newsfirstkannada.com

Breaking News: ದಲಿತರ ಮೇಲೆ ದೌರ್ಜನ್ಯ ಕೇಸ್​; ಸಚಿವ ಸುಧಾಕರ್​ಗೆ ಹೈಕೋರ್ಟ್​ನಿಂದ ಬಿಗ್ ರಿಲೀಫ್

Share :

15-09-2023

  ಡಿ.ಸುಧಾಕರ್ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ

  ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಧ್ಯಂತರ ತಡೆ

  ಸರ್ಕಾರಕ್ಕೆ ತುರ್ತು ನೋಟಿಸ್, ವಿಚಾರಣೆ ಮುಂದೂಡಿಕೆ

ಬೆಂಗಳೂರು: ದಲಿತರ ಮೇಲೆ ದೌರ್ಜನ್ಯ ಆರೋಪ ಕೇಸ್​ಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರದ ಸಚಿವ ಡಿ.ಸುಧಾಕರ್​ಗೆ ಹೈಕೋರ್ಟ್​ನಿಂದ ಬಿಗ್ ರಿಲೀಫ್ ಸಿಕ್ಕಿದೆ.

ಸುಬ್ಬಮ್ಮ ಎಂಬುವವರು ಸಚಿವರ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸ್ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಡಿ.ಸುಧಾಕರ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್​ನ ಏಕಸದಸ್ಯ ಪೀಠ, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ. ಜೊತೆಗೆ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿ ಹೆಚ್ಚಿನ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿಕೆ ಮಾಡಿದೆ.

ಏನಿದು ಆರೋಪ ಪ್ರಕರಣ..?

ಯಲಹಂಕ ಗ್ರಾಮದ ಸರ್ವೆ ನಂ108/1 ರ ಜಮೀನು ಕೇಸ್‌ ಇದು. ಪ್ರಕರಣ ಕೋರ್ಟ್​ನಲ್ಲಿರುವಾಗಲೇ ಸಚಿವರು ಜನರನ್ನು ಕಟ್ಟಿಕೊಂಡು ಬಂದು ದೌರ್ಜನ್ಯವೆಸಗಿದ್ದಾರೆ ಎನ್ನಲಾಗಿದೆ. 35ರಿಂದ 40 ಜನರನ್ನ ಕರೆದುಕೊಂಡು ಬಂದು ಗೂಂಡಾಗಿರಿ ಮಾಡಿದ್ದಾರೆ. ಜೊತೆಗೆ ಮಹಿಳೆಯರನ್ನು ಕರೆದೊಯ್ದು ಜೆಸಿಬಿ ಮೂಲಕ ಮನೆ ಧ್ವಂಸ ಮಾಡಿದ್ದು, ಮನೆಯಲ್ಲಿದ್ದ ಮಗಳ‌ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಜಾತಿನಿಂದನೆ ಕೂಡ ಮಾಡಿದ್ದಾರೆ ಅಂತಾ ದೂರುದಾರೆ ಸುಬ್ಬಮ್ಮ ಎಂಬುವರು ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಿ.ಸುಧಾಕರ್‌ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಜೊತೆಗೆ ದೌರ್ಜನ್ಯ, ವಂಚನೆ ಮತ್ತು ಹಲ್ಲೆ ಆರೋಪದಡಿ ಎಫ್​​ಐಆರ್​ ದಾಖಲಾಗಿದೆ. ಇವರ ಜೊತೆಗೆ ಶ್ರೀನಿವಾಸ್, ಭಾಗ್ಯಮ್ಮ ಮೇಲೆ ಕೂಡ FIR ದಾಖಲಾಗಿದ್ದು, ಪ್ರಕರಣದಲ್ಲಿ ಸಚಿವರು ಎ2 ಆರೋಪಿಗಳಾಗಿದ್ದಾರೆ. ಸುಬ್ಬಮ್ಮ ಎಂಬುವರು ಯಲಹಂಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೋಸದಿಂದ ದಲಿತರ ಆಸ್ತಿ ಕಬಳಿಸೋಕೆ ಬಂದಿದ್ದಾರೆ ಅಂತಾ ಆರೋಪಿಸಿದ್ದಾರೆ. ಸೆವೆನ್ ಹಿಲ್ಸ್ ಡೆವಲಪರ್ಸ್ & ಟ್ರೇಡರ್ಸ್, ಇದರ ಪಾಲುದಾರ ಸುಧಾಕರ್ ಮೇಲೆ ಸುಬ್ಬಮ್ಮ ದೂರು ನೀಡಿದ್ದಾರೆ. ಸಚಿವರು ಸೇರಿದಂತೆ ಈ ಕಂಪನಿಯ ಪ್ರಮುಖರು, ತನ್ನ ಕುಟುಂಬದವರಿಂದ ಮೋಸ ಮಾಡಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ದಲಿತರ ಮೇಲೆ ದೌರ್ಜನ್ಯ ಕೇಸ್​; ಸಚಿವ ಸುಧಾಕರ್​ಗೆ ಹೈಕೋರ್ಟ್​ನಿಂದ ಬಿಗ್ ರಿಲೀಫ್

https://newsfirstlive.com/wp-content/uploads/2023/09/Minister-Sudhakar.jpg

Load More