newsfirstkannada.com

Exclusive: ಬಿಜೆಪಿಗೆ ಕಾದಿದೆ ಮತ್ತೊಂದು ಬಿಗ್ ಶಾಕ್.. ಶೆಟ್ಟರ್, ಸವದಿ ಬೆನ್ನಲ್ಲೇ ಡಾ.ತೇಜಸ್ವಿನಿ ಅನಂತ್‌ಕುಮಾರ್ ಆಪರೇಷನ್​ ಹಸ್ತಕ್ಕೆ​ ಪ್ಲಾನ್..!

Share :

15-07-2023

    ಕಾಂಗ್ರೆಸ್​ನ ಆಪರೇಷನ್ ಪಟ್ಟಿಯಲ್ಲಿ ಬಿಜೆಪಿ ಪ್ರಭಾವಿ ನಾಯಕರ ಹೆಸರು

    ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಆಗಿರುವ ಡಾ.ತೇಜಸ್ವಿನಿ ಅನಂತ್‌ಕುಮಾರ್

    ಎಲೆಕ್ಷನ್​ಗೂ ಮೊದಲೇ ಆಪರೇಷನ್ ಮಾಡಿ ಬಿಜೆಪಿಗೆ ಟಕ್ಕರ್ ಕೊಡಲು ಪ್ಲಾನ್

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೆ ತಡ ಮುಂಬರುವ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಭಾರೀ ಸಿದ್ಧತೆ ನಡೆಸಿದೆ. ವಿಧಾನಸಭೆ ಚುನಾವಣೆ ವೇಳೆ ಪ್ರಮುಖ ಬಿಜೆಪಿ ನಾಯಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್​, ಸದ್ಯ ಲೋಕಸಭೆ ಎಲೆಕ್ಷನ್​ಗೆ ಅಂತಹದ್ದೆ ಒಂದು ದಾಳ ಉರುಳಿಸಿದೆ ಎಂಬ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಲೋಕಾಸಭಾ ಚುನಾವಣೆಗೆ ಬಿಜೆಪಿಯ ಹಲವು ನಾಯಕರನ್ನು ಸೆಳೆಯಲು ಕಾಂಗ್ರೆಸ್​ ಪಟ್ಟಿಯನ್ನು ಸಿದ್ಧಮಾಡಿದೆ. ಆ ಲಿಸ್ಟ್​ನಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಡಾ.ತೇಜಸ್ವಿನಿ ಅನಂತ್‌ಕುಮಾರ್ ಅವರ ಹೆಸರು ಮೊದಲ ಸ್ಥಾನದಲ್ಲಿದೆ ಎನ್ನಲಾಗಿದೆ. ಅವರನ್ನು ಕಾಂಗ್ರೆಸ್​ಗೆ ಕರೆದುಕೊಂಡು ಬಂದು ಬೆಂಗಳೂರು ನಗರದ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್​ ಬಿಗ್​ ಪ್ಲಾನ್​ ಮಾಡುತ್ತಿದೆ ಎನ್ನಲಾಗಿದೆ. ಅಲ್ಲದೇ ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್‌ಕುಮಾರ್ ಅವರು ತುಂಬಾ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಇವರನ್ನು ಪಕ್ಷಕ್ಕೆ ಕರೆದುಕೊಂಡು ಬಂದರೆ ಒಂದು ಎಂಪಿ ಸೀಟ್​ ಗೆಲುವು ಪಕ್ಕಾ ಎನ್ನುವುದು ಕಾಂಗ್ರೆಸ್​ ನಾಯಕರ ತಂತ್ರವಾಗಿದೆ.

ಸದ್ಯ ಡಾ.ತೇಜಸ್ವಿನಿ ಅನಂತ್‌ಕುಮಾರ್ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಬಿಜೆಪಿಯಿಂದ ಅವರಿಗೆ ಮನ್ನಣೆ ಸಿಕ್ಕಿಲ್ಲ ಎನ್ನುವುದು ಒಂದು ಕಡೆಯಾದರೆ ಕಳೆದ ಬಾರಿಯೂ ಟಿಕೆಟ್​ ನೀಡಿರಲಿಲ್ಲ. ಹಿರಿಯ ಕೋಟಾದಡಿ ತೇಜಸ್ವಿನಿರನ್ನು ಪರಿಗಣಿಸಿ ಹಿಂದಕ್ಕೆ ಸರಿಸಲಾಗಿದೆ. ಇದನ್ನೇ ತನ್ನ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್​ ಪಕ್ಷ ಸಂಘಟನೆ ಹಾಗೂ ಸರ್ಕಾರ ಬಗ್ಗೆ ಹೆಚ್ಚಾಗಿ ತಿಳಿದಿರುವ ಇಂತಹ ವ್ಯಕ್ತಿಗೆ ಟಿಕೆಟ್​ ನೀಡಬೇಕು ಎನ್ನುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಕಳೆದ ವಿಧಾನಸಭಾ ಎಲೆಕ್ಷನ್​ನಲ್ಲಿ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿರನ್ನು ಕಾಂಗ್ರೆಸ್​ ಪಕ್ಷಕ್ಕೆ ಸೆಳೆದಿತ್ತು. ಜಗದೀಶ್ ಶೆಟ್ಟರ್ ಅವರು ದಿವಂಗತ ಅನಂತ್‌ಕುಮಾರ್ ಕುಟುಂಬಕ್ಕೆ ತುಂಬಾ ಆಪ್ತರು. ಹೀಗಾಗಿ ಅವರ ಮೂಲಕವೇ ಡಾ.ತೇಜಸ್ವಿನಿರನ್ನು ಪಕ್ಷಕ್ಕೆ ಕರೆತರುವ ಕೆಲಸ ಮಾಡಲಾಗುತ್ತಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Exclusive: ಬಿಜೆಪಿಗೆ ಕಾದಿದೆ ಮತ್ತೊಂದು ಬಿಗ್ ಶಾಕ್.. ಶೆಟ್ಟರ್, ಸವದಿ ಬೆನ್ನಲ್ಲೇ ಡಾ.ತೇಜಸ್ವಿನಿ ಅನಂತ್‌ಕುಮಾರ್ ಆಪರೇಷನ್​ ಹಸ್ತಕ್ಕೆ​ ಪ್ಲಾನ್..!

https://newsfirstlive.com/wp-content/uploads/2023/07/TEJASWI_ANANTAKUMAR.jpg

Load More