newsfirstkannada.com

ಸರ್ಕಾರದಿಂದ ಬಿಗ್​ ಶಾಕ್​; ಕಾರ್​​, ಜಮೀನು, ಮನೆ ಇದ್ದವರ BPL ಕಾರ್ಡ್​ ರದ್ದಾಗುತ್ತಾ?

Share :

17-08-2023

  ರಾಜ್ಯದ ಜನತೆಗೆ ಸರ್ಕಾರದಿಂದ ಬಿಗ್​ ಶಾಕ್​​..!

  ಯಾರ ಬಿಪಿಎಲ್​​ ಕಾರ್ಡ್​​ ರದ್ದಾಗಲಿದೆ ಗೊತ್ತಾ?

  ಸದ್ಯದಲ್ಲೇ ನಡೆಯಲಿದೆ ಮನೆ ಮನೆ ಸಮೀಕ್ಷೆ..!

ಬೆಂಗಳೂರು: ಅನ್ನಭಾಗ್ಯ ಬಡವರ ಆಶಾಕಿರಣ. ಕಾಂಗ್ರೆಸ್ ನೀಡಿರೋ ಗ್ಯಾರಂಟಿಗಳಲ್ಲಿ ಒಂದಾಗಿರೋ ಈ ಯೋಜನೆಯನ್ನ ಹಲವರು ದುರುಪಯೋಗ ಪಡಿಸಿಕೊಳ್ತಿದ್ದಾರೆ ಅನ್ನೋ ಮಾತು ಬಹಳ ದಿನಗಳಿಂದ ಕೇಳಿ ಬರ್ತಿತ್ತು. ಕೇವಲ ಅವಶ್ಯಕತೆ ಇದ್ದವರಿಗೆ ಮಾತ್ರ ಇದ್ರ ಉಪಯೋಗ ಆಗ್ತಿಲ್ಲ. ಅದ್ರ ಬದಲಿಗೆ ಉಳ್ಳವರು ಕೂಡ ಅನ್ನಭಾಗ್ಯವನ್ನ ದುರುಪಯೋಗ ಪಡಿಸಿಕೊಳ್ತಿದ್ದಾರೆ. ಇದೇ ನಿಟ್ಟಿನಲ್ಲಿ ಅಂತವ್ರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ.

ಅರ್ಹತೆ ಇಲ್ಲದಿದ್ರೂ ಬಿಪಿಎಲ್ ಕಾರ್ಡ್‌ ಹೊಂದಿ ಅನ್ನಭಾಗ್ಯ ರೇಷನ್ ಪಡೆಯುತ್ತಿದ್ದವರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ್ ಬಳಕೆದಾರರ ಸದ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಸರ್ವೇ ಮಾಡಲು ಮುಂದಾಗಿದೆ. ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆರು ಮಾನದಂಡದ ಮೇಲೆ ಸರ್ವೇಗೆ ಸಿದ್ಧತೆ ನಡೆಸ್ತಿದ್ದು, ಆ ಆರು ಮಾನದಂಡ ಇಲ್ದೇ ಇದ್ರೆ ಅವ್ರ ಬಿಪಿಎಲ್ ಕಾರ್ಡ್ ರದ್ದು ಆಗಲಿದೆ.

ಮಾನದಂಡಗಳೇನು?

 • ಕುಟುಂಬ ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು
 • 3 ಹೆಕ್ಟರ್‌ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು
 • ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಇರಬಾರದು
 • ಕುಟುಂಬದವ್ರು ಯಾವುದೇ ಸರ್ಕಾರಿ ನೌಕರರಾಗಿರಬಾರದು
 • ನಗರದ ಭಾಗದಲ್ಲಿ ಮನೆ ವಿಸ್ತೀರ್ಣ 1000 sqt ಮೀರಬಾರದು
 • ವಾಣಿಜ್ಯ ತೆರಿಗೆ, ಆದಾಯ ತೆರಿಗೆ, IT ರಿಟರ್ನ್ಸ್ ಪಾವತಿದಾರರು

ಮಾನದಂಡಗಳ ವ್ಯಾಪ್ತಿಗೆ ಬಂದು ಆರ್ಥಿಕ ಸ್ಥಿತಿ ಸುಧಾರಿಸಿದ್ರೂ, ಈಗಾಗಲೇ ಸರ್ವೇ ನಡೆಸಿ ಆಹಾರ ಇಲಾಖೆ 35 ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳನ್ನ ರದ್ದು ಮಾಡಿದೆ. ಅಲ್ದೇ, ಸಾವನ್ನಪ್ಪಿರೋ ಸುಮಾರು 4 ಲಕ್ಷದ 55 ಸಾವಿರ ಜನರ ಹೆಸರನ್ನ ಕಾರ್ಡ್‌ನಿಂದ ಅಳಿಸಿ ಹಾಕಿದೆ. ಇದ್ರಿಂದ ಸರ್ಕಾರಕ್ಕೆ ತಿಂಗಳಿಗೆ 6 ರಿಂದ 7 ಕೋಟಿ ಉಳಿತಾಯವಾಗ್ತಿದೆ.

ಆರ್‌ಟಿಓ ಪ್ರಕಾರ ರಾಜ್ಯದಲ್ಲಿ ಒಟ್ಟು 44 ಲಕ್ಷದ 62 ಸಾವಿರದ 107 ವೈಟ್‌ ಬೋರ್ಡ್‌ ಕಾರುಗಳಿವೆ. ಸದ್ಯ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಮಂದಿ BPL ಕಾರ್ಡ್ ಹೊಂದಿದ್ದು, ಅನ್ನಭಾಗ್ಯದ ಫಲಾನುಭವಿಗಳಾಗಿದ್ದಾರೆ. ಇದೀಗ ಸರ್ವೇ ಶುರುವಾದ್ರೆ ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚಿನ ಮಂದಿಯ BPL ಕಾರ್ಡ್ ರದ್ದು ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರದಿಂದ ಬಿಗ್​ ಶಾಕ್​; ಕಾರ್​​, ಜಮೀನು, ಮನೆ ಇದ್ದವರ BPL ಕಾರ್ಡ್​ ರದ್ದಾಗುತ್ತಾ?

https://newsfirstlive.com/wp-content/uploads/2023/07/Siddu_DKS-1.jpg

Load More