ಪ್ರೀತಿ ಎಂಬ ಮಾಯಾ ಕುದುರೆ ಬೆನ್ನೇರಿದ್ದ ಯುವಕ
ಮಗಳ ಪ್ರಿಯಕರನಿಗೆ ಪೆಟ್ರೋಲ್ ಸುರಿದ ಅಪ್ಪಾ..!
ಸಂಬಂಧಿಕರೇ ಯುವಕನಿಗೆ ಪೆಟ್ರೋಲ್ ಸುರಿದಿದ್ದೇಕೆ?
ಬೆಂಗಳೂರು: ಸಿನಿಮಾಗಳಲ್ಲಿ ಪ್ರೀತಿ ಮಾಡಿದ್ರೆ ಹೀರೋಯಿನ್ ತಂದೆ ಹೀರೋ ಮೇಲೆ ಹಗೆ ಸಾಧಿಸೋದನ್ನ ನಾವು ನೀವು ನೋಡಿದ್ದೀವಿ. ಆದ್ರೆ ರೀಲ್ನಲ್ಲಿ ನಡೆಯುತ್ತಿದ್ದ ಇಂತಹ ಘಟನೆ ಈಗ ರಿಯಲ್ ಲೈಫ್ನಲ್ಲೂ ನಡೆದು ಹೋಗಿದೆ. ಮಗಳು ಯುವಕನೋರ್ವನ ಜೊತೆ ಪ್ರೀತಿ-ಪ್ರೇಮ ಎಂದು ಕ್ಯಾತೆ ತೆಗೆದಿದ್ದಕ್ಕೆ ಆಕೆಯ ಅಪ್ಪ ಅಗ್ನಿಪರೀಕ್ಷೆಯೊಂದು ತಂದೊಡ್ಡಿದ್ದಾನೆ. ಪ್ರೇಯಸಿಯ ಅಪ್ಪನ ಅಗ್ನಿಪರೀಕ್ಷೆಯನ್ನ ಎದುರಿಸಿ ಯುವಕ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
ಪ್ರೀತಿ.. ಪ್ರೇಮ.. ಪುಸ್ತಕದ ಬದನೆಕಾಯಿ.. ಈ ಮಾತು ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದ್ರೆ ಹದಿಹರೆಯದ ವಯಸ್ಸಲ್ಲಿ ಮೊಳಕೆಯೊಡೆವ ಪ್ರೀತಿಯ ಅನುಭವ ಉಸಿರು ನಿಲ್ಲೋವರೆಗೂ ಶಾಶ್ವತ. ಈ ಪ್ರೀತಿ ಕೆಲವರ ಪಾಲಿಗೆ ಕೆಂಪು ಗುಲಾಬಿಯಾದ್ರೆ ಇನ್ನೂ ಕೆಲವರಿಗೆ ಅದರ ಜೊತೆ ಇರೋ ಮುಳ್ಳಾಗುತ್ತೆ. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಅನ್ನೋ ಸವಾಲು ಸಹ ಎದುರಾಗಿಬಿಡುತ್ತೆ.
ಕೆಲವರ ಬಾಳಲ್ಲಿ ಕಾರ್ಮೋಡವಾಗಿ ಕವಿಯೋ ಈ ಪ್ರೀತಿ ಇನ್ನೂ ಕೆಲವರಿಗೆ ಮುಂಗಾರಿನ ಮಳೆಯಂತೆ ಸವಿ ನೆನಪುಗಳ ಸೋನೆ ಸುರಿಸುತ್ತೆ. ಇದೇ ರೀತಿ ಇಲ್ಲೊಬ್ಬ ಯುವಕನ ಬಾಳಿಗೂ ಇದೇ ಪ್ರೀತಿಯ ಕಾರ್ಮೋಡ ಕಗ್ಗತ್ತಲಾಗಿ ಕವಿದಿದೆ. ಪ್ರೀತಿಯ ಜ್ವಾಲೆ ಕೇವಲ ಮನಸನ್ನ ಮಾತ್ರವಲ್ಲ ಇಡೀ ದೇಹವನ್ನೇ ಹೊತ್ತಿ ಉರಿಯುವಂತೆ ಮಾಡಿದೆ.
ಯುವಕನ ಹೆಸರು ಶಶಾಂಕ್. ಹದಿಹರೆಯದ ವಯಸ್ಸಿಯನಲ್ಲಿ ಪ್ರೀತಿ ಎಂಬ ಮಾಯಾ ಕುದುರೆಯ ಬೆನ್ನೇರಿದ್ದ ಈತನಿಗೆ ಅದೇ ಪ್ರೀತಿಯಲ್ಲಿ ಅಗ್ನಿಪರೀಕ್ಷೆ ಎದುರಾಗಿದೆ.
ಮಗಳಿಗೆ ಪ್ರೀತಿ ಗೀತಿ.. ಅಪ್ಪನಿಗೆ ಆಗಿತ್ತು ಪಜೀತಿ!
ಹೆತ್ತು ಹೊತ್ತು ಸಾಕಿ ಸಲಹಿದ ಮಗಳು ಯಾರೋ ಯುವಕನ ಜೊತೆ ಪ್ರೀತಿ ಗೀತಿ ಅಂತ ಓಡಾಡ್ತಿದ್ರೆ ಅಪ್ಪನಾದವನಿಗೆ ಪಿತ್ತ ನೆತ್ತಿಗೇರದು ಸಾಮಾನ್ಯ. ಇಲ್ಲಾಗಿದ್ದು ಅದೇ ನೋಡಿ.
ಮನೋಹರ್ ಎಂಬಾತನ ಮಗಳನ್ನ ಪ್ರೀತಿಸಿದ್ದ ಶಶಾಂಕ್
ಮೂಲತಃ ಮೈಸೂರಿನವರಾದ ಮನೋಹರ್ ಎಂಬಾತನ ಮಗಳನ್ನ ಈ ಶಶಾಂಕ್ ಕೆಲ ದಿನಗಳಿಂದ ಪ್ರೀತಿ ಮಾಡ್ತಿದ್ದ. ಮಗಳು ಶಶಾಂಕ್ನನ್ನ ಪ್ರೀತಿ ಮಾಡ್ತಿರೋದಕ್ಕೆ ಮನೋಹರ್ ವಿರೋಧ ವ್ಯಕ್ತಪಡಿಸಿದ್ದ. ಮಗಳಿಗೆ ಬುದ್ದಿ ಹೇಳಿ ಶಶಾಂಕ್ನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದ. ಇಟ್ರಂಸ್ಟಿಂಗ್ ಸಂಗತಿ ಅಂದ್ರೆ ಈ ಮನೋಹರ್ ಶಶಾಂಕ್ಗೆ ದೊಡ್ಡಪ್ಪನೇ ಆಗಿದ್ದ. ದೊಡ್ಡಪ್ಪನ ಮಗಳನ್ನೇ ಶಶಾಂಕ್ ಮನಸಾರೆ ಇಷ್ಟಪಟ್ಟಿದ್ದ. ಕಳೆದ ಸೋಮವಾರ ಮೈಸೂರಿನಿಂದ ಮನೋಹರ್ ಪುತ್ರಿ ಬೆಂಗಳೂರಿಗೆ ಬಂದಿದ್ದಳು. ಈ ವೇಳೆ ಆಕೆಯನ್ನ ಶಶಾಂಕ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ವಿಷಯ ತಿಳಿದು ಬೆಂಗಳೂರಿನ ಆರ್ಆರ್ ನಗರದ ಶಶಾಂಕ್ ಮನೆಗೆ ನುಗ್ಗಿದ್ದ ಯುವತಿ ಪೋಷಕರು ಹಲ್ಲೆ ನಡೆಸಿ ಯುವತಿಯನ್ನ ವಾಪಸ್ ಕರೆದುಕೊಂಡು ಹೋಗಿದ್ರು. ಬಳಿಕ ಯುವತಿ ಸಹವಾಸಕ್ಕೆ ಹೋಗಲ್ಲ ಅಂತ ಶಶಾಂಕ್ ಹೇಳಿದ್ದ ಎಂದು ತಿಳಿದು ಬಂದಿದೆ.
ಪ್ರೀತಿಸಿದ ತಪ್ಪಿಗೆ ಶಶಾಂಕ್ಗೆ ಎದುರಾಯ್ತು ಅಗ್ನಿಪರೀಕ್ಷೆ!
ಗಲಾಟೆ-ಗದ್ದಲ ಎಲ್ಲಾ ಮುಗಿದು ಇನ್ಮುಂದೆ ಸೈಲೆಂಟ್ ಆಗಿರ್ತೀನಿ, ಓದುವ ಕಡೆ ಗಮನಕೊಡ್ತೀನಿ ಎಂದು ಶಶಾಂಕ್ ಡಿಸೈಡ್ ಆಗಿದ್ದ. ಆದ್ರೆ ಕಾಲೇಜಿಗೆ ಎಂದು ತಂದೆ ಬಳಿ ಡ್ರಾಪ್ ಪಡೆದ ಶಶಾಂಕ್ಗೆ ಶಾಕ್ ಎದುರಾಗಿತ್ತು. ಬಸ್ ನಿಲ್ದಾಣದಲ್ಲಿ ನಿಂತಿದ್ದ ಶಶಾಂಕ್ನನ್ನು ಕಿಡ್ನಾಪ್ ಮಾಡಿದ ಕೆಲ ಕಿರಾತಕರು, ಆತನ ಕೈ-ಕಾಲು ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು. ಸುಟ್ಟಗಾಯದಿಂದ ಒದ್ದಾಟ ನಡೆಸಿದ ಶಶಾಂಕ್ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ವಿಡಿಯೋ ಕಾಲ್ ಮಾಡಿ ಪೋಷಕರಿಗೆ ಮಾಹಿತಿ ನೀಡಿದ್ದ. ಬಳಿಕ ಶಶಾಂಕ್ನನ್ನು ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದು, ಆತ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
ಇನ್ನೂ ಘಟನೆ ಸಂಬಂಧ ಬೆಂಗಳೂರಿನ ಕುಂಬಳಗೋಡು ಠಾಣೆಯಲ್ಲಿ ಶಶಾಂಕ್ ಪೋಷಕರು ಪ್ರಕರಣ ಸಹ ದಾಖಲಿಸಿದ್ದಾರೆ. ಮಗನಿಗೆ ಎದುರಾದ ಪರಿಸ್ಥಿತಿ ಕಂಡು ಶಶಾಂಕ್ ಪೋಷಕರಾದ ರಂಗನಾಥ್ ಮತ್ತು ಸತ್ಯಪ್ರೇಮಾ ಕಣ್ಣೀರಿಟ್ಟಿದ್ದಾರೆ. ಇನ್ನೂ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರೋ ಗೃಹಸಚಿವ ಡಾ ಜಿ.ಪರಮೇಶ್ವರ್ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸೋದಾಗಿ ತಿಳಿಸಿದ್ದಾರೆ.
ಒಟ್ನಲ್ಲಿ ಕೊಲೆ ಅಲ್ಲ, ದರೋಡೆಯಲ್ಲ ಕೇವಲ ಪ್ರೀತಿ ಮಾಡಿದ ತಪ್ಪಿಗೆ ಶಶಾಂಕ್ಗೆ ಈ ಪರಿಸ್ಥಿಗೆ ಎದುರಾಗಿದೆ. ಹೆತ್ತು ಹೊತ್ತು ಸಾಕಿದ ಮಗಳು ಕೈತಪ್ಪಿ ಹೋಗ್ತಾಳೆ ಅನ್ನೋ ಭಯದಲ್ಲಿ ಮನೋಹರ್ ಇಂತದೊಂದು ಪೈಶಾಚಿಕ ಕೃತ್ಯಕ್ಕೆ ಕೈ ಹಾಕಿರೋದು ಅಘಾತಕಾರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ