ಉತ್ತರ ಕೊರಿಯಾದಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೋಪಕ್ಕೆ ಕಾರಣ ಏನು?
ಕಿಮ್ ಜಾಂಗ್ ಉನ್ ನಿರ್ಧಾರಕ್ಕೆ ಬೆಚ್ಚಿಬಿದ್ದ ಇಡೀ ಜಗತ್ತು
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (Kim Jong Un ) ಮತ್ತೆ ಸುದ್ದಿಯಲ್ಲಿದ್ದಾರೆ. ತನ್ನ ದೇಶದ 30 ಹಿರಿಯ ಅಧಿಕಾರಿಗಳನ್ನು ಗಲ್ಲಿಗೇರಿಸಿದ್ದಾನೆ ಎಂದು ದಕ್ಷಿಣ ಕೊರಿಯಾ ಮಾಧ್ಯಮಗಳು ವರದಿ ಮಾಡಿವೆ.
30 ಅಧಿಕಾರಿಗಳ ಮೇಲೆ ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಕೆರಳಿದ್ದಾನೆ. ಅದಕ್ಕೆ ಕಾರಣ ಭೀಕರ ಪ್ರವಾಹದಿಂದ ದೇಶವನ್ನು ಉಳಿಸಲು ಅವರಿಗೆ ಸಾಧ್ಯವಾಗಲಿಲ್ಲ ಅನ್ನೋದು. ಇತ್ತೀಚೆಗೆ ರಣ ಭೀಕರ ಮಳೆ ಹಾಗೂ ಭೂಕುಸಿತದಿಂದ ಉತ್ತರ ಕೊರಿಯಾ ತತ್ತರಿಸಿತ್ತು. ಅದರಲ್ಲೂ ಚಾಂಗಾಂಗ್ ಪ್ರಾಂತ್ಯದ ಹಲವು ಭಾಗಗಳನ್ನು ಧ್ವಂಸಗೊಂಡಿತ್ತು. ಪರಿಣಾಮ ಸುಮಾರು 4000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಜನರ ಸಾವಿಗೆ ಕಾರಣವಾಗಿರುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ನೀಡಲು ಆದೇಶಿಸಿದ್ದಾನೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಿರ್ಧಾರಕ್ಕೆ ಇಡೀ ಜಗತ್ತು ಬೆಚ್ಚಿಬಿದ್ದಿದೆ.
ಇದನ್ನೂ ಓದಿ:12 ವರ್ಷದಿಂದ ಈತನ ನಿದ್ರೆ ದಿನಕ್ಕೆ ಕೇವಲ 30 ನಿಮಿಷ.. ನೀ ಮಾಯೆಯೊಳಗೊ ನಿದ್ದೆ ಮಾಯೆ ನಿನ್ನೊಳಗೊ..!
ಈ ದುರಂತದಲ್ಲಿ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲು ಸಾಧ್ಯವಾಗದ ಅಧಿಕಾರಿಗಳನ್ನು ಶಿಕ್ಷಿಸುವಂತೆ ತಿಳಿಸಿದ್ದಾನೆ. ಕಳೆದ ತಿಂಗಳು ಕೂಡ ಕೆಲವರನ್ನು ಇದೇ ಶಿಕ್ಷೆಗೆ ಗುರಿಪಡಿಸಲಾಗಿತ್ತು ಎಂದು ಹೇಳಲಾಗಿದೆ. ಈ ಬಾರಿ ಉತ್ತರ ಕೊರಿಯಾದಲ್ಲಿ ವಿನಾಶಕಾರಿ ಪ್ರವಾಹ ಬಂದಿದೆ. ಭಾರೀ ಮಳೆ ಮತ್ತು ಭೂಕುಸಿತಕ್ಕೆ 4000 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ದುರಂತದ ನಂತರ ಕಿಮ್ ಜಾಂಗ್ ಸ್ವತಃ ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ್ದರು. ಅದರ ಕೆಲವು ವಿಡಿಯೋಗಳು ಕೂಡ ವೈರಲ್ ಆಗಿದ್ದವು.
ಕೆಲವು ಭಾಗದಲ್ಲಿ ತುರ್ತು ಪರಿಸ್ಥಿತಿ
ಮಕ್ಕಳು, ವೃದ್ಧರು ಮತ್ತು ಅಂಗವಿಕಲರು ಸೇರಿದಂತೆ 15,400 ಕ್ಕೂ ಹೆಚ್ಚು ಮಂದಿಯ ರಕ್ಷಣೆ ಆಗಿದೆ. ಪ್ರವಾಹ ಪೀಡಿತ ಪ್ರದೇಶಗಳು ಸಹಜ ಸ್ಥಿತಿಗೆ ಮರಳಲು 3 ತಿಂಗಳವರೆಗೆ ಬೇಕಾಗುತ್ತದೆ ಎಂದು ಸುಪ್ರೀಂ ಲೀಡರ್ ಹೇಳಿದ್ದಾನೆ. ಅದೇ ಕಾರಣಕ್ಕೆ ಉತ್ತರ ಕೊರಿಯಾದ ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಹಿಂದೆ, ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 1000-1500 ಕ್ಕಿಂತ ಹೆಚ್ಚು ಎಂದು ನಿರೀಕ್ಷಿಸಲಾಗಿತ್ತು. ಅದಕ್ಕೆ ಕಿಮ್ ಜಾಂಗ್ ಉನ್ ಆಕ್ಷೇಪಿಸಿದ್ದ. ನಂತರ ಅವರೇ ಪರಿಶೀಲಿಸಿದಾಗ ನಿಜವಾದ ಅಂಕಿ-ಅಂಶಗಳು ಹೊರಬಂದವು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ