ವರ್ಷದ ಕೊನೆಗೆ ನಡೆಯಲಿರೋ 2025ರ ಐಪಿಎಲ್ ಮೆಗಾ ಆಕ್ಷನ್!
ಐಪಿಎಲ್ ಮೆಗಾ ಆಕ್ಷನ್ಗೆ ಕನ್ನಡಿಗ KL ರಾಹುಲ್ಗೆ ದೊಡ್ಡ ಆಘಾತ
ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಶಾಕಿಂಗ್ ಹೇಳಿಕೆ
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿ ಕೆ.ಎಲ್ ರಾಹುಲ್ ಬರ್ತಾರೆ ಅನ್ನೋ ಚರ್ಚೆ ಎಲ್ಲೆಡೆ ಜೋರಾಗಿತ್ತು. ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಶಾಕಿಂಗ್ ಹೇಳಿಕೆ ನೀಡಿದ್ದು, ಕೆ.ಎಲ್ ರಾಹುಲ್ ಆರ್ಸಿಬಿಗೆ ಬರ್ತಾರಾ? ಇಲ್ವಾ? ಅನ್ನೋ ಬಗ್ಗೆಯೇ ಸ್ಫೋಟಕ ಟ್ವಿಸ್ಟ್ ಇದೆ.
ಸಂಜೀವ್ ಗೋಯೆಂಕಾ ಏನಂದ್ರು?
ಕೆ.ಎಲ್ ರಾಹುಲ್ ಬಗ್ಗೆ ಮಾತಾಡಿದ ಸಂಜೀವ್ ಅವರು, ನಾನು ಇತ್ತೀಚೆಗೆ ಅವರನ್ನು ಭೇಟಿ ಮಾಡಿದ್ದೆ. ನಾನು ಕೆ.ಎಲ್ ರಾಹುಲ್ ಅವರನ್ನು ಭೇಟಿ ಮಾಡಿದ ವಿಚಾರ ಯಾಕಿಷ್ಟು ಚರ್ಚೆ ಆಗುತ್ತಿದೆ ಎಂದು ಗೊತ್ತಿಲ್ಲ. ನಾವು ಯಾವಾಗಲೂ ಸಿಗುತ್ತಲೇ ಇರುತ್ತೇವೆ. ಕೆ.ಎಲ್ ರಾಹುಲ್ ನಮ್ಮ ಕುಟುಂಬದ ಸದಸ್ಯರು ಇದ್ದಂತೆ. ಹಾಗಾಗಿ ಅವರನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎಂದರು. ಜತೆಗೆ ಕ್ಯಾಪ್ಟನ್ ಯಾರು? ಯಾರನ್ನು ಖರೀದಿ ಮಾಡಬೇಕು? ಎಂಬ ನಿರ್ಧಾರ ಮಾಡಲು ಇನ್ನೂ ಸಮಯ ಇದೆ ಎಂದರು. ಈ ಮೂಲಕ ಕೆ.ಎಲ್ ರಾಹುಲ್ ಮುಂದಿನ ಸೀಸನ್ಗೆ ಕ್ಯಾಪ್ಟನ್ ಅಲ್ಲ ಅನ್ನೋದು ಪರೋಕ್ಷವಾಗಿ ಕನ್ಫರ್ಮ್ ಮಾಡಿದ್ರು. ಆದ್ರೆ, ಕೆ.ಎಲ್ ರಾಹುಲ್ ನಮ್ಮ ಕುಟುಂಬದ ಸದಸ್ಯರು ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರು. ಕೆ.ಎಲ್ ರಾಹುಲ್ಗಿಂತಲೂ ಒಳ್ಳೆಯ ನಾಯಕ ಸಿಕ್ಕರೆ ಅವರಿಗೆ ಕ್ಯಾಪ್ಟನ್ಸಿ ನೀಡುವುದು ಸಂಜೀವ್ ಪ್ಲಾನ್. ಇಲ್ಲದೆ ಹೋದಲ್ಲಿ ರಾಹುಲ್ ಅವರನ್ನೇ ಕ್ಯಾಪ್ಟನ್ ಆಗಿ ಮುಂದುವರಿಯಿರಿ ಎಂದು ಕೇಳಿಕೊಳ್ಳುವುದು ಆಲ್ಟರ್ನೇಟಿವ್ ಯೋಚನೆ.
ಕೆ.ಎಲ್ ರಾಹುಲ್ಗೆ ಆರ್ಸಿಬಿಗೆ ಬರೋ ಸಾಧ್ಯತೆ ಹೆಚ್ಚು!
ಒಂದು ವೇಳೆ ಲಕ್ನೋ ತಂಡಕ್ಕೆ ಒಳ್ಳೆಯ ಕ್ಯಾಪ್ಟನ್ ಸಿಕ್ಕರೆ ಕೆ.ಎಲ್ ರಾಹುಲ್ ಅವರನ್ನು ಟ್ರೇಡ್ ಮಾಡಬಹುದು. ಆರ್ಸಿಬಿ ರಾಹುಲ್ ಅವರನ್ನು ಟ್ರೇಡ್ ಮೂಲಕ ಖರೀದಿಸಬಹುದು. ಆಕ್ಷನ್ಗೆ ಬಂದರೆ ಅಲ್ಲೂ ರಾಹುಲ್ ಮೇಲೆ ಹಣ ಸುರಿಯಬಹುದು.
ಇದನ್ನೂ ಓದಿ: 2025ರ ಐಪಿಎಲ್ಗೆ ಮುನ್ನವೇ ಮುಂಬೈ ಇಂಡಿಯನ್ಸ್ಗೆ ಮಾಸ್ಟರ್ ಸ್ಟ್ರೋಕ್; ಮೊದಲ ವಿಕೆಟ್ ಪತನ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ