newsfirstkannada.com

×

Electoral Bonds case: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ನಾಯಕರಿಗೆ ಬಿಗ್ ರಿಲೀಫ್‌!

Share :

Published September 30, 2024 at 5:56pm

    ಚುನಾವಣಾ ಬಾಂಡ್ ಪ್ರಕರಣದಲ್ಲಿ ಬಿಜೆಪಿ ಪಾಳಯಕ್ಕೆ ದೊಡ್ಡ ರಿಲೀಫ್

    ಮುಂದಿನ ವಿಚಾರಣೆಯವರೆಗೂ ತನಿಖೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್​

    ವಿಚಾರಣೆ ಅಕ್ಟೋಬರ್ 21ಕ್ಕೆ ಮುಂದೂಡಿದ ಹೈಕೋರ್ಟ್​ ಏಕಸದಸ್ಯ ಪೀಠ

ಚುನಾವಣಾ ಬಾಂಡ್ ವಿಚಾರವಾಗಿ ದಾಖಲಾಗಿದ್ದ ಎಫ್​ಐಆರ್ ಪ್ರಕರಣದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್​ ಅವರಿಗೆ ಹೈಕೋರ್ಟ್​ ಬಿಗ್​ ರಿಲೀಫ್ ನೀಡಿದೆ. ನಿರ್ಮಲಾ ಸೀತಾರಾಮನ್, ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಹಾಗೂ ಇಡಿ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿತ್ತು. ಎಫ್​ಐಆರ್ ರದ್ದು ಕೋರಿ ನಳೀನ್​ ಕುಮಾರ್ ಕಟೀಲ್​ ಅವರ ಅರ್ಜಿ ವಿಚಾರಣೆ ಇಂದು ಹೈಕೋರ್ಟ್​ ಏಕಸದಸ್ಯಪೀಠ ನಡೆಸಿತು.

ನಳೀನ್ ಕುಮಾರ್ ಕಟೀಲ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಘವನ್ ಈ ಪ್ರಕಣದಡಿಯಲ್ಲಿ ಮಾಡಿರುವ ಆರೋಪಗಳನ್ನು ಉಲ್ಲೇಖಿಸಿ, ಪ್ರಕರಣದಲ್ಲಿ ಸುಲಿಗೆಯ ವಿಚಾರವೇ ಬರೋದಿಲ್ಲ. ದೂರುದಾರ ಇಲ್ಲಿ ಒಳಸಂಚು ಮಾಡಿ ಆರೋಪ ಮಾಡಿದ್ದಾರೆ.ಮ ಆರೋಪಿ 1 ಜೊತೆ ಸೇರಿ ಸುಲಿಗೆ ಮಾಡಲು ಒಳಸಂಚು ಆರೋಪ ಮಾಡಿದ್ದಾರೆ. ಮೂಲ ಅಂಶವೇ ಇಲ್ಲವೆಂದ ಮೇಲೆ ಸುಲಿಗೆ ಹೇಗೆ ಸಾಧ್ಯ ಹೀಗಾಗಿ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ: ಧರ್ಮಸ್ಥಳ ಹೆದ್ದಾರಿಯಲ್ಲಿ ಭೀಕರ ಅಪಘಾತ.. ಚಿಕ್ಕ ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು

ಇದನ್ನು ಆಕ್ಷೇಪಿಸಿದ ದೂರುದಾರ ಆದರ್ಶ ಐಯ್ಯರ್ ಪರ ವಕೀಲರಾದ ಪ್ರಶಾಂತ್​ ಭೂಷಣ್ , ಇದು ಸುಲಿಗೆಗೆ ಒಂದು ಅತ್ಯುತ್ತವಾದ ಉದಾಹರಣೆಯಾಗಿದೆ. ನಾವು ಕಾನೂನು ಪ್ರಕ್ರಿಯೆಗಳನ್ನು ಸರಿಯಾಗಿ ಅನುಸರಿಸಿದ್ದೇವೆ. ಅದರಂತೆಯೇ ಮ್ಯಾಜಿಸ್ಟ್ರೇಟ್ ಮುಂದೆ ಹೋಗಿ ಅರ್ಜಿ ಸಲ್ಲಿಸಿದ್ದು. ಕೋರ್ಟ್ ಅದನ್ನು ಪರಿಗಣಿಸಿಯೇ ಎಫ್​ಐಆರ್​ಗೆ ಸೂಚನೆ ನೀಡಿದ್ದು. ಇದು ಇಡಿ ಅಧಿಕಾರಿಗಳನ್ನು ಬಳಸಿ ಬಂಧಿಸುವ ಬೆದರಿಕೆ ನೀಡಿ ಸುಲಿಗೆ ಮಾಡಲಾಗಿದೆ. ಕಂಪನಿಗಳ ಮೇಲೆ ದೌರ್ಜನ್ಯವೆಸಗಿ ಸುಲಿಗೆ ಮಾಡಿದ್ದಾರೆ. ಹೀಗಾಗಿ ಯಾವುದೇ ಮಧ್ಯಂತರ ಆದೇಶ ನೀಡದಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಸೆಕ್ಷನ್ 384 ಅಡಿಯಲ್ಲಿ ಸುಲಿಗೆ ಮಾಡುವುದಕ್ಕೆ ಶಿಕ್ಷೆಯಾಗಿದೆ. ಅದು ಸೆಕ್ಷನ್ 383 ಅಡಿಯಲ್ಲಿ ಸುಲಿಗೆ ಆಗಿರಬೇಕು. ಅದರ ಪ್ರಮುಖ ಅಂಶಗಳು ಹೇಳುವುದು ಅಲ್ಲಿ ಬೆದರಿಕೆ ಇರಬೇಕು. ಅದನ್ನು ನೊಂದ ವ್ಯಕ್ತಿ ನೇರವಾಗಿ ಬಂದು ಹೇಳಬೇಕು.ಇದು ದೂರುದಾರರ ಕೇಸ್ ಆಗಲ್ಲ. ಇಲ್ಲಿ ದೂರುದಾರನಿಗೆ ಬೆದರಿಕೆ ಹಾಕಿಲ್ಲ. ಹೀಗಾಗಿ ಈ ವಿಚಾರ ದೂರುದಾರನಿಗೆ ಸಂಬಂಧಿಸಿದ್ದೇ ಅಲ್ಲ. ಬೇರೆಯವರ ಹೆಗಲ ಮೇಲೆ ಬಂದೂಕು ಇಟ್ಟು ಇನ್ನೊಬ್ಬರನ್ನು ಶೂಟ್ ಮಾಡಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲ್ ರಾಘವನ್ ವಾದಿಸಿದರು.

ಇದನ್ನೂ ಓದಿ: ನಿಮ್ಮಿಂದ ವಕೀಲರಿಗೆ ಮಾತ್ರ ಲಾಭ ; ವಿಚ್ಛೇದನ ಪ್ರಕರಣದಲ್ಲಿ ಮಹಿಳೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಲಹೆ

ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ವಕೀಲ ಪ್ರಶಾಂತ್ ಭೂಷಣ್ ಅವರು ಇಲ್ಲಿ ಕಂಪನಿಯವರು ಸಹ ಲಾಭ ಪಡೆದಿದ್ದಾರೆ. ಅದಕ್ಕೆ ಅವರು ದೂರು ನೀಡಲು ಬಂದಿಲ್ಲ. ಇಲ್ಲಿ ದೂರುದಾರನಿಗೆ ಯಾವುದೇ ಬೆದರಿಕೆ ಹಾಕಿಲ್ಲ. ಇಲ್ಲಿ ಅಧೀನ ನ್ಯಾಯಾಲಯದ ನ್ಯಾಯಮೂರ್ತಿಗಳು ಸೆಕ್ಷನ್ 383ರ ಅಂಶಗಳನ್ನು ಪರಿಗಣಿಸಿಲ್ಲ ಎಂದು ವಾದಿಸಿದರು.

ಇದನ್ನೂ ಓದಿ: ಚೈತ್ರಾ ಕುಂದಾಪುರ ಎದುರಿಸುತ್ತಿರುವ ಕೇಸ್​ ಏನು? ಬಿಗ್​ ಬಾಸ್​ ಮನೆಗೆ ಬರಲು ಕಾರಣ?

ಎರಡು ಕಡೆಯ ವಾದ ಆಲಿಸಿದ ನ್ಯಾಯಮೂರ್ತಿಗಳು, ದೂರುದಾರ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ಮುಂದಿನ ವಿಚಾರಣೆಯ ತನಕ ತನಿಖೆಗೆ ಸ್ಟೇ ನೀಡಿದ್ದು ಮುಂದಿನ ಅಕ್ಟೋಬರ್ 21ಕ್ಕೆ ಮುಂದೂಡಿದೆ. ಸದ್ಯ ಚುನಾವಣಾ ಬಾಂಡ್ ವಿಚಾರದಲ್ಲಿ ಸುಲಿಗೆ ಮಾಡಿದ ಆರೋಪದಲ್ಲಿ ನಿರ್ಮಲಾ ಸೀತಾರಾಮನ್ , ಇಡಿ ಅಧಿಕಾರಿಗಳು, ನಳೀನ್ ಕುಮಾರ್ ಕಟೀಲ್, ಜೆ.ಪಿ.ನಡ್ಡಾ, ಬಿ.ವೈ ವಿಜಯೇಂದ್ರ ಅವರಿಗೆ ಬಿಗ್ ರಿಲೀಫ್​ ಸಿಕ್ಕಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Electoral Bonds case: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ನಾಯಕರಿಗೆ ಬಿಗ್ ರಿಲೀಫ್‌!

https://newsfirstlive.com/wp-content/uploads/2024/09/ELECTROL-BOND-CASE-STAY.jpg

Load More