newsfirstkannada.com

ಮಂಚದ ಮೇಲೆ ಮಲಗಿದ್ರೆ ಮಾತ್ರ ನಟಿಯರಿಗೆ ಚಾನ್ಸ್​​; ಸಿನಿಮಾ ಇಂಡಸ್ಟ್ರಿ ಕರಾಳ ಸತ್ಯ ಬಿಚ್ಚಿಟ್ಟ ಕೇಸ್​ಗೆ ಟ್ವಿಸ್ಟ್​​

Share :

Published August 26, 2024 at 10:19pm

Update August 26, 2024 at 10:27pm

    ಮಲೆಯಾಳಂ ಚಿತ್ರರಂಗದಲ್ಲಿ ಹೊಸ ಕಿಚ್ಚು ಹೊತ್ತಿಸಿದ ಹೇಮಾ ಕಮಿಟಿ ವರದಿ

    2019ರಲ್ಲಿಯೇ ಕಮಿಟಿಯ ವರದಿ ಸಲ್ಲಿಕೆಯಾಗಿತ್ತು; ಬಹಿರಂಗವಾಗೋಕೆ ತಡವೇಕೆ?

    ಹೇಮಾ ಕಮಿಟಿಯ ಆ 65 ಪುಟಗಳಲ್ಲಿ ಉಲ್ಲೇಖವಾಗಿರೋದು ಏನು ಗೊತ್ತಾ?

ತಿರುವಂತಪುರಂ: ನೋಡಿದ್ದೆಲ್ಲವೂ ನಿಜವಲ್ಲ. ಕೆಲವೊಮ್ಮೆ ಉಪ್ಪು ಕೂಡ ಸಕ್ಕರೆಯಂತೆ ಭಾಸವಾಗುತ್ತದೆ. ಸದ್ಯ ಮಲಯಾಳಂ ಸಿನಿಮಾ ರಂಗದಲ್ಲಿ ಕಿಚ್ಚು ಹೊತ್ತಿಸಿದ ಜಸ್ಟಿಸ್ ಹೇಮಾ ಕಮಿಟಿ ವರದಿ ವಿಚಾರದಲ್ಲಿ ಕೇಳಿ ಬರುತ್ತಿರುವ ಅಂಶವಿದು. ಏನಿದು ಹೇಮಾ ಕಮಿಟಿ ವರದಿ, ಆರಂಭಗೊಂಡಿದ್ದು ಯಾವಾಗ? ಅಂತಿಮವಾಗಿದ್ದು ಯಾವಾಗ..? ಜನರ ಮುಂದೆ ತೆರದಿಕೊಂಡಿದ್ದು ಯಾವಾಗ.? ಇವೆಲ್ಲವೂ ಈಗ ಚರ್ಚೆಗೆ ಕಾರಣವಾಗಿವೆ.

ಕೆಲವು ದಿನಗಳ ಹಿಂದಷ್ಟೇ ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಅಧ್ಯಯನಕ್ಕೆ ಅಂತ ನೇಮಕ ಮಾಡಲಾಗಿದ್ದ ಜಸ್ಟಿಸ್ ಹೇಮಾ ನೇತೃತ್ವದ ಕಮಿಟಿಯ 290 ಪುಟಗಳ ವರದಿ ಆಚೆ ಬಂದಿದೆ. ಮಲಯಾಳಂ ಸಿನಿಮಾ ರಂಗದ ದೊಡ್ಡ ದೊಡ್ಡ ಕುಳಗಳ ತಲೆದಂಡವೂ ಕೂಡ ಆಗಿದೆ. ಅದರಾಚೆಯೂ ಕೂಡ ಈಗ ಹಲವು ವಿಷಯಗಳು ಬಹಿರಂಗೊಳ್ಳುತ್ತಿವೆ.

ಇದನ್ನೂ ಓದಿ: ಕಾರ್ ಓಡಿಸುವಾಗ ಹೆಲ್ಮೆಟ್ ಹಾಕದ್ದಕ್ಕೆ ₹1000 ಫೈನ್.. ಯುವಕನಿಗೆ ಡಬಲ್ ಶಾಕ್‌; ಆಮೇಲೇನಾಯ್ತು?

2017ರಲ್ಲಿ ಮಲಯಾಳಂ ನಟಿಯೊಬ್ಬಳು ನನಗೆ ಐದು ಜನರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಳು. ನಟ ದಿಲೀಪ್ ಇದರ ಮಾಸ್ಟರ್ ಮೈಂಡ್ ಎಂಬ ಆರೋಪವನ್ನು ಮಾಡಿದ್ದಳು. ಆ ವೇಳೆ ಚಿತ್ರರಂಗದಲ್ಲಿ ನಟಿಯರಿಗೆ ನೀಡಲಾಗುತ್ತಿರುವ ಲೈಂಗಿಕ ಕಿರುಕುಳಗಳ ಅಧ್ಯಯನಕ್ಕಾಗಿ ನೇಮಕ ಮಾಡಿದ್ದೆ ಈ ಜಸ್ಟಿಸ್ ಹೇಮಾ ನೇತೃತ್ವದ ಕಮಿಟಿ. ಎರಡು ವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿ, 2019ರಲ್ಲಿ ಸಿಎಂ ಪಿಣರಾಯಿ ವಿಜಯನ್​ಗೆ ಈ ಕಮಿಟಿ ವರದಿ ಸಲ್ಲಿಸಿತ್ತು. ಆದ್ರೆ ಐದು ವರ್ಷಗಳ ನಂತರ ಅಂದ್ರೆ 19 ಆಗಸ್ಟ್ 2024ರಂದು ಈ ವರದಿ ಬಹಿರಂಗೊಂಡಿತು. ಈ ಐದು ವರ್ಷಗಳ ಕಾಲ ಸುಮ್ಮನಿದ್ದು ಈಗ ಏಕೆ ಹೇಮಾ ಕಮಿಟಿಯ ವರದಿ ಆಚೆ ಬಂತು ಅನ್ನೋ ಅನುಮಾನಗಳಿಂದ ಹಿಡಿದು ಹಲವು ರೀತಿಯಲ್ಲಿ ಜಸ್ಟಿಸ್ ಹೇಮಾ ಕಮಿಟಿ ವರದಿ ಚರ್ಚೆಗೆ ತೆರೆದುಕೊಂಡಿದೆ.

ಇದನ್ನೂ ಓದಿ: ಸಂಸದೆ ಕಂಗನಾ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ ಅತಿ ದೊಡ್ಡ ಮುಜುಗರ; ನಡು ಬೀದಿಯಲ್ಲಿ ಕೈ ಬಿಡ್ತಾ ಹೈಕಮಾಂಡ್‌?

ಹೇಮಾ ಕಮಿಟಿ ಸಲ್ಲಿಸಿರುವ ರಿಪೋರ್ಟ್​ನಲ್ಲಿ ಹಲವು ನಗ್ನ ಸತ್ಯಗಳು ಇವೆ. ಹಲವು ನಟಿಯರು ಈ ಸಿನಿಮಾ ರಂಗದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ. ಅದರ ಬಗ್ಗೆ ಮಾತನಾಡಿದವರನ್ನು ಲಾಬಿಗಳು ಸದ್ದಿಲ್ಲದೇ ಅವರ ಬಾಯಿ ಮುಚ್ಚಿಸಿವೆ ಅನ್ನೋ ಸತ್ಯ ದರ್ಶನ ಈ ವರದಿಯಲ್ಲಿದೆ. ವರದಿ ಹೇಳುವ ಪ್ರಕಾರ ನಟಿಯರು ಈ ವಿಷಯ ಸ್ಥಿತಿಯಲ್ಲಿಯೇ ನೋವಿನೊಂದಿಗೆ ಸಂಕಟದೊಂದಿಗೆ ಹೆಜ್ಜೆ ಹಾಕುತ್ತಾರೆ. ಸಿನಿಮಾಗೆ ಅವಕಾಶ ಕೇಳಿಕೊಂಡು ಹೋದ ದಿನದಿಂದಲೇ ದೈಹಿಕ ಸಂಪರ್ಕದ ಬೇಡಿಕೆಗಳು ಶುರುವಾಗುತ್ತವೆ ಎಂದು ಒಬ್ಬ ನಟಿ ಹೇಳಿದ್ದಾಳೆ. ಹೀಗಾಗಿ ಶೂಟಿಂಗ್ ಸಮಯದಲ್ಲಿ ಹೆತ್ತವರನ್ನು ಕರೆದುಕೊಂಡು ಹೋದರು ಕೂಡ ರಾತ್ರಿ ಹೊತ್ತು ನಮ್ಮ ರೂಮಿನ ಬಾಗಿಲುಗಳನ್ನು ಅನೇಕ ಕೈಗಳು ತಟ್ಟಿವೆ ಎಂದು ಮತ್ತೊಬ್ಬ ನಟಿ ಹೇಳಿಕೊಂಡಿದ್ದಾಳೆ. ಇವೆಲ್ಲವೂ ಜಸ್ಟಿಸ್​ ಹೇಮಾ ಕಮಿಟಿಯ ರಿಪೋರ್ಟ್​ನಲ್ಲಿದೆ. 290 ಪುಟದ ಹೇಮಾ ಕಮಿಟಿ ವರದಿಯಲ್ಲಿ ಅರಂಂಭದ65 ಪುಟಗಳು ಮಲೆಯಾಳಂ ಸಿನಿಮಾ ರಂಗದಲ್ಲಿ ಹಾಸಿ ಹೊದ್ದುಕೊಂಡು ಮಲಗಿರುವ ಈ ಲೈಂಗಿಕ ಕಿರುಕುಳಗಳ ಬಗ್ಗೆಯೇ ಉಲ್ಲೇಖವಿದೆ.

ಇದನ್ನೂ ಓದಿ: ಯುವ ನಟಿಯರಿಗೆ ಕಿರುಕುಳ.. ಹೇಮಾ ಕಮಿಟಿ ವರದಿ ಬಳಿಕ ಮಲಯಾಳಂ ಚಿತ್ರರಂಗದ ಇಬ್ಬರು ರಾಜೀನಾಮೆ

ವರದಿ ಸಲ್ಲಿಸಿ ಈಗಾಗಲೇ ಐದು ವರ್ಷಗಳೇ ಕಳೆದಿವೆ. ಆದ್ರೆ ಅದು ಬಹಿರಂಗೊಂಡಿದ್ದು ಈವಾಗ. ಇದರ ಪರಿಣಾಮ ಈಗಾಗಲೇ ನಟ ಹಾಗೂ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಹಾಗೂ ನಟ ಸಿದ್ದಕಿ ತಲೆದಂಡವಾಗಿದೆ. ಆದ್ರೆ ವರದಿ ಬಹಿರಂಗೊಳಿಸಲು ಐದು ವರ್ಷ ಆಗಿದ್ದು ಏಕೆ ಎಂಬ ಪ್ರಶ್ನೆಯೂ ಎದ್ದಿದೆ.

ಈ ಒಂದು ವಿಚಾರವನ್ನಿಟ್ಟುಕೊಂಡು ವಿಪಕ್ಷಗಳು ಈಗ ಪಿಣರಾಯಿ ವಿಜಯನ್ ಸರ್ಕಾರವನ್ನು ಪ್ರಶ್ನಿಸುತ್ತಿವೆ . ಆದೇಶ ನೀಡಿ ಏಳು ವರ್ಷಗಳಾದವು. ರಿಪೋರ್ಟ್ ನೀಡಿ ಐದು ವರ್ಷಗಳಾದವು. ಐದು ವರ್ಷಗಳ ಹಿಂದೆಯೇ ತೆಗೆದುಕೊಳ್ಳಬೇಕಾದ ಕ್ರಮವನ್ನು ತಡಮಾಡಿದ್ದು ಏಕೆ ಎಂದು ಕೇಳುತ್ತಿದ್ದಾರೆ. ಹೇಮಾ ಕಮಿಟಿ ವರದಿ ಆಚೆ ಬರುತ್ತಿದ್ದಂತೆ, ಈಗ ಮಲೆಯಾಳಂ ಸಿನಿಮಾ ರಂಗದಲ್ಲಿ ಮತ್ತೊಂದು ಸುತ್ತು ಮೀಟೂ ವೇದಿಕೆ ಸಿದ್ಧಗೊಂಡಿದೆ. ನಟರು ಸೇರಿದಂತೆ ಸಿನಿಮಾ ರಂಗದ ಹಲವು ಹೈ ಪ್ರೊಫೈಲ್​ಗಳು ಟಾರ್ಗೆಟ್ ಆಗಲಿದ್ದಾರೆ ಅನ್ನೋ ಮುನ್ಸೂಚನೆಯೂ ಕೂಡ ಸಿಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಚದ ಮೇಲೆ ಮಲಗಿದ್ರೆ ಮಾತ್ರ ನಟಿಯರಿಗೆ ಚಾನ್ಸ್​​; ಸಿನಿಮಾ ಇಂಡಸ್ಟ್ರಿ ಕರಾಳ ಸತ್ಯ ಬಿಚ್ಚಿಟ್ಟ ಕೇಸ್​ಗೆ ಟ್ವಿಸ್ಟ್​​

https://newsfirstlive.com/wp-content/uploads/2024/08/Hema-Commitee.jpg

Load More