newsfirstkannada.com

ಚಾಂಪಿಯನ್ ಕೋಚ್‌ಗೆ ಬಿಗ್ ಆಫರ್‌.. RCB ಬಿಟ್ಟು ಬೇರೆ IPL ತಂಡಕ್ಕೆ ಹೋಗ್ತಾರಾ ರಾಹುಲ್ ದ್ರಾವಿಡ್‌?

Share :

Published July 10, 2024 at 1:45pm

    ತಂಡದ ಮೆಂಟರ್​ ಅಥವಾ ಹೆಡ್​ ಕೋಚ್​ ಆಗಲು ಡಿಮ್ಯಾಂಡ್

    ಟೀಮ್​ ಇಂಡಿಯಾದಲ್ಲಿ ಸಿಗ್ತಿದ್ದ ವೇತನಕ್ಕಿಂತ ಹೆಚ್ಚು ಆಫರ್‌!

    ತವರಿನ ತಂಡದ ಕೋಚ್ ಹುದ್ದೆಗೇರ್ತಾರಾ ಮಾಜಿ ನಾಯಕ?

ವಿಶ್ವಕಪ್​ ವಿನ್ನಿಂಗ್​ ಕೋಚ್​ ಕನ್ನಡಿಗ ರಾಹುಲ್​ ದ್ರಾವಿಡ್​ಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್​ ಕ್ರಿಯೇಟ್​ ಆಗಿದೆ. ಟೀಮ್​ ಇಂಡಿಯಾದಲ್ಲಿ ವಾರ್ಷಿಕವಾಗಿ ಸಿಗ್ತಿದ್ದ ವೇತನಕ್ಕಿಂತ ಹೆಚ್ಚು ಹಣವನ್ನ 3 ತಿಂಗಳ ಕೆಲಸಕ್ಕೆ ಕೊಡಲು IPL ತಂಡವೊಂದು ಮುಂದೆ ಬಂದಿದೆ. ಆ ಫ್ರಾಂಚೈಸಿ ಯಾವುದು? ಆಫರ್​ ಮಾಡಿರೋ ಅಮೌಂಟ್​ ಎಷ್ಟು ಗೊತ್ತಾ?

ಚುಟುಕು ವಿಶ್ವಕಪ್​ ಅಂತ್ಯದ ಬೆನ್ನಲ್ಲೇ, ಟೀಮ್​ ಇಂಡಿಯಾದ ಜೊತೆಗಿನ ಕೋಚ್​​ ರಾಹುಲ್​ ದ್ರಾವಿಡ್​ರ​​ ನಂಟು ಅಂತ್ಯವಾಗಿದೆ. ಆಟಗಾರನಾಗಿ, ನಾಯಕನಾಗಿ ಸಾಧಿಸಲಾಗದ್ದನ್ನ, ಕೊನೆಗೂ ಕೋಚ್​ ಆಗಿ ರಾಹುಲ್​ ದ್ರಾವಿಡ್​​ ಸಾಧಿಸಿದ್ದಾರೆ. T20 ವಿಶ್ವಕಪ್​ ವಿನ್ನಿಂಗ್​​ ಕೋಚ್​ ಎಂಬ ಹೆಗ್ಗಳಿಕೆ ಪಡೆದು ಟೀಮ್​ ಇಂಡಿಯಾ ತೊರೆದಿದ್ದಾರೆ. ಇದ್ರ ಬೆನ್ನಲ್ಲೇ, ದ್ರಾವಿಡ್​ಗೆ​ ಸಿಕ್ಕಾಪಟ್ಟೆ ಡಿಮ್ಯಾಂಡ್​​ ಕ್ರಿಯೇಟ್​ ಆಗಿದೆ.

ಟೀಮ್​ ಇಂಡಿಯಾವನ್ನ ಟಿ20 ಚಾಂಪಿಯನ್​ ಮಾಡಿದ ಬೆನ್ನಲ್ಲೇ ಐಪಿಎಲ್​ ತಂಡಗಳು ದ್ರಾವಿಡ್​ಗೆ​ ಆಫರ್ ಮೇಲೆ ಆಫರ್​​​ ಮಾಡ್ತಿವೆ. ಕೊಲ್ಕತ್ತಾ ನೈಟ್​ ರೈಡರ್ಸ್​ ಫ್ರಾಂಚೈಸಿ, ಬಿಗ್​​ ಆಫರ್​​ ಮಾಡಿರೋ ಸುದ್ದಿ ಇದೀಗ ಹೊರ ಬಿದ್ದಿದೆ.

ಇದನ್ನೂ ಓದಿ: 5 ಕೋಟಿ ಬಹುಮಾನ ಬೇಡ.. 2.5 ಕೋಟಿ ರೂಪಾಯಿ ಮಾತ್ರ ನೀಡಿ.. ದ್ರಾವಿಡ್ ನಿರ್ಧಾರಕ್ಕೆ ಬಿಸಿಸಿಐ ಶಾಕ್..! 

ತಂಡದ ಮೆಂಟರ್​ ಅಥವಾ ಹೆಡ್​ ಕೋಚ್​ ಆಗಲು ದ್ರಾವಿಡ್​ಗೆ ಬರೋಬ್ಬರಿ 15 ಕೋಟಿಯ ಆಫರ್​ ಮಾಡಿದೆ. ಟೀಮ್​ ಇಂಡಿಯಾದ ಹೆಡ್​ಕೋಚ್​ ಆಗಿದ್ದ ವೇಳೆ ದ್ರಾವಿಡ್,​ ವಾರ್ಷಿಕವಾಗಿ 12 ಕೋಟಿ ವೇತನ ಪಡೀತಾ ಇದ್ದರು. ಅದಕ್ಕಿಂತ ಹೆಚ್ಚು ಹಣವನ್ನ 3 ತಿಂಗಳ ಅವಧಿಗೆ ದ್ರಾವಿಡ್​ಗೆ ನೀಡಲು ಕೆಕೆಆರ್​ ಫ್ರಾಂಚೈಸಿ ಮುಂದಾಗಿದೆ. ಹಾಲಿ ಮೆಂಟರ್ ಗೌತಮ್ ಗಂಭೀರ್​​​​ ಟೀಮ್​ ಇಂಡಿಯಾ ಹೆಡ್​ ಕೋಚ್​ ಹುದ್ದೆಗೇರಿದ್ದಾರೆ. ಹೀಗಾಗಿ ನಿರ್ಗಮಿತ ಕೋಚ್​ಗೆ ಕೆಕೆಆರ್​​ ಗಾಳ ಹಾಕಿದೆ.

ತವರಿನ ತಂಡದ ಕೋಚ್ ಹುದ್ದೆಗೇರ್ತಾರಾ?
ಕೆಕೆಆರ್ ಆಫರ್ ಮಧ್ಯೆ ಬೆಂಗಳೂರು ರಾಯಲ್ ಚಾಲೆಂಜರ್ಸ್‌ ಕಡೆಯಿಂದಲೂ ಮಾಜಿ ನಾಯಕನಿಗೆ ಆಫರ್‌ ಇದೆ. ಆ್ಯಂಡಿ ಫ್ಲವರ್​​ ಆರ್​ಸಿಬಿ ತಂಡದ ಹೆಡ್​ಕೋಚ್ ಆದ್ರು ಆರ್​ಸಿಬಿ ಹಣೆಬರಹ ಮಾತ್ರ ಬದಲಾಗ್ಲಿಲ್ಲ. ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್ ಕೂಡ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಆರ್​ಸಿಬಿ ​​ಮೇಜರ್​ ಸರ್ಜರಿ ನಡೆಸ್ತಿದೆ ಎಂದು ಹೇಳಲಾಗ್ತಿದೆ. ಹಾಗೊಂದು ವೇಳೆ ಮಾಡಿದ್ದೆ ಆದ್ರೆ ಚಾಂಪಿಯನ್ ಕ್ಯಾಪ್ಟನ್​​​ ದ್ರಾವಿಡ್​ಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಆರ್​ಸಿಬಿ ಮಾಜಿ ನಾಯಕನಾಗಿರೋ ದ್ರಾವಿಡ್​​​, ತವರಿನ ತಂಡ ಸೇರ್ಪಡೆಗೊಂಡ್ರೆ 2025 ರಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಚಾಂಪಿಯನ್ ಕೋಚ್‌ಗೆ ಬಿಗ್ ಆಫರ್‌.. RCB ಬಿಟ್ಟು ಬೇರೆ IPL ತಂಡಕ್ಕೆ ಹೋಗ್ತಾರಾ ರಾಹುಲ್ ದ್ರಾವಿಡ್‌?

https://newsfirstlive.com/wp-content/uploads/2023/11/RAHUL_DRAVID-1.jpg

Load More