ಉಪೇಂದ್ರ ವಿರುದ್ಧ ದಾಖಲಾದ ದೂರುಗಳು ಪ್ರಚಾರಕ್ಕೆ ಮಾಡಿದ್ದಾ?
‘ಪೊಲೀಸ್ ಠಾಣೆ ಮುಂದೆ ದೂರುದಾರರು ಕೇಕ್ ಕತ್ತರಿಸಿದ್ದು ವಿಶೇಷ’
ಉಪೇಂದ್ರ ವಿರುದ್ಧ ದಾಖಲಾದ 2ನೇ FIRಗೆ ಹೈಕೋರ್ಟ್ ಹೇಳಿದ್ದೇನು?
ಬೆಂಗಳೂರು: ಆಕ್ಷೇಪಾರ್ಹ ಪದ ಬಳಸಿದ ಆರೋಪದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನಟ ಉಪೇಂದ್ರ ಬಚಾವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಅಟ್ರಾಸಿಟಿ ಕೇಸ್‌ಗಳು ದಾಖಲಾದ ಹಿನ್ನೆಲೆ ರಿಯಲ್ ಸ್ಟಾರ್ ಉಪ್ಪಿ ಬಂಧನದ ಭೀತಿಗೂ ಒಳಗಾಗಿದ್ದರು. ಆದರೆ ಹೈಕೋರ್ಟ್ ಎರಡನೇ ಎಫ್ಐಆರ್ಗೂ ಮಧ್ಯಂತರ ತಡೆ ನೀಡಿದ್ದು, ನಟ ನಿರ್ದೇಶಕ ಉಪೇಂದ್ರಗೆ ಬಿಗ್ ರಿಲೀಫ್ ಸಿಕ್ಕಿದೆ.
ಫೇಸ್‌ಬುಕ್ ಲೈವ್‌ನಲ್ಲಿ ನಟ ಉಪೇಂದ್ರ ಬಳಸಿದ ಗಾದೆ ಮಾತಿಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ವಿವಿಧ ಪೊಲೀಸ್ ಠಾಣೆಯಲ್ಲಿ ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆ ಉಪೇಂದ್ರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು ತನಿಖೆಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು.
ಹಲಸೂರು ಗೇಟ್ ಠಾಣೆಯ ಪ್ರಕರಣ ರದ್ದು ಕೋರಿ ಉಪೇಂದ್ರ ಪರ ಹಿರಿಯ ವಕೀಲ ಉದಯ್ ಹೊಳ್ಳ ಅವರು ವಾದ ಮಂಡಿಸಿದರು. ಇವರ ವಾದ ಆಲಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರು ಮಧ್ಯಂತರ ತಡೆ ನೀಡಿ ಆದೇಶಿಸಿದ್ದಾರೆ. ಒಂದೇ ಆರೋಪಕ್ಕೆ ಎರಡೆರಡು ಎಫ್ಐಆರ್ ದಾಖಲಾದ ಹಿನ್ನೆಲೆ ಹೈಕೋರ್ಟ್ ಎರಡನೇ ಎಫ್ಐಆರ್ಗೂ ಮಧ್ಯಂತರ ತಡೆ ನೀಡಿದೆ.
ವಕೀಲ ಉದಯ್ ಹೊಳ್ಳ ಅವರ ವಾದ
ಪ್ರಚಾರಕ್ಕಾಗಿ ನಟ ಉಪೇಂದ್ರ ವಿರುದ್ಧ ದುರುದ್ದೇಶಪೂರಿತ ದೂರು ನೀಡಿದ್ದು, ಹಲಸೂರು ಪೊಲೀಸ್ ಠಾಣೆ ಮುಂದೆ ದೂರುದಾರರು ಕೇಕ್ ಕತ್ತರಿಸಿದ್ದಾರೆ. ಸಚಿವರೊಬ್ಬರು ಇದೇ ಹೇಳಿಕೆ ನೀಡಿದ್ದಾರೆ ಆದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ. ಪೊಲೀಸರು ಕೇವಲ ಎನ್‌ಸಿಆರ್ ಮಾತ್ರ ದಾಖಲಿಸಿದ್ದಾರೆ. ಉಪೇಂದ್ರ ಚಿತ್ರನಟ ಎಂಬ ಕಾರಣಕ್ಕೆ ಎಫ್ಐಆರ್ ದಾಖಲಿಸಿದ್ದಾರೆ. ಒಂದೇ ಆರೋಪಕ್ಕೆ ಎರಡೆರಡು ಎಫ್ಐಆರ್ ದಾಖಲಿಸುವಂತಿಲ್ಲ. ಈ ಘಟನೆಗೆ ಸಂಬಂಧ ಎಲ್ಲಾ ದೂರುಗಳಿಗೂ ತಡೆ ನೀಡಲು ವಕೀಲ ಉದಯ್ ಹೊಳ್ಳ ಅವರು ಮನವಿ ಮಾಡಿದ್ದಾರೆ.
ಸರ್ಕಾರದ ಪರ ಸಮರ್ಥನೆ ಏನು?
ವಕೀಲ ಉದಯ್ ಹೊಳ್ಳ ಅವರ ವಾದಕ್ಕೆ ಸರ್ಕಾರದ ಪರ ಎಸ್‌ಪಿಪಿ ಬಿ.ಎ. ಬೆಳ್ಳಿಯಪ್ಪ ಅವರು ಸಮರ್ಥನೆ ಕೊಟ್ರು. ನಟ ಉಪೇಂದ್ರ ಅವರ ಹೇಳಿಕೆಯಿಂದ ಸಮುದಾಯಗಳ ನಡುವೆ ವೈಷಮ್ಯ ಮೂಡಿದೆ. ಹೀಗಾಗಿ ತಡೆಯಾಜ್ಞೆ ನೀಡದಂತೆ ಮನವಿ ಮಾಡಿದರು.
ನ್ಯಾಯಮೂರ್ತಿಯವರ ಅಭಿಪ್ರಾಯ
ಉಪ್ಪೇಂದ್ರ ಪರ ವಕೀಲರ ವಾದ ಹಾಗೂ ಎಸ್‌ಪಿಪಿ ಸಮರ್ಥನೆಯನ್ನು ಆಲಿಸಿದ ನ್ಯಾ. ಹೇಮಂತ್ ಚಂದನ್ ಗೌಡರ್ ಅವರು ಯಾವುದೇ ಜಾತಿಯ ವ್ಯಕ್ತಿ ಉದ್ದೇಶಿಸಿ ಹೇಳಿಕೆ ನೀಡಿಲ್ಲ. ಹೀಗಾಗಿ 2ನೇ FIRಗೂ ಮಧ್ಯಂತರ ತಡೆಯಾಜ್ಞೆ ನೀಡಿದರು. ಈ ಮೂಲಕ ಉಪೇಂದ್ರ ವಕೀಲರ ಮನವಿಯನ್ನು ಹೈಕೋರ್ಟ್ ನ್ಯಾಯಪೀಠ ಪುರಸ್ಕರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ