಆಟ ಆಡೋಕೆ ಆಗಲಿಲ್ಲ ಅಂದ್ರೆ ಬರ್ಬೇಕು. ಕಾಮನ್​ ಸೆನ್ಸ್​ ಇಲ್ವಾ ಎಂದು ತನಿಶಾ ವಿರುದ್ಧ ಹರಿಹಾಯ್ದಿದ್ದಾರೆ ವಿನಯ್​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us