ನವೆಂಬರ್ 15ರಂದು ಪದಗ್ರಹಣದ ಜೊತೆ ಕೇಸರಿ ಬ್ರಿಗೇಡ್ ಮಾಸ್ಟರ್ ಪ್ಲಾನ್
ರಾಮ-ಪಾಂಡವರಿಗೇ ವನವಾಸ ತಪ್ಪಿಲ್ಲ. ನಾನೇನು ದೊಡ್ಡವನಾ; ಸಿ.ಟಿ ರವಿ
ಸವಾಲುಗಳನ್ನ ಮೆಟ್ಟಿ ನಿಂತು ವಿಜಯ ಪತಾಕೆ ಹಾರಿಸ್ತಾರಾ ಬಿಎಸ್‌ವೈ ಪುತ್ರ
ಬೆಂಗಳೂರು: ಬಿಜೆಪಿಯಲ್ಲೀಗ ಹಳೇ ಬೇರು, ಹೊಸ ಚಿಗುರು ಎನ್ನುವಂತೆ ಬಿ.ವೈ ವಿಜಯೇಂದ್ರಗೆ ಕೇಸರಿ ಸೇನೆಯ ಪಟ್ಟ ಕಟ್ಟಲಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ರಫ್ ಅಂಡ್ ಟಫ್ ಕ್ಯಾಂಡಿಡೇಟ್‌ಗೆ ಕೇಸರಿ ಹೈಕಮಾಂಡ್ ಚುಕ್ಕಾಣಿ ನೀಡಿದೆ. ರಾಜ್ಯದಲ್ಲಿ ವಿಜಯ ಪತಾಕೆ ಹಾರಿಸಲು ವಿಜಯೇಂದ್ರಗೆ ಮಣೆ ಹಾಕಿದೆ. ಇದೀಗ ವಿಜಯೇಂದ್ರ ಪಟ್ಟಾಭಿಷೇಕಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.
ಬಿ.ವೈ. ವಿಜಯೇಂದ್ರ ರಾಜ್ಯ ಕೇಸರಿ ಪಡೆಯ ಯಂಗ್ ಗನ್. ರಾಜ್ಯ ಬಿಜೆಪಿಯ ಭೀಷ್ಮ, ಕೇಸರಿ ಕಟ್ಟಾಳು ಯಡಿಯೂರಪ್ಪರ ಪುತ್ರ. ಅವರಂತೆ ವರ್ಚಸ್ಸನ್ನ ಹೊಂದಿರೋ ಕಮಲ ನಾಯಕ. ರಾಜ್ಯದಲ್ಲಿ ಕೇಸರಿ ವಿಜಯ ಪತಾಕೆ ಹಾರಿಸಲು ಯಂಗ್ ಅಂಡ್ ಎನರ್ಜಿಟಿಕ್ ಲೀಡರ್‌ಗೆ ಕಮಲ ಸೇನೆ ಮಣೆ ಹಾಕಿದೆ. ಇದೀಗ ವಿಜಯೇಂದ್ರಗೆ ಪಟ್ಟಾಭಿಷೇಕ ಮಾಡಿ ಲೋಕ ಕದನ ಕಣಕ್ಕೆ ಇಳಿಸಲು ದಿನಾಂಕ ನಿಗದಿಯಾಗಿದೆ.
ನವೆಂಬರ್ 15ಕ್ಕೆ ಬಿ.ವೈ ವಿಜಯೇಂದ್ರಗೆ ಪದಗ್ರಹಣ ಫಿಕ್ಸ್
ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿವೈವಿ ಅಧಿಕಾರ ಸ್ವೀಕಾರ!
ಕೊಟ್ಟ ಜವಾಬ್ದಾರಿಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡ ಶಿಕಾರಿಪುರ ಉತ್ತರಾಧಿಕಾರಿ ವಿಜಯೇಂದ್ರಗೆ ರಾಜ್ಯ ಬಿಜೆಪಿಯ ಚುಕ್ಕಾಣಿ ನೀಡಲಾಗಿದೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಬೆನ್ನಲ್ಲೇ ವಿಜಯೇಂದ್ರ ಆ್ಯಕ್ಟಿವ್ ಆಗಿದ್ದಾರೆ. ಸಂಘಟನೆ ಬಲವರ್ಧನೆ ಉದ್ದೇಶದ ಹಿನ್ನೆಲೆ ಬೂತ್ ಮಟ್ಟದಿಂದಲೇ ಮೊದಲ ಹೆಜ್ಜೆ ಇಟ್ಟಿದ್ದಾರೆ. ಬೆಂಗಳೂರಿನ ಹೃದಯಭಾಗ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಕರ್ತವ್ಯ ಆರಂಭಿಸಿದ್ದಾರೆ. ಇದೀಗ ವಿಜಯೇಂದ್ರ ಅಧಿಕೃತವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನ ಅಲಂಕರಿಸಲು ಶುಭ ಗಳಿಗೆ ಕೂಡಿಬಂದಿದೆ.
ನ.15ಕ್ಕೆ ‘ವಿಜಯ’ ಪದಗ್ರಹಣ
‘ಕೇಸರಿ’ ಸಾರಥಿಯಾಗ್ತಿದ್ದಂತೆ ವಿಜಯೇಂದ್ರ ಮಠ ಮಂಥನ!
ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗ್ತಿದ್ದಂತೆ ಬಿ.ವೈ ವಿಜಯೇಂದ್ರ ಮಠಗಳ ಯಾತ್ರೆ ನಡೆಸ್ತಿದ್ದಾರೆ. ನಿನ್ನೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ವಿಜಯೇಂದ್ರ ಭೇಟಿ ನೀಡಿದ್ರು. ನಿರ್ಮಲಾನಂದ ಸ್ವಾಮೀಜಿಗಳ ಆಶೀರ್ವಾದವನ್ನ ಪಡೆದುಕೊಂಡ್ರು. ಇನ್ನೂ ಇವತ್ತು ತುಮಕೂರಿನ ಸಿದ್ದಂಗಂಗಾ ಮಠಕ್ಕೆ ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಸಿದ್ದಗಂಗಾ ಶ್ರೀಗಳಿಂದ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಮನೆ ದೇವರು ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
‘ವನವಾಸ’ದ ಬಗ್ಗೆ ಮಾತನಾಡುತ್ತಾ ಸಿ.ಟಿ. ರವಿ ಅಸಮಾಧಾನ!
ನಾನು ರವಿ ಅಣ್ಣನ ಜೊತೆ ಮಾತಾಡಿದ್ದೇನೆ ಎಂದ ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದವರಲ್ಲಿ ಸಿ.ಟಿ. ರವಿ ಕೂಡ ಒಬ್ಬರು. ಆದ್ರೀಗ ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕ್ತಿದ್ದಂತೆ ಸಿ.ಟಿ ರವಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕ್ತಿದ್ದಾರೆ. ನಿನ್ನೆ ಹಾಸನದಲ್ಲಿ ಮಾತನಾಡಿದ ಸಿ.ಟಿ ರವಿ ನನಗೇನು ಅಸಮಾಧಾನ ಇಲ್ಲ ಎನ್ನುತ್ತಾ ರಾಮ-ಪಾಂಡವರಿಗೇ ವನವಾಸ ತಪ್ಪಿಲ್ಲ. ನಾನೇನು ದೊಡ್ಡವನಾ ಎನ್ನುತ್ತಾ ಬೇಸರ ಹೊರ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಜಯೇಂದ್ರ ನಾನು ರವಿ ಅಣ್ಣನ ಜೊತೆ ಮಾತನಾಡಿದ್ದೇನೆ ಎನ್ನುತ್ತಾ ಅಸಮಾಧಾನವಿಲ್ಲ ಎಂಬ ಮಾತನ್ನಾಡಿದ್ದಾರೆ.
ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಪಟ್ಟಕ್ಕೇರುತ್ತಿದ್ದಂತೆ ರಾಜ್ಯ ಕೇಸರಿ ಪಡೆಗೆ ಹೊಸ ಶಕ್ತಿ ಬಂದಂತಾಗಿದೆ. ಜೊತೆಗೆ ಅಲ್ಲಲ್ಲಿ ಅಸಮಾಧಾನದ ಹೊಗೆಯೂ ಆಡುತ್ತಿದೆ. ಈ ಎಲ್ಲಾ ಸವಾಲುಗಳನ್ನ ಮೆಟ್ಟಿ ನಿಂತು ಮುಂಬರುವ ಲೋಕಸಭಾ ಕದನದಲ್ಲಿ ವಿಜಯೇಂದ್ರ ವಿಜಯ ಪತಾಕೆ ಹಾರಿಸ್ತಾರಾ ಅನ್ನೋದೇ ಬಿಗ್ ಚಾಲೆಂಜ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ