ಕರೆಂಟ್ ಬಿಲ್ ಏರಿಕೆ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಶಾಕ್..!
ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಇದೀಗ ಸೋಲಾರ್ ಸಬ್ಸಿಡಿ ಕಟ್..!
‘ಗೃಹಜ್ಯೋತಿ’ ಯೋಜನೆಗೆ ತಟ್ಟಲಿದ್ಯಾ ಜಲ ‘ವಿದ್ಯುತ್’ ಕ್ಷಾಮದ ಎಫೆಕ್ಟ್
ಬೆಂಗಳೂರು: ವಿದ್ಯುತ್ ದರ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಮತ್ತೊಂದು ಬಿಸಿ ತಟ್ಟಿದೆ. ಸೋಲಾರ್ ಬಳಕೆಗೆ ಸಿಗುತ್ತಿದ್ದ ಸಬ್ಸಿಡಿಗೆ KERC ಬ್ರೇಕ್ ಹಾಕಿದೆ. ಇದರಿಂದ ಸಬ್ಸಿಡಿಯ ಲಾಭ ಪಡೆಯುತ್ತಿದ್ದ ನಗರ ಪ್ರದೇಶದ ಜನರಿಗೆ ಗ್ಯಾರಂಟಿ ಬಿಸಿ ಮುಟ್ಟಿದೆ. ಇನ್ನು ವಿದ್ಯುತ್ ದರ ಏರಿಕೆ ವಿರುದ್ಧವೂ ದಿನದಿಂದ ದಿನಕ್ಕೆ ಜನಾಕ್ರೋಶ ಹೆಚ್ಚಾಗುತ್ತಿದೆ. ಇದರ ಮಧ್ಯೆ, ಗೃಹಜ್ಯೋತಿಗೆ ಜಲಕ್ಷಾಮದ ಎಫೆಕ್ಟ್ ತಟ್ಟುವ ಲಕ್ಷಣಗಳು ಗೋಚರಿಸಿವೆ.
ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಇದೀಗ ಸೋಲಾರ್ ಸಬ್ಸಿಡಿ ಕಟ್!
ಹೌದು! ವಿದ್ಯುತ್ ದರ ಏರಿಕೆಯಿಂದ ಮೊದಲೇ ಕಂಗಾಲಾಗಿದ್ದ ಜನರಿಗೆ ಕರ್ನಾಟಕ ವಿದ್ಯುತ್ಚ್ಛಕ್ತಿ ನಿಯಂತ್ರಣ ಮಂಡಳಿ ಮತ್ತೊಂದು ಶಾಕ್ ನೀಡಿದೆ. ಸೋಲಾರ್ ಬಳಕೆಗೆ ಸಿಗುತ್ತಿದ್ದ ಸಬ್ಸಿಡಿಗೆ ಕೆಇಆರ್ಸಿ ಕೊಕ್ಕೆ ಹಾಕಿದೆ.
2007ರಿಂದ ಸೋಲಾರ್ ಬಳಕೆಗೆ ಉತ್ತೇಜನ ನೀಡಲು KERC ಒಂದು ಯೂನಿಟ್ಗೆ 50 ಪೈಸೆಯಂತೆ ಗರಿಷ್ಟ 50 ರೂಪಾಯಿವರೆಗೆ ಸಬ್ಸಿಡಿ ನೀಡ್ತಿತ್ತು. ಆದ್ರೆ, ಈ ಸಬ್ಸಿಡಿಯನ್ನು 2024ರ ದರ ಪಟ್ಟಿಯಲ್ಲಿ KERC ಕೈ ಬಿಟ್ಟಿದೆ. ಈ ಕುರಿತಾಗಿ KERC ಹೊಸ ಆದೇಶ ಹೊರಡಿಸಿದೆ. ಇದರಿಂದ ಸಬ್ಸಿಡಿಯ ಲಾಭ ಪಡೆಯುತ್ತಿದ್ದ ನಗರ ಪ್ರದೇಶದ ಜನರಿಗೆ ಬಿಸಿ ಮುಟ್ಟಿದೆ. ಸೋಲಾರ್ ಸಬ್ಸಿಡಿ ಜೊತೆಗೆ ಬ್ಯಾಂಕ್ ಮೂಲಕ ಆಟೋಮೆಟಿಕ್ ಬಿಲ್ ಪಾವತಿ ಮಾಡುವವರಿಗಿದ್ದ ಶೇ. 25ರಷ್ಟು ರಿಯಾಯಿತಿಯೂ ಕಡಿತಗೊಳಿಸಲಾಗಿದೆ.
ಎಸ್ಕಾಂ ವಾದವೇನು?
ಸೋಲಾರ್ ಬಳಕೆದಾರರಿಗೆ ಗರಿಷ್ಠ 50 ರೂ. ವರೆಗೆ ಸಬ್ಸಿಡಿ ನೀಡಲಾಗ್ತಿತ್ತು. ಆದ್ರೀಗ 600 ಅಡಿ ಆರ್ಸಿಸಿ ಮನೆಗಳಿಗೂ ಸೋಲಾರ್ ಬಳಸುತ್ತಿದ್ದಾರೆ. ಹೀಗಾಗಿ ಸಬ್ಸಿಡಿ ನೀಡುವ ಅಗತ್ಯವಿಲ್ಲ ಅನ್ನೋದು ಎಸ್ಕಾಂ ವಾದವಾಗಿದೆ.
‘ಗೃಹಜ್ಯೋತಿ’ಗೆ ತಟ್ಟಲಿದ್ಯಾ ಜಲ ‘ವಿದ್ಯುತ್’ ಕ್ಷಾಮದ ಎಫೆಕ್ಟ್
ಮತ್ತೊಂದೆಡೆ ಗೃಹಜ್ಯೋತಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ತಿರುವ ಸರ್ಕಾರಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಅಭಾವ ಎದುರಾಗಿದೆ. ಸೂಕ್ತ ಸಮಯಕ್ಕೆ ಮಳೆಬಾರದ ಕಾರಣ, ಜಲ ಮೂಲ ಬತ್ತಿ ಹೋಗಿದೆ. ರಾಜ್ಯದ ಪ್ರಮುಖ ಜಲಾಶಯಗಳೆಲ್ಲಾ ನೀರಿಲ್ಲದೇ ಖಾಲಿಯಾಗಿವೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ಕುಸಿದಿದೆ. 123 ಟಿಎಂಸಿ ನೀರಿನ ಸಾಮರ್ಥ್ಯವಿರುವ ಜಲಾಶಯದಲ್ಲಿ ಈಗ ಕೇವಲ 20 ಟಿಎಂಸಿ ನೀರು ಲಭ್ಯವಿದೆ. ಇದರಲ್ಲಿ 17 ಟಿಎಂಸಿ ಡೆಡ್ ಸ್ಟೋರೆಜ್. ಇನ್ನು ಪ್ರತಿನಿತ್ಯ 250 ಕ್ಯೂಸೆಕ್ಸ್ ನೀರು ವಿದ್ಯುತ್ ಉತ್ಪಾದನೆಗೆ ಬಳಕೆ ಆಗ್ತಿದ್ದು, ಇನ್ನೊಂದು ವಾರಗಳಲ್ಲಿ ಮಳೆ ಆಗದಿದ್ದರೆ, ಜಲ ವಿದ್ಯುತ್ ಉತ್ಪಾದನಾ ಘಟಕಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಇದು ನೇರವಾಗಿ ಗೃಹಜ್ಯೋತಿ ಯೋಜನೆ ಮೇಲೆ ಪರಿಣಾಮ ಬೀರೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ರಾಜ್ಯದ ಮನೆಗಳಿಗೆ ವರವಾಗಬೇಕಿದ್ದ, ಗೃಹಜ್ಯೋತಿಗೆ ಗ್ರಹಣ ಹಿಡಿದಿರುವಂತೆ ಕಾಣ್ತಿದೆ. ಈ ಗ್ರಹಣ ಆದಷ್ಟು ಬೇಗ ಬಿಡಲಿ ಎಂಬುದೇ ಜನರ ಆಶಯವಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ