newsfirstkannada.com

ನಿದ್ದೆಯಿಲ್ಲ.. ಜೈಲೂಟ ಸೇರುತ್ತಿಲ್ಲ.. ಪರಪ್ಪನ ಅಗ್ರಹಾರದಲ್ಲಿ ಮೌನಕ್ಕೆ ಶರಣಾದ ದರ್ಶನ್‌ಗೆ ಬಿಗ್‌ ಶಾಕ್!

Share :

Published June 23, 2024 at 10:12pm

  ತಡರಾತ್ರಿವರೆಗೂ ಕುಳಿತಲ್ಲೇ ಮಂಕಾಗಿ ಕೂತಿದ್ದ ನಟ ದರ್ಶನ್

  ಜುಲೈ 4ರವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರಬೇಕಾದ ಪರಿಸ್ಥಿತಿ

  ಜೈಲಿನಲ್ಲಿ ಯಾರ ಜೊತೆ ಮಾತನಾಡದೇ ಮೌನಕ್ಕೆ ಶರಣಾದ ದಾಸ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್​ ಜೈಲು ಪಾಲಾಗಿದ್ದಾರೆ. ಜುಲೈ 4ರವರೆಗೆ ದರ್ಶನ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಈಗಾಗಲೇ ಒಂದು ರಾತ್ರಿ ಪರಪ್ಪನ ಅಗ್ರಹಾರದಲ್ಲಿ ಕಳೆದಿದ್ದಾರೆ. ಜೈಲು ಸೇರಿದ ಬೆನ್ನಲ್ಲೇ ದರ್ಶನ್​ ಮೌನಕ್ಕೆ ಶರಣಾಗಿದ್ದಾರೆ. ತಡರಾತ್ರಿವರೆಗೂ ಕುಳಿತಲ್ಲೇ ಮುಂಕಾಗಿದ್ದಾರೆ.

ಇದನ್ನೂ ಓದಿ: ದರ್ಶನ್​ ಸಂಸಾರದಲ್ಲಿ ಮೊದಲು ಹುಳಿ ಹಿಂಡಿದ್ದೇ ಆ ನಟಿ; ಸ್ಫೋಟಕ ಹೇಳಿಕೆ ನೀಡಿದ ನಿರ್ಮಾಪಕ ಓಂ ಪ್ರಕಾಶ್ 

ಅಂದು ಹಲ್ಲೆ.. ಇಂದು ಕೊಲೆ.. 2ನೇ ಬಾರಿ ಜೈಲು ಸೇರಿದ ದರ್ಶನ್‌
ತಡರಾತ್ರಿವರೆಗೂ ಕುಳಿತಲ್ಲೇ ಮಂಕಾಗಿದ್ರಂತೆ ಚಾಲೆಂಜಿಂಗ್​ ಸ್ಟಾರ್​

ಚಾಲೆಂಜಿಂಗ್​ ಸ್ಟಾರ್​ 13 ವರ್ಷಗಳ ಬಳಿಕ ಮತ್ತೊಮ್ಮೆ ಪರಪ್ಪನ ಅಗ್ರಹಾರದ ದರ್ಶನ ಪಡೆದಿದ್ದು, ಒಲ್ಲದ ಮನಸ್ಸಿನಲ್ಲೇ ಮೊದಲ ದಿನ ಕಳೆದಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಅರೆಸ್ಟ್​ ಆಗಿದ್ದ ನಟ ದರ್ಶನ್​ನನ್ನು 12 ದಿನಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು, ತನಿಖೆ ವೇಳೆ ನಟ ದರ್ಶನ್​ ಕೊಲೆಯಲ್ಲಿ ಭಾಗಿಯೋಗಿರೋದು ದೃಢಪಟ್ಟ ಕಾರಣ ದರ್ಶನ್​ನನ್ನು ಜುಲೈ 4ರವರೆಗೆ ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅದರಂತೆ, ನಟ ದರ್ಶನ್​ನನ್ನು ನಿನ್ನೆ ಸಂಜೆ 7.30ರ ಸುಮಾರಿಗೆ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​ ಮಾಡಲಾಯಿತು.

ದರ್ಶನ್​ ಮೊದಲ ದಿನದ ದಿನಚರಿ

ಸೆಂಟ್ರಲ್ ಜೈಲಿನಲ್ಲಿ ನಟ ದರ್ಶನ್ ವಿಚಾರಣಾಧೀನ ಕೈದಿ ನಂ. 6106
ರಾತ್ರಿ ಜೈಲ್​ ಮೆನುವಿನಂತೆ ಮುದ್ದೆ, ಚಪಾತಿ, ಅನ್ನ, ಸಾಂಬಾರ್, ಮಜ್ಜಿ
ದರ್ಶನ್​ ಅನ್ನ ಸೇವಿಸಿಲ್ಲ. ಕೇವಲ ಚಪಾತಿ ಪಲ್ಯ, ಮಜ್ಜಿಗೆ ಸೇವಿದ್ದಾರೆ
ಜೈಲು ಸೇರಿದ ದರ್ಶನ್​ ತಡರಾತ್ರಿವರೆಗೂ ಕುಳಿತಲ್ಲೇ ಮಂಕಾಗಿದ್ದರಂತೆ
ರಾತ್ರಿ 11:30ರ ಸುಮಾರಿಗೆ ನಿದ್ರಿಸಿದ್ದು ಮುಂಜಾನೆ 6:30ರ ವೇಳೆಗೆ ಎಚ್ಚರ
ಬೆಳಗ್ಗೆ ನಿತ್ಯ ಕರ್ಮ ಮುಗಿಸಿ ಕೊಠಡಿಯಲ್ಲಿ ಕುಳಿತ ಆರೋಪಿ ದರ್ಶನ್
ಜೈಲಿನ ಮೆನು ಪ್ರಕಾರ ಬೆಳಗ್ಗೆ ದರ್ಶನ್​ಗೆ ಪಲಾವ್ ನೀಡಿದ್ದ ಸಿಬ್ಬಂದಿ
ಯಾರ ಜೊತೆಯೂ ಮಾತನಾಡದೇ ಮೌನಕ್ಕೆ ಶರಣಾದ ‘ದಾಸ’!

ನಟ ದರ್ಶನ್​ ಪರಪ್ಪನ ಅಗ್ರಹಾರ ದರ್ಶನ​ ಮಾಡ್ತಿರೋದು ಇದೇ ಮೊದಲೇನಲ್ಲ. 13 ವರ್ಷಗಳ ಹಿಂದೆ ಪತ್ನಿ ಮೇಲೆ ಹಲ್ಲೆ ಮಾಡಿ, ಜೈಲು ಸೇರಿದ್ದರು. ಆಗ ತಮ್ಮ ನಡವಳಿಕೆ ಬದಲಿಸಿಕೊಂಡು ಬುದ್ಧಿ ಕಲಿತಿದ್ರೆ ಇವತ್ತು ಮತ್ತೊಮ್ಮೆ ಪರಪ್ಪನ ಅಗ್ರಹಾರದ ದರ್ಶನ ಮಾಡೋ ಪ್ರಮಯವೇ ಬರ್ತಿರಲ್ಲ. ಆದ್ರೆ ಗೆಳತಿಗಾಗಿ ಮಾಡಬಾರದ ಕೆಲಸ ಮಾಡಿ, ಮತ್ತೊಮ್ಮೆ ಜೈಲು ಪಾಲಾಗಿದ್ದಾರೆ.

ಅಂದು ಹಲ್ಲೆ ಪ್ರಕರಣದಲ್ಲಿ ಏಕಾಂಗಿಯಾಗಿ ಜೈಲುವಾಸ ಅನುಭವಿಸಿದ್ದ ದಾಸನಿಗೆ, ಈ ಬಾರಿ ಜೊತೆಗಾರರು ಇದ್ದಾರೆ. ದರ್ಶನ್ ಕೊಠಡಿಯಲ್ಲಿ ಸಹಖೈದಿ ವಿನಯ್, ಡಿ ಬಾಸ್​ಗೆ ಕಂಪನಿ ಕೊಡ್ತಿದ್ದಾರೆ. ಆದ್ರೆ, ಜೈಲಿನ ಸೆಕ್ಯೂರಿಟಿ ರೂಂ. ನಂ.3 ನಲ್ಲಿ ಇರುವ ದರ್ಶನ್​ ಯಾರೊಂದಿಗೂ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರಂತೆ.

ಇದನ್ನೂ ಓದಿ: ನಟಿ ಸೋನಾಲ್ ಮದುವೆ ಆಗ್ತಾರಾ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್; ಇದು ಎಷ್ಟು ನಿಜ? 

ನಟ ದರ್ಶನ್​ ಮೊಬೈಲ್​ ವಶಕ್ಕೆ ಪಡೆದ ಪೊಲೀಸರು
ಕೊಲೆ ಕೇಸ್​ನಲ್ಲಿ ದರ್ಶನ್​ನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿರುವ ಪೊಲೀಸರು, ತನಿಖೆಯನ್ನೂ ಮುಂದುವರಿಸಿದ್ದಾರೆ. ಕೋರ್ಟ್​ ಅನುಮತಿಯೊಂದಿಗೆ ತನಿಖೆಗಾಗಿ ನಟ ದರ್ಶನ್‌ ಅವರ ಮೊಬೈಲ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾನು ಎಂಥಾ ಕೆಲಸ ಮಾಡಿಬಿಟ್ಟೆ ಎಂದು ನೆನೆದು ಮೊದಲ ದಿನ ಮೌನಕ್ಕೆ ಶರಣಾಗಿದ್ದಾರೆ. ನಾಳೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಪ್ರಕರಣದ ವಿಚಾರಣೆ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿದ್ದೆಯಿಲ್ಲ.. ಜೈಲೂಟ ಸೇರುತ್ತಿಲ್ಲ.. ಪರಪ್ಪನ ಅಗ್ರಹಾರದಲ್ಲಿ ಮೌನಕ್ಕೆ ಶರಣಾದ ದರ್ಶನ್‌ಗೆ ಬಿಗ್‌ ಶಾಕ್!

https://newsfirstlive.com/wp-content/uploads/2024/06/darshan43.jpg

Load More