newsfirstkannada.com

ಹತ್ಯೆಯಾದ ದಿನ ದರ್ಶನ್​ ಜತೆ ಇದ್ದ ನಟ ಚಿಕ್ಕಣ್ಣ.. ಕೊಲೆ ಕೇಸ್​ಗೆ ಸ್ಫೋಟಕ​ ಟ್ವಿಸ್ಟ್​!

Share :

Published June 17, 2024 at 8:37pm

  ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ಚಿಕ್ಕಣ್ಣನಿಗೆ ಢವಢವ

  ರಾಜ್ಯವೇ ಬೆಚ್ಚಿ ಬಿದ್ದ ಕೇಸ್​ನಲ್ಲಿ ಚಿಕ್ಕಣ್ಣಗೆ ಭಾರೀ ಸಂಕಷ್ಟ..!

  ಪಾರ್ಟಿಯಲ್ಲಿ ಕೊಲೆ ಬಗ್ಗೆ ಚರ್ಚೆ ಮಾಡಿದ್ರಾ ನಟ ದರ್ಶನ್?

ಬೆಂಗಳೂರು: ರಾಜ್ಯವೇ ಬೆಚ್ಚಿ ಬಿದ್ದ ಕೇಸ್.. ದರ್ಶನ್​ ಗ್ಯಾಂಗ್​ನಿಂದ ಹತ್ಯೆಯಾದ ರೇಣುಕಾಸ್ವಾಮಿ ಕೇಸ್​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಈ ಮಧ್ಯೆ ಸ್ಯಾಂಡಲ್​ವುಡ್​ ಹಾಸ್ಯ ನಟ ಚಿಕ್ಕಣ್ಣನಿಗೂ ಕಾನೂನಿನ ಸಂಕಷ್ಟ ಶುರುವಾಗಿದೆ. ದರ್ಶನ್​ ಸಹವಾಸ ಮಾಡಿದ್ದ ಚಿಕ್ಕಣ್ಣನಿಗೆ ಇದೀಗ ಪೊಲೀಸರ ಹಿಂದೆ ಅಲಿಯಬೇಕಾದ ಸ್ಥಿತಿ ಬಂದಿದೆ.

ಡಿ ಗ್ಯಾಂಗ್​.. ದರ್ಶನ್​ ಅಂಡ್ ಗ್ಯಾಂಗ್​ನಿಂದ ಹತ್ಯೆಯಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕ್ಷಣಕ್ಕೊಂದು ಟ್ವಿಸ್​ಗಳು ಸಿಗ್ತಿವೆ.. ಈ ಮಧ್ಯೆ ಸ್ಯಾಂಡಲ್​ವುಡ್ ಸ್ಟಾರ್ ಕಾಮಿಡಿಯನ್ ಚಿಕ್ಕಣ್ಣನಿಗೆ ಢವ ಢವ ಶುರುವಾಗಿದೆ. ಇದೀಗ ಚಿಕ್ಕಣ್ಣನಿಗೂ ಕಾನೂನಿನ ಸಂಕಷ್ಟ ಶುರುವಾಗಿದೆ.

ರಾಜ್ಯವೇ ಬೆಚ್ಚಿ ಬಿದ್ದ ಕೇಸ್​ನಲ್ಲಿ ಹಾಸ್ಯನಟ ಚಿಕ್ಕಣ್ಣಗೆ ಸಂಕಷ್ಟ

ಹೌದು.. ರಾಜ್ಯವೇ ಬೆಚ್ಚಿ ಬಿದ್ದ ಕೇಸ್​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಸಿಕ್ಕಿದೆ. ಅವತ್ತು ಜೂನ್​ 8.. ಶನಿವಾರ ಅಂದ್ರೆ, ರೇಣುಕಾ ಸ್ವಾಮಿ ಕೊಲೆಯಾದ ದಿನ.. ಅವತ್ತು ದರ್ಶನ್ ಅಂಡ್ ಗ್ಯಾಂಗ್.. ಮಧ್ಯಾಹ್ನದಿಂದ ಸಂಜೆವರೆಗೂ ವಿನಯ್​ ಒಡೆತನದಲ್ಲಿರೋ ಸ್ಟೋನಿ ಬ್ರೂಕ್​ ಪಬ್​ನಲ್ಲಿ ವಿಕೇಂಡ್​ ಪಾರ್ಟಿ ಮಾಡಿತ್ತು.. ಫುಲ್ ಜಾಲಿ ಮೂಡ್​ನಲ್ಲಿತ್ತು.. ವಿಚಾರ ಏನಂದ್ರೆ, ಆ ಪಾರ್ಟಿಯಲ್ಲಿ ನಟ ಚಿಕ್ಕಣ್ಣನೂ ಇದ್ದರು ಅನ್ನೋ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಇದೀಗ ಚಿಕ್ಕಣ್ಣನಿಗೂ ಸಂಕಷ್ಟ ಎದುರಾಗಿದೆ.

ಪಾರ್ಟಿಯಲ್ಲಿ ಕೊಲೆ ಬಗ್ಗೆ ಚರ್ಚೆ ಮಾಡಿದ್ರಾ ನಟ ದರ್ಶನ್!​?

ಮಧ್ಯಾಹ್ನದಿಂದ ಸಂಜೆವರೆಗೂ ಸತತ ಮೂರ್ನಾಲ್ಕು ಗಂಟೆಗಳ ಕಾಲ ದರ್ಶನ್​ ಟೀಂ ಪಾರ್ಟಿ ಮಾಡಿದೆ.. ಈ ವೇಳೆ ನಟ ಚಿಕ್ಕಣ್ಣನೂ ಪಾರ್ಟಿಯಲ್ಲಿ ಜಾಯಿನ್​ ಆಗಿದ್ರು ಎನ್ನಲಾಗ್ತಿದೆ.. ಇನ್ನು, ಸಂಜೆಯಾಗ್ತಿದ್ದಂತೆ ಅದಾಗಲೇ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಪಟ್ಟಣಗೆರೆ ಶೆಡ್​​ ಕರೆತರಲಾಗಿತ್ತು.. ಇನ್ನು, ಮೊದಲಿಗೆ ಈ ವಿಚಾರವನ್ನ ಆರೋಪಿಗಳು ವಿನಯ್​ಗೆ ಮಾಹಿತಿ ನೀಡಿದ್ದಾರೆ. ಬಳಿಕ ​ವಿನಯ್​ ಈ ಬಗ್ಗೆ ಇನ್ಫಾರ್ಮ್​ ಮಾಡಿದ್ದೇ ತಡ, ದರ್ಶನ್​ ಸ್ವಲ್ಪ ಕೆಲಸ ಇದೆ ಎಂದು ಪಾರ್ಟಿಯ ಅರ್ಧದಲ್ಲೇ ಅಲ್ಲಿಂದ ಹೊರಟಿದ್ದಾರೆ.

ಇನ್ನು, ಪಾರ್ಟಿಯಲ್ಲಿ ನಟ ದರ್ಶನ್​ ಕೊಲೆ ಬಗ್ಗೆ ಆಗ್ಲಿ.. ರೇಣುಕಾಸ್ವಾಮಿ ಬಗ್ಗೆ ಆಗ್ಲಿ ಏನಾದ್ರೂ ದರ್ಶನ್​ ಬಾಯ್ಬಿಟ್ಟಿದ್ರಾ? ಅನ್ನೋ ಕುರಿತು ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ. ಹೀಗಾಗಿ, ಚಿಕ್ಕಣ್ಣನಿಗೆ ನೋಟಿಸ್​ ಕೊಟ್ಟಿದ್ದ ಪೊಲೀಸರು ಸ್ಟೋನಿ ಬ್ರೂಕ್​ ಪಬ್​ನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.. ನಟ ಚಿಕ್ಕಣ್ಣ, ವಿನಯ್ ಸೇರಿದಂತೆ ಹಲವು ಆರೋಪಿಗಳನ್ನ ಕರೆದೊಯ್ದ ಪೊಲೀಸ್ರು, ಪಬ್​ನಲ್ಲಿ ಇಂಚಿಂಚೂ ಮಾಹಿತಿ ಕಲೆ ಹಾಕ್ತಿದ್ದಾರೆ.

ಇನ್ನು, ಪಬ್​ನಲ್ಲಿ ಚಿಕ್ಕಣ್ಣನ ಜೊತೆ ಓರ್ವ ನಿರ್ಮಾಪಕರು ಕೂಡ ಇದ್ದರು ಎನ್ನಲಾಗ್ತಿದೆ.. ಆದ್ರೆ, ಅವರ ಕುರಿತು ಮಾಹಿತಿ ಹೊರಬಿದ್ದಿಲ್ಲ.. ಅದೇನೆ ಹೇಳಿ, ಇದನ್ನೆಲ್ಲಾ ಗಮನಿಸ್ತಾ ಇದ್ರೆ, ದರ್ಶನ್ ಸಹವಾಸ ಮಾಡಿದವರೇ ಯಾರೇ ಇರಲಿ ಅವರಿಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತೋದು ತಪ್ಪೋದಿಲ್ಲ ಅನ್ಸುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹತ್ಯೆಯಾದ ದಿನ ದರ್ಶನ್​ ಜತೆ ಇದ್ದ ನಟ ಚಿಕ್ಕಣ್ಣ.. ಕೊಲೆ ಕೇಸ್​ಗೆ ಸ್ಫೋಟಕ​ ಟ್ವಿಸ್ಟ್​!

https://newsfirstlive.com/wp-content/uploads/2024/06/Darshan_Chikkanna.jpg

Load More