newsfirstkannada.com

ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಬಿಗ್‌ ಶಾಕ್‌; ಮತ್ತೆ ಎಷ್ಟು ದಿನ ಪೊಲೀಸ್ ಕಸ್ಟಡಿ?

Share :

Published June 15, 2024 at 5:23pm

    ದರ್ಶನ್, ಪವಿತ್ರಗೌಡ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು

    ಕೋರ್ಟ್​ಗೆ ಮುಚ್ಚಿದ ಲಕೋಟೆ ಸಲ್ಲಿಸಿದ ಪೊಲೀಸ್​ ಅಧಿಕಾರಿಗಳು

    ದರ್ಶನ್‌ ಹಾಗೂ ಆರೋಪಿಗಳನ್ನು ಕಸ್ಟಡಿಗೆ ನೀಡಿ ಎಂದು ಮನವಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಌಂಡ್​ ಗ್ಯಾಂಗ್‌ ಅನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಸದ್ಯ ಒಬ್ಬರಾದ ಮೇಲೆ ಒಬ್ಬ ಆರೋಪಿಗಳನ್ನು ಪೊಲೀಸರು ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಕರೆ ತಂದು ಜಡ್ಜ್ ಮುಂದೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: ನಟ ದರ್ಶನ್ ‘die hard fans’ಗೆ ಸ್ಟಾರ್ ಡೈರೆಕ್ಟರ್‌ ರಾಮ್‌ಗೋಪಾಲ್ ವರ್ಮಾ ಎಚ್ಚರಿಕೆ; ಏನಂದ್ರು?

ಈ ವೇಳೆ ಪೊಲೀಸ್​ ಅಧಿಕಾರಿಗಳು ಆರೋಪಿಗಳನ್ನು ಮತ್ತೆ 8 ದಿನ ಕಸ್ಟಡಿಗೆ ಕೇಳಿದ್ದಾರೆ. ಈ ಕೊಲೆ ಕೇಸ್ ಸಂಬಂಧ ಸಾಂದರ್ಭಿಕ ಸಾಕ್ಷಿಗಳನ್ನು ಮ್ಯಾಚ್ ಮಾಡಬೇಕಿದೆ. ಈ ಕೃತ್ಯದಲ್ಲಿ ಸಾಕ್ಷಿ ನಾಶ ಯತ್ನ ನಡೆದಿದೆ. ಮೃತ ದೇಹ ಡಿಸ್ಪೋಸ್ ಮಾಡಲು ಡೀಲ್ ಆಗಿದೆ. 30 ಲಕ್ಷಕ್ಕೆ ಎ2 ಆರೋಪಿ ದರ್ಶನ್ ಡೀಲ್ ನೀಡಿದ್ದಾನೆ. ಅದರ ರಿಕವರಿ ಸಹ ಮಾಡಲಾಗಿದೆ. ಲಕ್ಷ ಲಕ್ಷ ಹಣವನ್ನ ವಿವಿಧ ಆರೋಪಿಗಳಿಂದ ಸೀಜ್ ಆಗಿದೆ. ಅಲ್ಲದೇ ಪ್ರಕರಣದಲ್ಲಿ ಬಹಳ ದೊಡ್ಡ ಸಂಚು ನಡೆದಿದೆ. ಸಾಕ್ಷಿ ನಾಶ ಮಾಡಲು ಆರೋಪಿಗಳಿಂದ ಸಂಚು ನಡೆದಿದೆ. ಅದಕ್ಕೆ ಸ್ಥಳ ಮಹಜರು ವೇಳೆ ಅನೇಕ ಸಾಕ್ಷಿಗಳು ಲಭ್ಯವಾಗಿದೆ. ಆರೋಪಿಗಳು ಕೃತ್ಯದ ಬಗ್ಗೆ ಸ್ವತಃ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್​ ವಿರುದ್ಧ ಸ್ಟೇಟಸ್​ ಹಾಕಿದ್ದಕ್ಕೆ ನಿನ್ನನ್ನು ಜೀವಂತ ಸುಡುತ್ತೇವೆ ಎಂದ ಅಭಿಮಾನಿ! ಮುಂದೇನಾಯ್ತು ಗೊತ್ತಾ?

ಜಗದೀಶ್, ಅನುರನ್ನು ನಿನ್ನೆ ವಶಕ್ಕೆ ಪಡೆದಿದ್ದೇವೆ. ಹೀಗಾಗಿ ಎಲ್ಲರ ಮತ್ತೆ ಮುಖಾಮುಖಿ ವಿಚಾರಣೆ ಅಗತ್ಯ ಇದೆ. ಈ ಘಟನೆಯಲ್ಲಿ ಭೀಕರವಾಗಿ ಮೃತನ ಕೊಲ್ಲಲಾಗಿದೆ. ಘಟನೆಯಲ್ಲಿ ಕೃತ್ಯಕ್ಕೆ ಬಳಸಿದ ವಾಹನಗಳ ಸೀಜ್ ಮಾಡಿದ್ದೇವೆ. ದರ್ಶನ್ ಮತ್ತಷ್ಟು ದಿನ ಕಷ್ಟಡಿಗೆ ಬೇಕು. ಆರೋಪಿ ದರ್ಶನ್ ಕೊಲೆ ಬಳಿಕ ಮೈಸೂರಿಗೆ ಹೋಗಿದ್ದಾನೆ. ಅಲ್ಲಿ ಘಟನೆಯ ಬಗ್ಗೆ ಇತರ ಆರೋಪಿಗಳ ಜೊತೆ ಸಂಭಾಷಣೆ ಇದೆ. ಅಲ್ಲದೇ ಆರೋಪಿ ಪ್ಲಾನ್​ನಂತೆ ಕೆಲ ಆರೋಪಿಗಳು ಸೆರೆಂಡರ್​ ಆಗಿದ್ದಾರೆ. ಸುಳ್ಳು ಕಥೆ ಹೇಳಿ ಪೊಲೀಸರಿಗೆ ಸೆರೆಂಡರ್​ ಹೋಗಿದ್ದಾರೆ. ಹೀಗಾಗಿ ಆರೋಪಿಗಳನ್ನು ಮತ್ತಷ್ಟು ದಿನ ಕಷ್ಟಡಿಗೆ ನೀಡಲು ಪೊಲೀಸರು ಜಡ್ಜ್​ಗೆ​ ಜಡ್ಜ್​ಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಬಿಗ್‌ ಶಾಕ್‌; ಮತ್ತೆ ಎಷ್ಟು ದಿನ ಪೊಲೀಸ್ ಕಸ್ಟಡಿ?

https://newsfirstlive.com/wp-content/uploads/2024/06/darshan27.jpg

Load More