newsfirstkannada.com

ಡಿಸಿಎಂ ಡಿ.ಕೆ ಶಿವಕುಮಾರ್​​ಗೆ ಹೈಕೋರ್ಟ್​​ನಿಂದ ಬಿಗ್​​ ರಿಲೀಫ್​​; ಏನಿದು ಕೇಸ್​​?

Share :

14-07-2023

    ಡಿಸಿಎಂ ಡಿ.ಕೆ ಶಿವಕುಮಾರ್​​ಗೆ ಬಿಗ್​ ರಿಲೀಫ್​

    ಡಿಕೆಶಿಗೆ ಬಿಗ್​ ರಿಲೀಫ್​ ಕೊಟ್ಟ ಹೈಕೋರ್ಟ್​​!

    ಕೊನೆಗೂ ನಿಟ್ಟುಸಿರು ಬಿಟ್ಟ ಕೆಪಿಸಿಸಿ ಅಧ್ಯಕ್ಷರು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್​​ಗೆ ಬಿಗ್​​ ರಿಲೀಫ್​​​ ಸಿಕ್ಕಿದೆ. ಹೈಕೋರ್ಟ್​ ಆದೇಶದಿಂದಲೇ ಬಿಗ್​ ರಿಲೀಫ್​​ ಸಿಕ್ಕಿದ್ದು, ತನ್ನ ವಿರುದ್ಧ ಇದ್ದ ಕೇಸ್​​ವೊಂದು ರದ್ದಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ -19 ಮಹಾಮಾರಿ ಇಡೀ ರಾಜ್ಯವನ್ನು ಆವರಿಸಿತ್ತು. ಹತ್ತಾರು ಸಾವಿರ ಮಂದಿ ಕೋವಿಡ್​ಗೆ ಬಲಿಯಾಗಿದ್ದರು. ಇದರ ಪರಿಣಾಮ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಲಾಕ್ಡೌನ್​​​ ಜಾರಿ ಮಾಡಿತ್ತು. ಈ ಸಂದರ್ಭದಲ್ಲಿ ಕೋವಿಡ್​ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಡಿ.ಕೆ ಶಿವಕುಮಾರ್​ ಸೇರಿ ಕಾಂಗ್ರೆಸ್ಸಿಗರ ಮೇಲೆ ಎಫ್​​ಐಆರ್​​ ದಾಖಲಾಗಿತ್ತು.

ಕೋವಿಡ್​ ನಿಯಮ ಗಾಳಿಗೆ ತೂರಿ ಪಾದಯಾತ್ರೆ

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ನೇತೃತ್ವದಲ್ಲಿ ಪಾದಯಾತ್ರೆ ನಡೆದಿತ್ತು. ಈ ವೇಳೆ ಕೋವಿಡ್​ ನಿಯಮಗಳನ್ನು ಗಾಳಿಗೆ ತೂರಿ ಪಾದಯಾತ್ರೆ ನಡೆಸಲಾಗಿತ್ತು. ಹೀಗಾಗಿ ಇವರ ವಿರುದ್ಧ ಹಲಸೂರು ಗೇಟ್​​ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​​ ಆಗಿತ್ತು.

ಇಂದು ವಿಚಾರಣೆ ನಡೆಸಿದ ಹೈಕೋರ್ಟ್​ ಏಕಸದಸ್ಯ ಪೀಠ ಮಹತ್ವದ ಆದೇಶ ಹೊರಡಿಸಿದೆ. ಡಿ.ಕೆ ಶಿವಕುಮಾರ್​ ವಿರುದ್ಧ ದಾಖಲಾದ ಎಫ್​ಐಆರ್​​ ರದ್ದುಗೊಳಿಸಿ ಎಂದು ಪೊಲೀಸ್​ ಇಲಾಖೆಗೆ ಸೂಚನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಸಿಎಂ ಡಿ.ಕೆ ಶಿವಕುಮಾರ್​​ಗೆ ಹೈಕೋರ್ಟ್​​ನಿಂದ ಬಿಗ್​​ ರಿಲೀಫ್​​; ಏನಿದು ಕೇಸ್​​?

https://newsfirstlive.com/wp-content/uploads/2023/07/DK_Shivkumar-1.jpg

Load More