ಇದು ಬಡ ಮಹಿಳೆಯರ ಹಲವು ದಶಕಗಳ ಹೋರಾಟಕ್ಕೆ ಸಿಕ್ಕ ಜಯ
ಒಟ್ಟು 5,329 ಮದ್ಯದ ಅಂಗಡಿಗಳಲ್ಲಿ ಒಂದೇ ದಿನ 500 ಬಾರ್ ಕ್ಲೋಸ್
ಪ್ರಣಾಳಿಕೆಯಲ್ಲಿ ಕೊಟ್ಟ ಗ್ಯಾರಂಟಿ ಭರವಸೆ ಈಡೇರಿಸಲು ಸಜ್ಜಾದ ಸರ್ಕಾರ
ಚೆನ್ನೈ; ತಮಿಳುನಾಡು ಬಡ ಮಹಿಳೆಯರ ಹಲವು ದಶಕಗಳ ಹೋರಾಟಕ್ಕೆ ಜಯ ಸಂದಿದೆ. ಕಳೆದ ಹತ್ತಾರು ವರ್ಷಗಳಿಂದ ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಬೀದಿಗಿಳಿದು ಮಹಿಳಾ ಸಂಘಟನೆಗಳು ಹೋರಾಟ ನಡೆಸುತ್ತಿದ್ದವು. ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಮದ್ಯ ನಿಷೇಧಕ್ಕೆ ಆದೇಶ ನೀಡಿ ಎಂದು ಅರ್ಜಿ ಕೂಡ ಸಲ್ಲಿಸಲಾಗಿತ್ತು. ಈಗ ತಮಿಳುನಾಡಿನಲ್ಲಿ ಸಿಎಂ ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳ ಬಳಿಕ ಕ್ರಾಂತಿಕಾರಕ ನಿರ್ಣಯವನ್ನು ತೆಗೆದುಕೊಂಡಿದೆ. ಬರೋಬ್ಬರಿ 500 ಸರ್ಕಾರಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ.
2 ವರ್ಷಗಳ ಹಿಂದೆ ಆಂಧ್ರದಲ್ಲಿ ಸಿಎಂ ಜಗನ್ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರವು ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಸುದ್ದಿಯಾಗಿತ್ತು. ಇದೀಗ ತಮಿಳುನಾಡು ಸರದಿ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ರಾಜ್ಯದಲ್ಲಿ ಮದ್ಯ ನಿಷೇಧಿಸುವ ಭರವಸೆ ನೀಡಿತ್ತು. ಡಿಎಂಕೆ ಪಕ್ಷದ ಪ್ರಣಾಳಿಕೆಯಲ್ಲಿ ಸಂಪೂರ್ಣವಾಗಿ ಮದ್ಯದ ಅಂಗಡಿ ಬಂದ್ ಮಾಡುವುದಾಗಿ ಹೇಳಿತ್ತು. ಇವತ್ತು ಎಂ.ಕೆ ಸ್ಟಾಲಿನ್ ಸರ್ಕಾರ ಒಂದೇ ದಿನ 500 ಮದ್ಯದಂಗಡಿ ಬಂದ್ ಮಾಡಲು ತೀರ್ಮಾನಿಸಿದೆ.
ತಮಿಳುನಾಡಿನಲ್ಲಿ ಸರ್ಕಾರಿ ಒಡೆತನದ ಒಟ್ಟು 5,329 ಮದ್ಯದ ಅಂಗಡಿಗಳು ಇವೆ. ಈ ಎಲ್ಲಾ ಬಾರ್‌ಗಳನ್ನು ಹಂತ, ಹಂತವಾಗಿ ಬಂದ್ ಮಾಡಲಾಗ್ತಿದ್ದು, ಇವತ್ತು ಒಂದೇ ದಿನ 500 ಬಾರ್ ಬಾಗಿಲುಗಳನ್ನು ಕ್ಲೋಸ್ ಮಾಡಲಾಗುತ್ತಿದೆ. TSMAC ಅಂದ್ರೆ ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್ ಈ ಬಗ್ಗೆ ಅಧಿಕೃತ ಸುತ್ತೋಲೆಯನ್ನು ಈಗಾಗಲೇ ಹೊರಡಿಸಿದೆ.
ಇತ್ತೀಚಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (ED) ಜಾರಿ ನಿರ್ದೇಶನಾಲಯ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿತ್ತು. ಸಚಿವ ಸೆಂಥಿಲ್ ಬಾಲಾಜಿ ಅವರು ಕಳೆದ ಏಪ್ರಿಲ್‌ನಲ್ಲಿ ಅಬಕಾರಿ ಇಲಾಖೆಯ ಮಂತ್ರಿಯಾಗಿದ್ದರು. ಸೆಂಥಿಲ್ ಅವರು ಕಳೆದ ಏಪ್ರಿಲ್ 20ರಂದೇ 500 ಸರ್ಕಾರಿ ಬಾರ್‌ಗಳನ್ನ ಬಂದ್ ಮಾಡೋ ಆದೇಶ ನೀಡಿದ್ದರು. ಈ ಮದ್ಯಕ್ರಾಂತಿಯ ಆದೇಶ ಇವತ್ತು ಜಾರಿಯಾಗ್ತಿದ್ದು, ಎಂ.ಕೆ ಸ್ಟಾಲಿನ್ ಸರ್ಕಾರದ ನಿರ್ಣಯ ಭಾರೀ ಚರ್ಚೆಗೆ ಗುರಿಯಾಗಿದೆ. ವಿರೋಧ ಪಕ್ಷಗಳಾದ PMK ಕೂಡ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧದ ವಿರುದ್ಧ ಹೋರಾಟಗಳನ್ನ ನಡೆಸಿತ್ತು. ತಡವಾಗಿಯಾದರೂ ಸ್ಟಾಲಿನ್ ಸರ್ಕಾರ ಸರ್ಕಾರಿ ಲಿಕ್ಕರ್ ಶಾಪ್‌ಗಳನ್ನ ಬಂದ್ ಮಾಡ್ತಿರೋದನ್ನ ಸ್ವಾಗತಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ