2022ರಲ್ಲಿ ಬಿಜೆಪಿ ಸರ್ಕಾರ ಡಿಕೆ ಶಿವಕುಮಾರ್ ವಿರುದ್ಧ ಹಾಕಿದ್ದ ಪ್ರಕರಣ
ಮೇಕೆದಾಟು ಡ್ಯಾಂ ಯೋಜನೆ ಜಾರಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ
ಬಿಜೆಪಿ, ಕಾಂಗ್ರೆಸ್ ನಾಯಕರ ಮಧ್ಯೆ ನಡೆದಿದ್ದ ನಿರಂತರ ಕಾನೂನು ಸಮರ
ಬೆಂಗಳೂರು: ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಇಂದು ಬಿಗ್ ರಿಲೀಫ್ ಸಿಕ್ಕಿದೆ. 2022ರಲ್ಲಿ ಬಿಜೆಪಿ ಸರ್ಕಾರ ಡಿಕೆ ಶಿವಕುಮಾರ್ ವಿರುದ್ಧ ಹಾಕಲಾಗಿದ್ದ 5 ಪ್ರಕರಣಗಳನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ ನೀಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮೇಕೆದಾಟು ಡ್ಯಾಂ ಯೋಜನೆ ಜಾರಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದರು. ನೀರಿಗಾಗಿ ನಡೆದ ನಡಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಹೆಜ್ಜೆ ಹಾಕಿದ್ದರು. ಮೇಕೆದಾಟುವಿನಿಂದ ಹೊರಟ ಕೈ ನಾಯಕರ ಪಾದಯಾತ್ರೆ ಬೆಂಗಳೂರನ್ನು ತಲುಪಲು ಉದ್ದೇಶಿಸಿತ್ತು.
ಮೇಕೆದಾಟು ಪಾದಯಾತ್ರೆಗೆ ಚಾಲನೆ ಕೊಟ್ಟ ಮೇಲೆ ಅಂದಿನ ಬಿಜೆಪಿ ಸರ್ಕಾರ ಮೇಕೆದಾಟು ಪಾದಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿತ್ತು. ಪಾದಯಾತ್ರೆಯ ನೇತೃತ್ವವಹಿಸಿದ್ದ ಡಿಕೆ ಶಿವಕುಮಾರ್ ಮೇಲೆ ಹಲವು ಪ್ರಕರಣಗಳನ್ನು ಹಾಕಲಾಗಿತ್ತು. ಕಾನೂನು ಭಂಗ ಮಾಡಿ ಪ್ರತಿಭಟನೆ ನಡೆಸಿದ ಆರೋಪ ಹೊರಿಸಲಾಗಿತ್ತು. ಇಷ್ಟಾದ್ರೂ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮುಂದುವರಿದಿತ್ತು.
2022ರಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣ ದಾಖಲಾಗಿತ್ತು. ಈ ಐದು ಪ್ರಕರಣವನ್ನ ರದ್ದುಪಡಿಸಿ ಇಂದು ಹೈಕೋರ್ಟ್ ಆದೇಶ ಹೊರಡಿಸಿದೆ. ನ್ಯಾ.ಎಂ. ನಾಗಪ್ರಸನ್ನರಿದ್ದ ಪೀಠ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ