newsfirstkannada.com

ಫಾಲೋ ಮಾಡಿ ಬೈಕ್​​ಗೆ ಗುದ್ದಿ ಕೊಂದ ಕಾರ್​ ಚಾಲಕ; ಯುವಕನ ಸಾವು ಕೇಸ್​ಗೆ ಹೊಸ ಟ್ವಿಸ್ಟ್​​!

Share :

Published August 22, 2024 at 11:20pm

Update August 22, 2024 at 11:21pm

    ಕಾರ್​​ಗೆ ಬೈಕ್​​ನಿಂದ ಟಚ್​ ಮಾಡಿದ್ದಕ್ಕೆ ಕಿರಿಕ್​ ತೆಗೆದು ಕೊಂದೇಬಿಟ್ಟ

    ಫಾಲೋ ಮಾಡಿ ಬೈಕ್​ಗೆ ಗುದ್ದಿ ಆಕ್ರೋಶ ಹೊರಹಾಕಿದ್ದ ಹಂತಕರು!

    ಬೈಕ್​ಗೆ ಕಾರ್​​ ಗುದ್ದಿದ ರಭಸಕ್ಕೆ ಯುವಕ ಸ್ಥಳದಲ್ಲೇ ದಾರುಣ ಸಾವು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ರೋಡ್​ ರೇಜ್​ ಕೇಸ್​​ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಚಿಕ್ಕ ವಿಚಾರವನ್ನೂ ದೊಡ್ಡದು ಮಾಡ್ಕೊಂಡು ಅಟ್ಟಹಾಸ ತೋರ್ತಿರುವ ಪ್ರಕರಣಗಳಿಂದ ಸಿಟಿ ಮಂದಿ ತಲೆ ನೋವು ಜಾಸ್ತಿಯಾಗ್ತಿದೆ. ಆದ್ರೀಗ ಈ ರೋಡ್ ರೇಜ್​ ಕಾರಣಕ್ಕೆ ಅಮಾಯಕ ಹುಡುಗನೊಬ್ಬನ ಜೀವ ಬಲಿಯಾಗಿದೆ. ಜಸ್ಟ್​ ಬೈಕ್​ ಟಚ್​​​ನಿಂದ ಶುರುವಾದ ಕಿರಿಕ್​​ ಜೀವ ತೆಗೆಯುವ ಮಟ್ಟಕ್ಕೆ ಹೋಗಿ ನಿಂತಿದೆ. ಬೀದಿಯಲ್ಲೇ ಬಡ ಹುಡುಗನೊಬ್ಬನ ನೆತ್ತರು ಹರಿದು ಹೋಗಿದೆ.

ಏನಿದು ಘಟನೆ?

ಹೌದು, ಕಾರ್ ಟಚ್ ಆದಾಗ ಅಲ್ಲೆ ಒಂದೆರಡು ಮಾತು ಬೈದು ಕೇಶವ್​ ಮತ್ತು ಅರವಿಂದ ಮ್ಯಾಟರ್ ಕ್ಲೋಸ್ ಮಾಡಬಹುದಿತ್ತು. ಆದ್ರೆ ಇಬ್ಬರು ತಾಳ್ಮೆ ಕಳ್ಕೊಂಡು ಬೈಕ್​ ಸವಾರರನ್ನ ಫಾಲೋವ್ ಮಾಡೋದಕ್ಕೆ ಹೋಗಿದ್ದಾರೆ. ಫಾಲೋ ಮಾಡೋದು ಮಾತ್ರವಲ್ಲ ಕಾರ್​​ನಿಂದ ಮಹೇಶ್​ ಮತ್ತು ಸ್ನೇಹಿತರಿದ್ದ ಬೈಕ್​​ಗೆ ರಭಸವಾಗಿ ಡಿಕ್ಕಿ ಹೊಡೆದಿದ್ದಾರೆ. ಉಗುರುಲ್ಲಿ ಹೋಗುವ ವಿಚಾರಕ್ಕೆ ಕೊಡಲಿ ತೆಗೆದುಕೊಂಡ್ರು ಅನ್ನೋ ಹಾಗೆ ಕಾರ್ ಚಾಲಕ ಅರವಿಂದ್, ಕಾರ್​ನಿಂದ ಮಹೇಶ್​​ ಬೈಕ್​​ಗೆ ಡಿಕ್ಕಿ ಹೊಡೆದಿದ್ದ. ದುರಂತ ಏನಂದ್ರೆ ಕಾರ್​ ಗುದ್ದಿ ರಭಸಕ್ಕೆ ಬೈಕ್​ನಲ್ಲಿದ್ದ ಮೂವರು ಪೈಕಿ ಮಹೇಶ್​ ಅನ್ನೋ ಯುವಕ ಅಕ್ಷರಶಹ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದ. ಮಹೇಶ್​ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿತ್ತು. ಪರಿಣಾಮ ಯುವಕ ಮಹೇಶ್ ಸ್ಥಳದಲ್ಲೇ ಅಸುನೀಗಿದ್ದಾನೆ.

ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಏರಿಯಾದಲ್ಲಿದ್ದ ಜನ ನಿದ್ದೆಗೆ ಜಾರಿದ್ರು.. ಜೋರು ಶಬ್ಧ ಕೇಳಿ ಹೊರ ಬಂದು ನೋಡಿದ್ರೆ.. ಮಾತ್ರ ನಡುರಸ್ತೆಯಲ್ಲಿ ರಕ್ತದೋಕುಳಿ ಹರಿದಿತ್ತು..ಕೋಪದ ಕೈಗೆ ಬುದ್ದಿ ಕೊಟ್ಟ ಪರಿಣಾಮ ಇನ್ನೇನು ಮನೆ ಸೇರಿ ನೆಮ್ಮದಿಯ ನಿದ್ರೆ ಮಾಡಬೇಕಿದ್ದ ಯುವಕನನ್ನ ಚಿರನಿದ್ರೆಗೆ ಜಾರುವಂತೆ ಆಗಿತ್ತು. ಘಟನೆಯಲ್ಲಿ ಮಹೇಶ್​ ಪ್ರಾಣ ಬಿಟ್ಟಿದ್ರೆ. ಇನ್ನುಳಿದ ಬಾಲಾಜಿ ಮತ್ತು ನಿಖಿಲ್​ಗೆ ಗಂಭಿರ ಗಾಯಗಳಾಗಿವೆ. ಇಬ್ಬರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ದುರಂತ ಏನಂದ್ರೆ ಸಾವನ್ನಪ್ಪಿರುವ ಮಹೇಶ್​​ಗೆ ಜಸ್ಟ್ 21 ವರ್ಷವಷ್ಟೆ.. ಸಣ್ಣ ಪುಟ್ಟ ಕೆಲಸ ಮಾಡ್ಕೊಂಡು ಜೀವನ ಸಾಗಿಸ್ತಿದ್ದ. ಮಹೇಶ್ ಅಪ್ಪ ಅಮ್ಮ ಗಾರೆ ಕೆಲಸ ಮಾಡ್ತಿದ್ದಾರೆ. ಮೂಲತಃ ಆಂಧ್ರದವನಾಗಿರುವ ಮಹೇಶ್​ ಬೆಂಗಳೂರಿನಲ್ಲಿ ಬೆಳೆದು ಓದಿ ಇಲ್ಲಿಯೇ ಬಿಇಎಲ್​ನಲ್ಲಿ ಕೆಲಸ ಮಾಡ್ಕೊಂಡಿದ್ದ. ಜೊತೆಗೆ ಫ್ರೀ ಟೈಮ್​ನಲ್ಲಿ ಡೆಲಿವರಿ ಬಾಯ್ ಆಗಿಯೋ ಕೆಲಸ ಮಾಡ್ತಿದ್ದ.

ಹೇಗೋ ಇರೋದ್ರಲ್ಲಿ ನೆಮ್ಮದಿಯಾಗಿದ್ದ. ಆದ್ರೀಗ ಮನೆಗೆ ಆಸರೆಯಾಗಿದ್ದ ಮಗನ ಕಳ್ಕೊಂಡು ಮಹೇಶ್ ಕುಟುಂಬವೂ ಕಂಗಾಲಾಗಿದೆ. ಹೊಟ್ಟೆಪಾಡಿಗಾಗಿ ಅಂತ ಊರು ಬಿಟ್ಟ ಬಂದವನು ಈಗ ಹೆಣವಾಗಿ ವಾಪಸ್ ಊರಿಗೆ ಸೇರುವಂತಾಗಿದೆ. ಬಾಳಿ ಬದುಕಬೇಕಿದ್ದ ಯುವಕ ಹೀಗೆ ಬೀದಿ ಗಲಾಟೆಯಲ್ಲಿ ಕೊಲೆಯಾಗಿದ್ದು ಇಡೀ ಕುಟುಂಬಕ್ಕೆ ಸಿಡಿಲು ಬಡಿದಂತೆ ಮಾಡಿದೆ.

ಸಣ್ಣ ಕೋಪ ಮನುಷ್ಯನ ಕೈಯಲ್ಲಿ ಎಂಥಾ ಕೆಲಸ ಮಾಡಿಸಿಬಿಡುತ್ತೆ ನೋಡಿ.. ಬೈಕ್ ಟಚ್​ ಆಗಿದ್ದಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಅರವಿಂದ್ ಉದ್ದೇಶ ಕೊಲೆ ಅಲ್ಲದೇ ಇದ್ರೂ ಬೈಕ್ ಚೇಸ್ ಮಾಡಿ ಡಿಕ್ಕಿ ಹೊಡೆದಿದ್ದು ತಪ್ಪೆ. ಒಂದು ಕ್ಷಣದ ಕೋಪಕ್ಕೆ ಒಂದು ಜೀವವೆ ಬಲಿಯಾಗಿದ್ದು ನಿಜಕ್ಕೂ ದುರಂತ.

ಕಾರ್​ ಚಾಲಕ ಪೊಲೀಸರಿಂದ ಅರೆಸ್ಟ್​

ಸದ್ಯ ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರ ಪೊಲೀಸರು, ಕಾರು ಚಾಲಕ ಅರವಿಂದ್​ನನ್ನ ಅರೆಸ್ಟ್ ಮಾಡಿದ್ದು, ಕಾರಿನಲ್ಲಿದ್ದ ಚನ್ನಕೇಶವ್​ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.. ಅತ್ತ, ರಸ್ತೆಯಲ್ಲಿ ಗಲಾಟೆ ನಡೆದ್ರೆ, ದಯವಿಟ್ಟು ಸಹನೆ ಕಳೆದುಕೊಳ್ಳಬಾರದು ಅಂತಾ ಡಿಸಿಪಿ ಮನವಿ ಮಾಡಿಕೊಂಡಿದ್ದಾರೆ.

ಒಟ್ನಲ್ಲಿ ಸಣ್ಣ ಬೈಕ್ ಗಲಾಟೆಯಿಂದ ಒಂದು ಜೀವ ಹೋಗಿರೋದು ನಿಜಕ್ಕೂ ದುರಂತವೇ ಸರಿ. ರೋಡ್ ಅಂದ್ಮೆಲೆ ಸಣ್ಣ ಪುಟ್ಟ ಗಲಾಟೆಯಾಗೋದು ಕಾಮನ್​.. ಹಾಗಂತ ಜೀವ ತೆಗೆಯೋ ಮಟ್ಟಕ್ಕೆ ಕ್ರೌರ್ಯ ತೋರೋದು ನಿಜಕ್ಕೂ ಖಂಡನೀಯ. ಪದೇ ಪದೇ ನಗರದ ರಸ್ತೆಗಳಲ್ಲಿ ನಡೆಯುತ್ತಿರುವ ರೋಡ್​ ರೇಜ್ ಪ್ರಕರಣಗಳು ಪೊಲೀಸ್ ಇಲಾಖೆಗೆ ತಲೆ ನೋವು ತರಿಸಿದೆ.. ಇನ್ನಾದ್ರು ಇಂತಹ ಪ್ರಕರಣಗಳಿಗೆ ಪೊಲೀಸರು ಬ್ರೇಕ್ ಹಾಕಬೇಕಿದೆ.

ಇದನ್ನೂ ಓದಿ: ಬೈಕ್​​ ಟಚ್​ ಆಗಿದ್ದಕ್ಕೆ ಕಾರ್​ನಲ್ಲಿ ಚೇಸ್​ ಮಾಡಿ ಕೊಂದ ಹಂತಕರು; ಯುವಕ ದಾರುಣ ಸಾವು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫಾಲೋ ಮಾಡಿ ಬೈಕ್​​ಗೆ ಗುದ್ದಿ ಕೊಂದ ಕಾರ್​ ಚಾಲಕ; ಯುವಕನ ಸಾವು ಕೇಸ್​ಗೆ ಹೊಸ ಟ್ವಿಸ್ಟ್​​!

https://newsfirstlive.com/wp-content/uploads/2024/08/Crime-news-1.jpg

Load More