newsfirstkannada.com

WFI ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್‌ಗೆ ಬಿಗ್‌ ರಿಲೀಫ್; ಪೊಲೀಸರು ಸಲ್ಲಿಸಿದ ಜಾರ್ಜ್‌ಶೀಟ್‌ನಲ್ಲಿ ಇರೋದೇನು?

Share :

15-06-2023

    ಬ್ರಿಜ್ ಭೂಷಣ್ ವಿರುದ್ಧ ಫೋಕ್ಸೋ ಕಾಯಿದೆಯಡಿ ದಾಖಲಿಸಿದ್ದ ಕೇಸ್

    ಮಹಿಳಾ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟಕ್ಕೆ ಪೊಲೀಸರ ಟ್ವಿಸ್ಟ್

    550 ಪುಟಗಳ ಜಾರ್ಜ್‌ಶೀಟ್‌ ವರದಿಯಲ್ಲಿ ಕೇಸ್ ಕೈ ಬಿಡಲು ಶಿಫಾರಸು

ನವದೆಹಲಿ: ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ನಡೆಸುತ್ತಿದ್ದ ಹೋರಾಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತನಿಖೆ ನಡೆಸಿದ್ದ ಪೊಲೀಸರು ಇಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ ಜಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಜಾರ್ಜ್‌ಶೀಟ್‌ನಿಂದ ಒಂದು ಪ್ರಕರಣದಲ್ಲಿ ಬ್ರಿಜ್ ಭೂಷಣ್ ಸಿಂಗ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಮಹಿಳಾ ಕುಸ್ತಿಪಟುಗಳ ಪೈಕಿ ಅಪ್ರಾಪ್ತ ಬಾಲಕಿ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಫೋಕ್ಸೋ ಕಾಯಿದೆಯಡಿ ದಾಖಲಿಸಿದ್ದ ಕೇಸ್ ಇದ್ದಾಗಿದ್ದು ಬ್ರಿಜ್ ಭೂಷಣ್ ಸಿಂಗ್‌ ಅವರಿಗೆ ರಿಲೀಫ್ ಸಿಕ್ಕಿದೆ. ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರೋ ಅಂಶಗಳು ಕುತೂಹಲ ಕೆರಳಿಸಿದೆ.

ಅಪ್ರಾಪ್ತೆಗೆ ಪಟ್ಟಭದ್ರ ಹಿತಾಸಕ್ತಿ ಇತ್ತು. ಟ್ರಯಲ್‌ನಲ್ಲಿ ಆಯ್ಕೆ ಆಗಲಿಲ್ಲ ಎಂಬ ಆಕ್ರೋಶದಿಂದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೂರು ಸಲ್ಲಿಸಿದ್ದರು. ಅಪ್ರಾಪ್ತೆ ನೀಡಿದ್ದ ದೂರಿಗೆ ಪೂರಕ ಸಾಕ್ಷ್ಯಗಳು ಇಲ್ಲ. ಹೀಗಾಗಿ ಬ್ರಿಜ್ ಭೂಷಣ್ ವಿರುದ್ಧದ ಫೋಕ್ಸೋ ಕೇಸ್ ಕೈ ಬಿಡಲು ಕೋರ್ಟ್‌ಗೆ ಪೊಲೀಸರು ಶಿಫಾರಸು ಮಾಡಿದ್ದಾರೆ. ಕೋರ್ಟ್‌ಗೆ 550 ಪುಟಗಳ ಜಾರ್ಜ್‌ಶೀಟ್‌ ವರದಿ ಸಲ್ಲಿಕೆಯಾಗಿದ್ದು, ಜುಲೈ 4ರಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

WFI ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಹೋರಾಟ ಮಾಡುತ್ತಿರುವ ಮಹಿಳಾ ಕುಸ್ತಿಪಟುಗಳು ಜೂನ್ 15ರೊಳಗೆ ಜಾರ್ಜ್‌ಶೀಟ್ ಸಲ್ಲಿಕೆಗೆ ಗುಡುವು ನೀಡಿದ್ದರು. ಇದೀಗ ತನಿಖೆ ನಡೆಸಿದ ಪೊಲೀಸರು ಒಂದು ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದು ಆರೋಪಿ ಸ್ಥಾನದಲ್ಲಿರುವ ಬ್ರಿಜ್ ಭೂಷಣ್ ಸಿಂಗ್ ಅವರಿಗೆ ರಿಲೀಫ್ ಕೊಟ್ಟಿದ್ದಾರೆ. ಬ್ರಿಜ್‌ ಭೂಷಣ್ ಸಿಂಗ್ ವಿರುದ್ಧ ಇನ್ನು ಹಲವು ಆರೋಪಗಳಿದ್ದು, ಮಹಿಳಾ ಕುಸ್ತಿಪಟುಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಟ್ಟು ಹಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WFI ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್‌ಗೆ ಬಿಗ್‌ ರಿಲೀಫ್; ಪೊಲೀಸರು ಸಲ್ಲಿಸಿದ ಜಾರ್ಜ್‌ಶೀಟ್‌ನಲ್ಲಿ ಇರೋದೇನು?

https://newsfirstlive.com/wp-content/uploads/2023/06/Brij-Bhushan.jpg

Load More