2020ರ ಡಿಜೆ ಹಳ್ಳಿ-ಕೆಜಿ ಹಳ್ಳಿ ಪ್ರಕರಣ ಮತ್ತೆ ಮುನ್ನೆಲೆಗೆ
‘ಅಮಾಯಕ’ರ ಬಿಡುಗಡೆ ಮಾಡಿ ಎಂದ ತನ್ವೀರ್ ಸೇಠ್!
ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಯ್ತಾ ರಾಜ್ಯ ಸರ್ಕಾರ?
ಬೆಂಗಳೂರು: 2020 ಆಗಸ್ಟ್ ತಿಂಗಲ್ಲಿ ನಡೆದ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಿಂದ ಇಡೀ ನಗರವೇ ಹೊತ್ತಿ ಉರಿದಿತ್ತು. ಭಸ್ಮಾಸುರರು ಹಚ್ಚಿದ ಬೆಂಕಿಯಿಂದ ಪೊಲೀಸ್ ಠಾಣೆಗಳು ಭಸ್ಮವಾದವು. ಆಗಿನ ಶಾಸಕರ ಮನೆ ಕೂಡ ಸುಟ್ಟು ಕರಕಲಾಗಿತ್ತು. ಈಗ ಕಾವಲ್ ಭೈರಸಂದ್ರದಲ್ಲಿ ಪುಂಡತನ ತೋರಿದ್ದವರಿಗೆ ಅಮಾಯಕರ ಪಟ್ಟ ಕಟ್ಟಲಾಗಿದೆ. ಅವರ ಬಿಡುಗಡೆಗಾಗಿ ಪತ್ರ ಪಾಲಿಟಿಕ್ಸ್ ಶುರುವಾಗಿದೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಕಾವಲ್ ಭೈರಸಂದ್ರದ ಕಿಡಿಗೇಡಿಗಳು 2020ರಲ್ಲಿ ಸಿಲಿಕಾನ್ ಸಿಟಿಯನ್ನೇ ಬೆಂದಕಾಳೂರು ಮಾಡಲು ಮುಂದಾಗಿದ್ರು. ಬೆಂಕಿ ಹಚ್ಚಿ ಪುಂಡಾಟ ತೋರಿದ್ದ ಭಸ್ಮಾಸುರರನ್ನ ಹಿಡಿದು ಪೊಲೀಸರು ಜೈಲಿಗಟ್ಟಿದ್ರು. ಆಗಿನಿಂದ ಇಲ್ಲಿವರೆಗೂ ಕಿಡಿಗೇಡಿಗಳು ಕಂಬಿ ಹಿಂದೆಯೇ ಕೊಳೆಯುತ್ತಿದ್ದಾರೆ. ಆದ್ರೀಗ ಯಾವ ಪಕ್ಷದ ಶಾಸಕನ ಮನೆಗೆ ಬೆಂಕಿ ಇಟ್ಟಿದ್ರೋ ಅದೇ ಪಕ್ಷದ ನಾಯಕನೀಗ ಆರೋಪಿಗಳ ಬಿಡುಗಡೆಗೆ ಬ್ಯಾಟ್ ಬೀಸಿದ್ದಾರೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್.. ಬಂಧಿತರ ರಿಲೀಸ್‌ಗೆ ಪತ್ರ!
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್‌ನ ಎನ್‌ಐಎ ತನಿಖೆ ಮಾಡುತ್ತಿದೆ. ಬಂಧಿತ ಆರೋಪಿಗಳ ಜನ್ಮವನ್ನ ಜಾಲಾಡುತ್ತಿದೆ. ಈ ಹೊತ್ತಲ್ಲಿ ಅಧಿಕಾರ ಸಿಕ್ಕ ಕೂಡಲೇ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡ್ತಿದ್ಯಾ ಮಾತು ರಿಂಗಣಿಸುತ್ತಿದೆ. ಡಿಜೆಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರೋ ಪ್ರಮುಖ ಆರೋಪಿಗಳನ್ನ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜೊತೆಗೆ ಕಿಡಿಗೇಡಿಗಳನ್ನ ಅಮಾಯಕರು ಎಂದು ಕರೆದಿದ್ದಾರೆ.
ಸೇಠ್ ಪತ್ರದಲ್ಲೇನಿದೆ?
ಕಳೆದ 5 ವರ್ಷದಲ್ಲಿ ನಿರ್ದಿಷ್ಟ ಕೋಮಿನ ಜನರನ್ನೇ ಟಾರ್ಗೆಟ್ ಮಾಡಲಾಗಿದೆ. ಹಲವೆಡೆ ಅಮಾಯಕ ಯುವಕರು, ವಿದ್ಯಾರ್ಥಿಗಳನ್ನ ಬಂಧಿಸಲಾಗಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಗಲಭೆ ಕೇಸ್‌ನಲ್ಲಿ ಬಂಧಿತರಾದವರು ಇದ್ದಾರೆ. ವಿದ್ಯಾರ್ಥಿಗಳ ಮೇಲೆ ಸುಳ್ಳು ಮೊಕದ್ದಮೆ ಹೂಡಿ ಅವರನ್ನ ಬಂಧಿಸಲಾಗಿದೆ. ಸದರಿ ಮೊಕದ್ದಮೆಗಳನ್ನ ಪರಿಶೀಲಿಸಿ ಬಿಡುಗಡೆ ಮಾಡುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ಗೆ ಶಾಸಕ ತನ್ವೀರ್ ಸೇಠ್ ಪತ್ರ ಬರೆದಿದ್ದಾರೆ.
ಇನ್ನೂ ಶಾಸಕ ತನ್ವೀರ್ ಸೇಠ್ ಬರೆದಿರೋ ಪತ್ರಕ್ಕೆ ಕ್ರಮ ಕೈಗೊಳ್ಳಲು ಗೃಹ ಸಚಿವರು ಸೂಚನೆ ನೀಡಿದ್ದಾರೆ. ಈ ಸಂಬಂಧ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಡಾ.ಜಿ ಪರಮೇಶ್ವರ್ ಪತ್ರ ಬರೆದಿದ್ದಾರೆ.
ಗೃಹ ಸಚಿವರ ಸೂಚನೆಯೇನು?
ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಗಲಭೆ ಕೇಸ್‌ನಲ್ಲಿ ಬಂಧಿತರ ಮೊಕದ್ದಮೆಗಳನ್ನ ಮರು ಪರಿಶೀಲನೆ ಮಾಡಿ. ಶಾಸಕ ತನ್ವೀರ್ ಸೇಠ್ ಅಮಾಯಕರನ್ನ ಬಂಧಿಸಲಾಗಿದೆ ಎಂದು ಪತ್ರ ಬರೆದಿದ್ದಾರೆ. ಸದರಿ ಮೊಕದ್ದಮೆಗಳನ್ನು ನಿಯಮಾನುಸಾರವಾಗಿ ಪರಿಶೀಲಿಸಿ, ಮರು ಪರಿಶೀಲನೆ ನಡೆಸಿದ ಬಳಿಕ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹ ಸಚಿವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಪತ್ರದ ಬಗ್ಗೆ ಶಾಸಕ ತನ್ವೀರ್ ಸೇಠ್ ಮತ್ತೆ ಸಮರ್ಥನೆ
ಇನ್ನೂ ಸರ್ಕಾರಕ್ಕೆ ಬರೆದಿರೋ ಪತ್ರದ ಬಗ್ಗೆ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಸಮರ್ಥನೆ ಮಾಡಿಕೊಂಡಿದ್ದಾರೆ. ಪೊಲೀಸರು ನಿಯಂತ್ರಣ ಮಾಡಲು ಸಿಕ್ಕವರ ಮೇಲೆ ಕೇಸ್ ಹಾಕಿದ್ದಾರೆ. ಹೀಗಾಗಿ ಅವರನ್ನ ಬಿಡುಗಡೆ ಮಾಡುವಂತೆ ನಾನು ಮನವಿ ಮಾಡಿದ್ದೇನೆ ಎಂದಿದ್ದಾರೆ.
ಒಟ್ಟಾರೆ, ಶಾಸಕರೇನು ಬಂಧಿತರಲ್ಲಿ ಅಮಾಯಕರಿದ್ದಾರೆ ಎನ್ನುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಗಲಭೆ ಕೇಸ್‌ಗಳನ್ನ ಕೈಬಿಡುವ ಪ್ರಯತ್ನ ಮಾಡುತ್ತಿದ್ಯಾ? ಅಮಾಯಕ ಹೆಸರಲ್ಲಿ ಕಿಡಿಗೇಡಿಗಳನ್ನ ಬಿಡುಗಡೆ ಮಾಡುತ್ತಾ? ಅಧಿಕಾರ ಸಿಕ್ಕ ಕೂಡಲೇ ಅಲ್ಪಸಂಖ್ಯಾತರ ಓಲೈಕೆಗೆ ಸಿದ್ದರಾಮಯ್ಯ ಸರ್ಕಾರ ಇಳಿಯಿತಾ? ಎಂಬ ಪ್ರಶ್ನೆ ಉದ್ಭವಿಸಿರೋದಂತೂ ನಿಜ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ