newsfirstkannada.com

ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಬಿಗ್ ರಿಲೀಫ್‌; ಹೈಕೋರ್ಟ್‌ನಿಂದ ಮಹತ್ವದ ಆದೇಶ

Share :

20-11-2023

    ಬರೋಬ್ಬರಿ ₹3,300 ಕೋಟಿ ಮೊತ್ತದ ಹಗರಣ ನಡೆದ ಆರೋಪ

    ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆ

    ಆಂಧ್ರ ಸಿಎಂ ಜಗನ್ ವಿರುದ್ಧ ಸಮರ ಸಾರಿರುವ ಟಿಡಿಪಿ ನಾಯಕರು

ಹೈದರಾಬಾದ್‌: 50 ದಿನ ಜೈಲುವಾಸ ಅನುಭವಿಸಿದ್ದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಆಂಧ್ರ ಹೈಕೋರ್ಟ್ ಬಿಗ್ ರಿಲೀಫ್‌ ನೀಡಿದೆ. ಬಹುಕೋಟಿ ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಸಿಎಂಗೆ ಜಾಮೀನು ಮಂಜೂರು ಮಾಡಲಾಗಿದೆ.

ಕಳೆದ ಅಕ್ಟೋಬರ್ 31 ರಂದು ವೈದ್ಯಕೀಯ ಕಾರಣಗಳಿಗಾಗಿ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ನವೆಂಬರ್ 28ರವರೆಗೂ ಮಧ್ಯಂತರ ಜಾಮೀನಿನ ಕಾಲಾವಕಾಶವಿತ್ತು. ಇಂದು ಆಂಧ್ರ ಹೈಕೋರ್ಟ್ ಚಂದ್ರಬಾಬು ನಾಯ್ಡು ಅವರಿಗೆ ಸಾಮಾನ್ಯ ಜಾಮೀನು ನೀಡಿದೆ.

ಏನಿದು ಕೌಶಲ್ಯಾಭಿವೃದ್ಧಿ ಹಗರಣ?

2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರು ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಅವರ ಉದ್ಯೋಗಾವಕಾಶವನ್ನು ಹೆಚ್ಚಿಸಲು APSSDC ಅನ್ನು ಸ್ಥಾಪಿಸಿದ್ದರು. ಇದರಲ್ಲಿ ₹3,300 ಕೋಟಿ ಮೊತ್ತದ ಹಗರಣ ನಡೆದ ಆರೋಪ ಕೇಳಿ ಬಂದಿದ್ದು ಸಿಐಡಿ ತನಿಖೆ ನಡೆಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಎಸಿಬಿ ಪ್ರಕರಣದ ವಿಶೇಷ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಸಾವಿರಾರು ಕೋಟಿ ರೂಪಾಯಿ ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಆಂಧ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಸಿಎಂ ಜಗನ್ ವಿರುದ್ಧ ಟಿಡಿಪಿ ನಾಯಕರು ಸಮರ ಸಾರಿದ್ದಾರೆ. ಚಂದ್ರಬಾಬು ನಾಯ್ಡುಗೆ ಇಂದು ಜಾಮೀನು ಸಿಕ್ಕಿರೋದು ಟಿಡಿಪಿ ನಾಯಕರ ಹೋರಾಟಕ್ಕೆ ಬಲ ತಂದುಕೊಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಬಿಗ್ ರಿಲೀಫ್‌; ಹೈಕೋರ್ಟ್‌ನಿಂದ ಮಹತ್ವದ ಆದೇಶ

https://newsfirstlive.com/wp-content/uploads/2023/09/N_CHANDRABABU_NAYDU.jpg

Load More