newsfirstkannada.com

ಟಿಶ್ಯೂ ವಿಚಾರಕ್ಕೆ ಕಿರಿಕ್​​.. ಯುವಕನಿಗೆ ಚಾಕುವಿನಿಂದ ಇರಿದ ಕೇಸ್​ಗೆ ಟ್ವಿಸ್ಟ್​​..!

Share :

Published October 29, 2023 at 8:07pm

    ಟಿಶ್ಯೂ ಪೇಪರ್​ನಿಂದ ಶುರುವಾಯ್ತು ಡಿಶುಂ ಡಿಶುಂ

    ಟಿಶ್ಯೂ ಪೇಪರ್​ ಕೊಡು ಎಂದಿದ್ದಕ್ಕೆ ಹೊಡೆದಾಟ!

    ಡಾಬಾ ಎದುರೇ ಬಡಿದಾಡಿಕೊಂಡ ಯುವಕರು

ಬೆಂಗಳೂರು: ರಸ್ತೆಯಲ್ಲಿ ಬಡಿದಾಡಿಕೊಂಡ ಯುವಕರು, ಇವರು ಯಾರು ರೌಡಿಗಳೂ ಅಲ್ಲ. ಅದರ ಬ್ಯಾಕ್​ಗ್ರೌಂಡ್ ಇರೋರಂತೂ ಅಲ್ವೇ ಅಲ್ಲ. ಈ ಜಗಳ ಶುರುವಾಗಿದ್ದೇ ಕೇವಲ ಒಂದು ಟಿಶ್ಯೂ ಪೇಪರ್​ನಿಂದ ಅಂದ್ರೆ ನೀವು ನಂಬಲೇಬೇಕು.

ಟಿಶ್ಯೂ ಪೇಪರ್​ ರೂವಾರಿಯಾದ ಈ ಜಗಳ, ಚಾಕು ಇರಿಯುವ ಹಂತಕ್ಕೆ ತಲುಪಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಅಪ್ಪು ಡಾಬಾ ಎದುರು ಯುವಕರು ಒಬ್ಬರಿಗೊಬ್ಬರು ಹೊಡೆದಾಟಕ್ಕಿಳಿದಿದ್ರು. ಗೆಳೆಯರ ಜೊತೆ ಊಟಕ್ಕೆ ಅಂತ ರಮೇಶ್ ಹಾಗೂ ಸತ್ತಾರ್ ಡಾಬಾಕ್ಕೆ ಬಂದಿದ್ರು. ಈ ವೇಳೆ, ಅದೇ ಡಾಬಾದಲ್ಲಿ ಮಾಲಿಕ್ ಮತ್ತು ವೀರೇಶ್ ಅನ್ನೋರೂ ಕೂಡ ಊಟಕ್ಕೆ ಬಂದಿದ್ರು. ವೀರೇಶ್​ನ ನೋಡಿ ಸತ್ತಾರ್ ವೇಯ್ಟರ್ ಅನ್ಕೊಂಡ್ಬಿಟ್ಟಿದ್ದ. ಹಾಗೆಂದುಕೊಂಡೇ ಟಿಶ್ಯೂ ಪೇಪರ್ ಕೊಡು ಅಂತ ವೀರೇಶ್​ಗೆ ಕೇಳಿದ್ದ. ಇದೇ ಯುವಕರ ಗಲಾಟೆಗೆ ಕಾರಣವಾಗಿತ್ತು.

ಯಾವಾಗ ಟಿಶ್ಯೂ ಪೇಪರ್ ಕೊಡು ಅಂತ ಸತ್ತಾರ್ ವೀರೇಶ್​ಗೆ ಕೇಳಿದ್ನೋ. ನನ್ನ ವೇಯ್ಟರ್ ಅಂತ ತಿಳಿದುಕೊಂಡಡಿದ್ದೀಯಾ ಅಂತ ವೀರೇಶ್ ಗಲಾಟೆ ಮಾಡಿದ್ದ. ಹೀಗೆ ಎರಡೂ ಗುಂಪುಗಳ ನಡುವೆ ಶುರುವಾದ ಗಲಾಟೆಯಲ್ಲಿ. ರಮೇಶ್ ಹಾಗೂ ಸತ್ತಾರ್​ಗೆ ವೀರೇಶ್ ಈರುಳ್ಳಿ ಕುಯ್ಯುವ ಚಾಕುವಿನಿಂದ ಚುಚ್ಬಿಟ್ಟಿದ್ದಾನೆ. ರಮೇಶ್, ಸತ್ತಾರ್​ಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದಾರೆ. ಇನ್ನು ಆರೋಪಿ ವೀರೇಶ್​ನನ್ನ ಮಾನ್ವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ ಪೊಲೀಸರು ವಿಚಾರಣೆ ಮುಂದುವರಿಸಿದ್ದು, ಯುವಕನನ್ನು ಕೋರ್ಟ್​ಗೆ ಒಪ್ಪಿಸಲಿದ್ದಾರೆ. ಇದಾದ ಬಳಿಕ ಕಾನೂನು ಪ್ರಕಾರ ಜೈಲು ಶಿಕ್ಷೆ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿಶ್ಯೂ ವಿಚಾರಕ್ಕೆ ಕಿರಿಕ್​​.. ಯುವಕನಿಗೆ ಚಾಕುವಿನಿಂದ ಇರಿದ ಕೇಸ್​ಗೆ ಟ್ವಿಸ್ಟ್​​..!

https://newsfirstlive.com/wp-content/uploads/2023/10/Tumkur-2.jpg

Load More