/newsfirstlive-kannada/media/post_attachments/wp-content/uploads/2023/10/Team-India-2.jpg)
ಸದ್ಯ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಟೀಂ ಇಂಡಿಯಾ ಅಮೋಘ ಪ್ರದರ್ಶನ ನೀಡುತ್ತಿದೆ. ಬ್ಯಾಕ್​​ ಟು ಬ್ಯಾಕ್​​ ಐದಕ್ಕೆ ಐದು ಪಂದ್ಯಗಳನ್ನು ಗೆದ್ದು ಟೀಂ ಇಂಡಿಯಾ ಸದ್ಯದ ಪಾಯಿಂಟ್ಸ್​ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿದೆ.
ಇನ್ನು, ಬರೋಬ್ಬರಿ 20 ವರ್ಷಗಳ ಬಳಿಕ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್​ ತಂಡವನ್ನು ಸೋಲಿಸಿದೆ. ಅಕ್ಟೋಬರ್​​ 29ನೇ ತಾರೀಕಿನಂದು ಲಕ್ನೋದಲ್ಲಿ ಮುಂದಿನ ಪಂದ್ಯ ನಡೆಯಲಿದೆ. ಹೀಗಾಗಿ ಇನ್ನೂ ಐದು ದಿನಗಳ ಕಾಲ ಟೀಂ ಇಂಡಿಯಾ ಆಟಗಾರರು ಫ್ರೀ ಇದ್ದಾರೆ.
ಸದ್ಯ ಟೀಂ ಇಂಡಿಯಾ ಆಟಗಾರರಿಗೆ ರೆಸ್ಟ್​ ಕೊಡಲಾಗಿದೆ. ಧರ್ಮಶಾಲಾದಲ್ಲಿ ನೋಡಲು ಅತ್ಯಂತ ಸುಂದರವಾದ ತಾಣಗಳಿದ್ದು, ಟೀಂ ಇಂಡಿಯಾ ಆಟಗಾರರು ಟ್ರಿಪ್​ ಹೋಗಲಿದ್ದಾರೆ. ಆದರೆ, ಬಿಸಿಸಿಐ ಆಟಗಾರರು ಟ್ರಕಿಂಗ್​ ಹೋಗಲು ಅವಕಾಶ ಇಲ್ಲ ಎಂದು ತಿಳಿಸಿದೆ.
ಐಸಿಸಿ ಏಕದಿನ ವಿಶ್ವಕಪ್​​ ದೊಡ್ಡ ಟೂರ್ನಮೆಂಟ್. ಟ್ರಕ್ಕಿಂಗ್​ ಹೋಗಿ ಯಾವುದಾದ್ರೂ ಆಟಗಾರ ಇಂಜುರಿಗೆ ಒಳಗಾದ್ರೆ, ತಂಡಕ್ಕೆ ತಲೆನೋವಾಗಲಿದೆ. ಹೀಗಾಗಿ ಇದಕ್ಕೆ ಮ್ಯಾನೇಜ್‌ಮೆಂಟ್ ಸಿದ್ಧವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us