ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಂದಿದ್ದ ಕೇಸ್..!
ಪೊಲೀಸರಿಗೆ ಇನ್ನೂ ಸಿಗದ ಪ್ರಮುಖ ಆರೋಪಿ..!
ಆರೋಪಿ ಬಗ್ಗೆ ಪೊಲೀಸ್ರಿಗೆ ಸಿಕ್ತು ಮಹತ್ವದ ಸುಳಿವು
ಬೆಂಗಳೂರು: ಇತ್ತೀಚೆಗೆ ಅಪಾರ್ಟ್ಮೆಂಟ್ನಲ್ಲಿ ಕೊಲೆಯಾದ ಯುವತಿ ಆಕಾಂಕ್ಷಾ ಪ್ರಕರಣದ ಪ್ರಮುಖ ಆರೋಪಿ ಅರ್ಪಿತ್ ಇನ್ನೂ ಪತ್ತೆಯಾಗಿಲ್ಲ. ಆದ್ರೆ ಪೊಲೀಸರ ತನಿಖೆಯಲ್ಲಿ ಒಂದಷ್ಟು ಮಹತ್ವದ ಸುಳಿವುಗಳು ಸಿಕ್ಕಿವೆ ಎನ್ನಲಾಗಿದೆ. ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣದ ಕಡೆ ಅರ್ಪಿತ್ ಪ್ರಯಾಣ ಬೆಳೆಸಿದ್ದು, ಸ್ವಲ್ಪ ದೂರ ಆಟೋದಲ್ಲಿ ಪ್ರಯಾಣ ಮಾಡಿ ನಂತರ ಕಾಲ್ನಡಿಗೆಯಲ್ಲಿ ತೆರೆಳಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ಅರ್ಪಿತ್ ಕೊನೆಗೆ ಬಿ. ನಾರಾಯಣಪುರದಿಂದ ಯಾವ ಮಾರ್ಗದಲ್ಲಿ ತೆರಳಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಿಲ್ಲ. ಸದ್ಯ ಆಕಾಂಕ್ಷಾ ಫ್ಲಾಟ್ನಲ್ಲಿ ಸಿಕ್ಕ ಅರ್ಪಿತ್ ಮೊಬೈಲ್ನಲ್ಲಿ ಪೊಲೀಸ್ರು ಒಂದಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಹಾಗೆಯೇ ಆರೋಪಿಗಾಗಿ ನಾಲ್ಕು ವಿಶೇಷ ತಂಡಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹೈದರಾಬಾದ್ ಮೂಲದ ಆಕಾಂಕ್ಷ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆದರೆ ಯುವತಿ ಸಾವಿನ ಬಗ್ಗೆ ಅನುಮಾನ ಬಂದ ಪೊಲೀಸರಿಗೆ ತನಿಖೆ ವೇಳೆ ನಿಜ ಸಂಗತಿ ಬೆಳಕಿಗೆ ಬಂದಿದೆ. ಗೆಳೆಯ ಆಕಾಂಕ್ಷಳನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.
ಕೊಲೆ ಆಗಿದ್ದೇಗೆ..?
ಕೊಲೆ ಆರೋಪಿ ಅರ್ಪಿತ್ ದೆಹಲಿ ಮೂಲದವನಾಗಿದ್ದು, ಆಕಾಂಕ್ಷಾ ಮತ್ತು ಗೆಳೆಯ ಅರ್ಪಿತ್ ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಹಲವಾರು ದಿನಗಳಿಂದ ಇವರಿಬ್ಬರ ನಡುವೆ ಗಲಾಟೆ ಆಗುತಿತ್ತು. ಕೊನೆಗೆ ಇಬ್ಬರ ನಡುವೆ ಮತ್ತೊಮ್ಮೆ ಗಲಾಟೆ ಆಗಿದೆ. ಗಲಾಟೆ ವೇಳೆ ಇಬ್ಬರು ಬೇರೆಯಾಗುವ ಬಗ್ಗೆ ಮಾತಾಡಿದ್ದರು. ಈ ನಡುವೆ ಇಬ್ಬರು ಮನೆಯಲ್ಲಿ ಇರುವಾಗ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ