newsfirstkannada.com

BREAKING: ಪೋಕ್ಸೋ ಕೇಸ್‌ನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್‌! 

Share :

Published June 14, 2024 at 4:50pm

Update June 14, 2024 at 6:23pm

    ಆರೋಪಿಯ ವಾಯ್ಸ್ ಸ್ಯಾಂಪಲ್ ಪಡೆದು ವರದಿ ಪಡೆದಿದ್ದೇವೆ

    ನೊಟೀಸ್ ಕೊಟ್ಟ ಬಳಿಕ ಆರೋಪಿ ಡೆಲ್ಲಿಗೆ ಟಿಕೆಟ್ ಬುಕ್ ಮಾಡಿದ್ದಾರೆ

    2 ಲಕ್ಷ ರೂ. ಕೊಟ್ಟು ವಿಡಿಯೋ ಡಿಲೀಟ್ ಮಾಡಲು ಹೇಳಿದ್ದರು

ಬೆಂಗಳೂರು: ಪೋಕ್ಸೋ ಕೇಸ್​​ನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ರಿಲೀಫ್ ಸಿಕ್ಕಿದೆ. ಮುಂದಿನ ವಿಚಾರಣೆ ತನಕ ಅರೆಸ್ಟ್ ಮಾಡುವಂತಿಲ್ಲ. ಬಲವಂತದ ಕ್ರಮ ತೆಗೆದುಕೊಳ್ಳದಂತೆ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ಯಡಿಯೂರಪ್ಪ ಓರ್ವ ಮಾಜಿ ಸಿಎಂ. ಜೀವನದ ಸಂದ್ಯಾಕಾಲದಲ್ಲಿ ಇದ್ದಾರೆ. ಅವರ ಕಸ್ಟಡಿಯ ವಿಚಾರಣೆ ಅಗತ್ಯ ಕಾಣ್ತಾ ಇಲ್ಲ. ಆರೋಗ್ಯದ ಸಮಸ್ಸೆಗಳು ಇರುತ್ತವೆ. ಆರೋಪಿ ಓಡಿ ಹೋಗುವ ಅಂಶಗಳು ಕಂಡು ಬರ್ತಿಲ್ಲ. ಎರಡು ವಾರದ ನಂತರ ಅರ್ಜಿ ವಿಚಾರಣೆ ನಡೆಯಲಿದೆ. ಅಲ್ಲಿಯ ತನಕ ಯಾವುದೇ ಅರೆಸ್ಟ್ ಮಾಡುವಂತಿಲ್ಲ ಎಂದು ನ್ಯಾಯಾಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರು ಆದೇಶ ನೀಡಿದ್ದಾರೆ.

ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಪೀಠದಲ್ಲಿ ಬಿಎಸ್‌ವೈ ಜಾಮೀನು ವಿಚಾರಣೆ ನಡೆಯಿತು. ಪೋಕ್ಸೋ ಕೇಸ್‌ನಲ್ಲಿ ಯಡಿಯೂರಪ್ಪ ಅವರಿಗೆ ಜಾಮೀನು ನೀಡಲು ಎಜಿ ಶಶಿಕಿರಣ್ ಶೆಟ್ಟಿ ವಿರೋಧಿಸಿದರು. ನಾವು ಎರಡು ಬಾರಿ‌ ನೊಟೀಸ್ ಕೊಟ್ಟಿದ್ದೇವೆ. ಆದ್ರೂ ಆರೋಪಿ ವಿಚಾರಣೆಗೆ ಬಂದಿಲ್ಲ. ನಾವು ಆರೋಪಿಯ ವಾಯ್ಸ್ ಸ್ಯಾಂಪಲ್ ಪಡೆದು ವರದಿ ಪಡೆದಿದ್ದೇವೆ. ವಿಡಿಯೋ ಸಾಕ್ಷಿಯ ಎಫ್ಎಸ್ಎಲ್ ವರದಿ ಸಹ ಪಡೆದಿದ್ದೇವೆ. ವಿಚಾರಣೆಗೆ ಹಾಜರಾಗಲು ನಾವು ನೊಟೀಸ್ ಕೊಟ್ಟ ಬಳಿಕ ಆರೋಪಿ ಡೆಲ್ಲಿಗೆ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ‘ನನ್ನ ಗಂಡನಿಗೆ ನಾನೊಬ್ಬಳೇ ಹೆಂಡ್ತಿ’- ಡಿವೋರ್ಸ್‌ ರಿಜೆಕ್ಟ್ ಬೆನ್ನಲ್ಲೇ ದುನಿಯಾ ವಿಜಯ್ ಪತ್ನಿ ಖಡಕ್ ಮಾತು 

ಈ ನಡುವೆ ಸಿಐಡಿ ಎಸ್‌ಪಿಪಿ ಜಗದೀಶ್ ಅವರು ಪ್ರಕರಣದಲ್ಲಿ ಆರೋಪಿ ಕರೆಯಿಸಿ 2 ಲಕ್ಷ ರೂಪಾಯಿ ಹಣ ನೀಡಿ, ಆಕೆ ಬಳಿಯಿದ್ದ ವಿಡಿಯೋ ಡಿಲೀಟ್ ಮಾಡಲು ಹೇಳಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದಾರೆ ಎಂದು ವಾದಿಸಿದ್ದರು.

ಯಡಿಯೂರಪ್ಪ ಪರ ವಕೀಲರ ವಾದವೇನು? 
ಬಿ.ಎಸ್‌ ಯಡಿಯೂರಪ್ಪ ಪರ ಸೀನಿಯರ್ ಕೌನ್ಸಿಲ್ ಸಿ.ವಿ ನಾಗೇಶ್ ಅವರು ಹಾಜರಾಗಿದ್ದರು. ಇಲ್ಲಿ ಈ ಕೇಸ್ ಯಾಕೆ ಹಾಕಿದ್ದಾರೆ ಅಂದ್ರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬರಲಿಲ್ಲ ಅಂತ ಬಿಜೆಪಿ ವಾದ ಮಾಡಿತ್ತು. ಆದಾದ ಬಳಿಕ ರಾಹುಲ್ ಗಾಂಧಿ ಕೋರ್ಟ್ ಮುಂದೆ ಬಂದಿದ್ರು. ಅದಕ್ಕೆ ಬಿಜೆಪಿ ಲೀಡರ್, ಮಾಜಿ ಮುಖ್ಯಮಂತ್ರಿ ಅರೆಸ್ಟ್ ವಾರಂಟ್ ಪಡೆದಿದ್ದಾರೆ. ಕಾಂಗ್ರೆಸ್ ನಾಯಕ ಉಗ್ರಪ್ಪ ಮೇಲೆ ಕೇಸ್ ದಾಖಲಾಗಿಲ್ಲ. ತನಿಖೆಯೂ ಇಲ್ಲ ಎಂದು ಸಿ.ವಿ ನಾಗೇಶ್ ವಾದಿಸಿದರು.

ಅವರು ಕೋರ್ಟ್ ವಾರಂಟ್ ಮಾಡಿದೆ ಅಂತ ಹೇಳಿ ಅರೆಸ್ಟ್ ಮಾಡೋಕೆ ಮುಂದಾಗಿದ್ದಾರೆ. ಕೋರ್ಟ್ ಡೈರೆಕ್ಷನ್ ನಾನೇನು ಮಾಡಿದ್ದೇನೆ ಅಂತಾ ಹೇಳಲು ಹೀಗೆ ಮಾಡಿದ್ದಾರೆ. ಇಲ್ಲಿ ಅಧಿಕಾರಿಗಳು ಪೊಲಿಟಿಕಲ್ ಮಾಸ್ಟರ್ಸ್ ಆಗಿ ಕೆಲಸ ಮಾಡ್ತಿದ್ದಾರೆ. ವಾರಂಟ್ ನೀಡಲಿ ಅಂತಾನೇ ಪದೇ ಪದೇ ನೊಟೀಸ್ ನೀಡಿದ್ದಾಗಿ ಮಾಡಿದ್ದಾರೆ. ಇಲ್ಲಿ ತನಿಖಾಧಿಕಾರಿಯೇ ರಿಟ್ ಪಿಟಿಷನ್ ಹಾಕುವಂತೆ ಮಾಡಿದ್ದಾರೆ. ಜೂನ್ 10 ರಂದು ಕೊಟ್ಟಿರುವ ನೊಟೀಸ್ ಬಗ್ಗೆ ಉಲ್ಲೇಖಿಸಿದ ನಾಗೇಶ್ ಅವರು ನಾಳೆ ನೀವು ಬನ್ನಿ ಅಂತ ಹಿಂದಿನ ದಿನ ನೊಟೀಸ್‌ ನೀಡಿದ್ದಾರೆ. ಅದಕ್ಕೆ ನಾವು ಉತ್ತರ ನೀಡಿದ್ದೇವೆ. ಇಲ್ಲಿ ಅರೆಸ್ಟ್ ಮಾಡಲೇಬೇಕು ಅಂತಾ ನಿರ್ಧಾರ ಆಗಿದೆ. ಇದು ಸರಿಯಲ್ಲ. ಅವರು ಉದ್ದೇಶಪೂರ್ವಕವಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ತಲೆಮರೆಸಿಕೊಂಡಿದ್ದಾರೆಂದು ಸುಳ್ಳು ಹೇಳಿಕೆ ನೀಡ್ತಾರೆ ಎಂದು ಸಿವಿ ನಾಗೇಶ್ ಅವರು ವಾದ ಮಂಡಿಸಿದರು.

ಈ ವಾದ, ಪ್ರತಿವಾದವನ್ನು ಆಲಿಸಿದ ಕೋರ್ಟ್ ಮುಂದಿನ ವಿಚಾರಣೆ ತನಕ ಬಂಧನ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ. ಎರಡು ವಾರದವರೆಗೂ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ರಿಲೀಫ್ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಪೋಕ್ಸೋ ಕೇಸ್‌ನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್‌! 

https://newsfirstlive.com/wp-content/uploads/2023/08/BSY.jpg

Load More