ಪೊಲೀಸ್ ಇನ್ಫಾರ್ಮರ್ಗಳಿಂದಲೇ ಸುಲಿಗೆ ಕೇಸ್
ಬಗೆದಷ್ಟು ಬಯಲಿಗೆ ಬರುತ್ತಿದೆ ಕಿಲಾಡಿಗಳ ದಂಧೆ
ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ 30 ಮಂದಿಗೆ ಮೋಸ
ಬೆಂಗಳೂರು: ಪೊಲೀಸ್ ಇನ್ಫಾರ್ಮರ್ಗಳಿಂದಲೇ ನಡೆದ ಸುಲಿಗೆ ಕೇಸ್ ತನಿಖೆ ತೀವ್ರಗೊಂಡಿದೆ. ಸುಲಿಗೆ ಮಾಡಿದ ರಾಕೇಶ್, ಅರುಣ್, ಹರೀಶ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯನ್ನ ಕರೆದುಕೊಂಡು ಹೋಗಿ ಹಣ ದೋಚಿದ್ದ ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸುತ್ತಿರೋ ಪೊಲೀಸರಿಗೆ ಮತ್ತಷ್ಟು ಕೇಸ್ಗಳ ಜಾಡು ಸಿಕ್ಕಿದೆ. ಜೊತೆಗೆ ಇವರು ಹೇಗೆಲ್ಲಾ ಆಪರೇಶನ್ ದರೋಡೆ ಮಾಡಿದ್ರು? ಡ್ರಗ್ ಪೆಡ್ಲರ್ಸ್ಗೆ ಹೇಗೆ ಸಹಾಯ ಮಾಡ್ತಿದ್ರು? ಅನ್ನೋ ವಿಚಾರ ಬಯಲಾಗಿದೆ.
ಹೇಗಿತ್ತು ಇನ್ಫಾರ್ಮರ್ಗಳ ಆಪರೇಷನ್?
ಚೆಕ್ ಪೋಸ್ಟ್ನಲ್ಲಿ ಪೊಲೀಸರ ಹಾಗೇ ವಾಹನಗಳನ್ನ ಅಡ್ಡಗಟ್ಟುತ್ತಿದ್ದ ಆರೋಪಿಗಳು ಥೇಟ್ ಪೊಲೀಸರಂತೆ ಮಾತನಾಡಿ ಕಾರಿನಲ್ಲಿದ್ದವರನ್ನ ಬೆದರಿಸುತ್ತಿದ್ರು. ಬೇರೆ ಬೇರೆ ಕಾರಣಗಳನ್ನ ಹೇಳಿ ಅವರಿಂದ ಹಣ ಪಡೆಯುತ್ತಿದ್ರು. ಗಾಂಜಾ ಆರೋಪಿಗಳ ಬಗ್ಗೆ ಮಾಹಿತಿ ಕೊಡುತ್ತಿದ್ದ ಬಂಧಿತರು, ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದರು. ಆರೋಪಿಗಳ ವಿಚಾರಣೆ ಹೇಗೆ ಮಾಡುತ್ತಾರೆ ಎಂದು ಕಲಿಯುತ್ತಿದ್ದರು.
ತನಿಖೆ ಹೇಗೆ ಸಾಗುತ್ತೆ? ಗಾಂಜಾ ಸೇವಿಸಿದವ್ರ ಪರೀಕ್ಷೆ ಹೇಗಿರುತ್ತೆ? ಅನ್ನೋದರ ಬಗ್ಗೆ ಪೊಲೀಸರಷ್ಟೇ ತಿಳಿದುಕೊಂಡಿದ್ದರು. ಪೊಲೀಸರಿಂದಲೇ ಡ್ರಗ್ಸ್ ಪೆಡ್ಲರ್ಗಳ ಕಾಂಟ್ಯಾಕ್ಟ್ ಪಡೆಯುತ್ತಿದ್ದರು. ನಂತರ ಪೆಡ್ಲರ್ಸ್ನ ಸಂಪರ್ಕಿಸಿ ಕನ್ಸೂಮರ್ಸ್ನ ಟಾರ್ಗೆಟ್ ಮಾಡುತ್ತಿದ್ದರು. ತಾವು ಪೊಲೀಸರು ಎಂದು ಹೇಳಿಕೊಂಡು ಬೆದರಿಸಿ ಸುಲಿಗೆ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಈ ಆರೋಪಿಗಳು ಇದುವರೆಗೆ 30 ಜನಕ್ಕೆ ಮೋಸ ಮಾಡಿದ್ದು, ಯಾರೂ ಕೂಡಾ ದೂರು ದಾಖಲಿಸಿಲ್ಲ.
ಮತ್ತೊಂದು ವಿಚಾರ ಏನೆಂದರೆ ಪೊಲೀಸರು ಹಿಡಿಯುತ್ತಿದ್ದವರನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ಇಬ್ಬರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಇವರಿಗೆ ಪೊಲೀಸ್ ಮತ್ತು ಆರೋಪಿಗಳು ಇಬ್ಬರು ಒಂದೇ ಆಗಿದ್ದರು. ನಂಬಿಕೆಯಿಂದ ಕೆಲಸ ಕೊಟ್ಟ ಇಲಾಖೆಗೆ ದ್ರೋಹ ಬಗೆದ ಇನ್ಫಾರ್ಮರ್ಸ್ ಸುಮಾರು 10 ಲಕ್ಷದಷ್ಟು ಮೋಸ ಮಾಡಿದ್ದು, ಸದಾಶಿವನಗರ ಪೊಲೀಸರು ಹಣ ರಿಕವರಿ ಜೊತೆಗೆ ಮತ್ತಷ್ಟು ಕೇಸ್ಗಳ ಜಾಡು ಹುಡುಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ