ಒಂದೇ ಜೈಲಿಗೆ ಪವನ್, ರಾಘವೇಂದ್ರ, ನಂದೀಶ್ ಶಿಫ್ಟ್
ಡಿ ಗ್ಯಾಂಗ್ ಛಿದ್ರ ಛಿದ್ರ, ಬರೀ 3 ಜನ ಪರಪ್ಪನ ಅಗ್ರಹಾರ!
ಪರಪ್ಪನ ಅಗ್ರಹಾರದಲ್ಲೇ ಉಳಿದ ರೀಲ್ಸ್ ರಾಣಿ ಪವಿತ್ರಾಗೌಡ
ಬೆಂಗಳೂರು: ನಮ್ಮನ್ನ ಆ ಜೈಲಿಗೆ ಕಳಿಸ್ಬೇಡಿ ಸಾರ್. ನಾವ್ ಇಲ್ಲೇ ಇರ್ತಿವೆ. ನಾವೆಲ್ಲೂ ಹೋಗಲ್ಲ. ಇದು ರೇಣುಕಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ದರ್ಶನ್ ಅತ್ಯಾಪ್ತರ ಗೋಳಾಟ. ರಾಜಾತಿಥ್ಯದ ಫೋಟೋ ಬಳಿಕ ಡಿ ಗ್ಯಾಂಗ್ ಅಕ್ಷರಶಃ ಕಂಗಾಲಾಗಿ ಹೋಗಿದೆ. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಶಿಫ್ಟ್ ಆಗ್ತಿದ್ದಾರೆ.. ನಮ್ಮಪ್ಪ ಕ್ಯಾನ್ಸರ್ ಪೇಷೆಂಟ್ ಸಾರ್ ಅಂತ ಪ್ರದೂಷ್ ಪರದಾಡಿದ್ರೆ, ಬೆಳಗಾವಿ ಜೈಲಿನ ಹೆಸರು ಕೇಳಿ ನಾಗ ವಿಲ ವಿಲ ಅಂದಿದ್ದಾನೆ. ಎಸಿ ಬಾರ್ನಲ್ಲಿ ಕೂಲ್ ಕೂಲ್ ಆಗಿ ಇರ್ತಿದ್ದ ವಿನಯ್ನ್ನ ಕಲಬುರಗಿ ಜೈಲಿಗೆ ಕಳಿಸೋದಕ್ಕೆ ಸಿದ್ಧತೆ ನಡೆಸಿದೆ.

ನಾಗ, ವಿನಯ್, ಪ್ರದೂಷ್ದ್ದು ಒಂದು ಕತೆಯಾದ್ರೆ. ಇತ್ತ ಎ3 ಪವನ್ ಎ4 ರಾಘವೇಂದ್ರ, ಎ5 ನಂದೀಶ್ಈ ಮೂವರುದ್ದು ಮತ್ತೊಂದು ವ್ಯಥೆ.. A3 ಪವನ್ ರೇಣುಕಾಸ್ವಾಮಿ ಕೊಲೆ ಕೇಸ್ಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪಿ.. ಪವಿತ್ರಾಗೌಡಳಂತ ಮೆಸೇಜ್ ಮಾಡಿ ರೇಣುಕಾಸ್ವಾಮಿ ಅಡ್ರೆಸ್ ಪತ್ತೆ ಹಚ್ಚಿ.. ಬಳಿಕ ಈ ವಿಚಾರವನ್ನು ದರ್ಶನ್ಗೆ ತಿಳಿಸಿದ್ದ.
ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿ ಒಂದು ಜೀವ ಹೋಗೋದಕ್ಕೆ ಕಾರಣವಾಗಿದ್ದವನು. ಮಾಡಿದ ತಪ್ಪಿಗೆ ಬಂಧಿಖಾನೆ ಸೇರಿದ್ದವನು ಪರಪ್ಪನ ಅಗ್ರಹಾರದಲ್ಲಿ ಜಾಲಿ ಜಾಲಿಯಾಗಿಯೇ ಇದ್ದ. ಆದ್ರೀಗ ಈ ಪವನ್ನನ್ನ ಪರಪ್ಪನ ಅಗ್ರಹಾರದಿಂದ ಮೈಸೂರಿನ ಜೈಲಿಗೆ ಶಿಪ್ಟ್ ಮಾಡಲಾಗ್ತಿದೆ. ಹೀಗಾಗಿ ಇಷ್ಟು ದಿನ ಡಿ ಗ್ಯಾಂಗ್ ಜೊತೆ ಜಾಲಿ ಮೂಡ್ನಲ್ಲಿದ್ದವನಿಗೆ ಪರಪ್ಪನ ಅಗ್ರಹಾರ ಬಿಟ್ಟು ಹೋಗೋದಕ್ಕೆ ಭೀತಿ ಕಾಡ್ತಿದೆ.
ಇದನ್ನೂ ಓದಿ: ಕುಮಾರಸ್ವಾಮಿಗೆ ಕೈ ತೋರಿಸಿ ಆವಾಜ್ ಹಾಕಿದ ಕಾಂಗ್ರೆಸ್ ಕಾರ್ಯಕರ್ತ; ಮಂಡ್ಯದಲ್ಲಿ ರೋಷಾವೇಶ; ಆಗಿದ್ದೇನು?
ಎ4 ರಾಘವೇಂದ್ರ.. ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೆರೆ ಶೆಡ್ಗೆ ಕರ್ಕೊಂಡು ಬಂದ ಖದೀಮ. ಅಭಿಮಾನದ ಹುಚ್ಚಿಗೆ ಬಿದ್ದು ಜೈಲು ಸೇರಿರುರುವ ರಾಘವೇಂದ್ರನನ್ನ ಕೂಡ ಮೈಸೂರಿನ ಜೈಲಿಗೆ ಶಿಫ್ಟ್ ಮಾಡಲಾಗ್ತಿದೆ. ಬೆಂಗಳೂರಿನಲ್ಲಿದ್ದಾಗ ರಾಘವೆಂದ್ರ ಕೂಡ ಆರಾಮಾಗಿಯೇ ಇದ್ದ. ಈಗ ಮೈಸೂರಿಗೆ ಕಳಿಸ್ತಿರೋದು ಈ ರಾಘವೇಂದ್ರನಿಗೂ ಆತಂಕ ಹೆಚ್ಚು ಮಾಡುವಂತೆ ಮಾಡಿದೆ. ಇನ್ನೂ ಈ ರಾಘವೇಂದ್ರನ ಜೊತೆಗೆ A5 ನಂದೀಶ್.
ಇದನ್ನೂ ಓದಿ: ಗೃಹಲಕ್ಷ್ಮಿ ಹಣದಿಂದ ಸೊಸೆಗಾಗಿ ಫ್ಯಾನ್ಸಿ ಸ್ಟೋರ್ ಹಾಕಿಕೊಟ್ಟ ಅತ್ತೆ; ಕೂಲಿ ಕೆಲಸಕ್ಕೆ ಹೋಗ್ತಿದ್ದ ಸೊಸೆಗೆ ಅದೃಷ್ಟ!
ಕೇಬಲ್ ಕೆಲಸ್ ಮಾಡ್ಕೊಂಡಿದ್ದ ಈ ನಂದೀಶ್ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿ ಚಿತ್ರಹಿಂಸೆ ನೀಡಿ ಮಾರಾಣಾಂತಿಕವಾಗಿ ಹಲ್ಲೆ ಕೂಡ ಮಾಡಿದ್ದ. ಈಗ ಈ ನಂದೀಶ್ನನ್ನ ಕೂಡ ಪವನ್ ರಾಘವೇಂದ್ರ ಜೊತೆ ಮೈಸೂರು ಕಳಿಸ್ತಿದ್ದಾರೆ. ಹೀಗಾಗಿ ನಂದೀಶ್ನಿಗೂ ಮನಸ್ಸಲ್ಲಿ ಮೈಸೂರಿನ ಜೈಲಲ್ಲಿ ಏನಾಗುತ್ತೋ ಏನೋ ಅನ್ನೋ ಆತಂಕ ಕಾಡ್ತಿರೋದಂತು ಸುಳ್ಳಲ್ಲ.
ಈ ನಂದೀಶ್ ಕುಟುಂಬ ಬಡ ಕುಟುಂಬ. ಸಣ್ಣ ಪುಟ್ಟ ಕೆಲಸ ಮಾಡ್ಕೊಂಡು ಜೀವನ ಸಾಗಿಸ್ತಿತ್ತು… ಬೆಂಗಳೂರಿನಲ್ಲಿದ್ದಾಗಲೇ ನಂದೀಶ್ ಕುಟುಂಬ ಮಗನನ್ನ ನೋಡಲು ಆಗದೇ ಪರದಾಡ್ತಿತ್ತು. ಈಗ ನಂದೀಶ್ನನ್ನ ಮೈಸೂರಿನ ಜೈಲಿಗೆ ಶಿಫ್ಟ್ ಮಾಡಿರೋದು ನಂದೀಶ್ ಕುಟುಂಬಕ್ಕೂ ದಿಗಿಲು ಬಡಿಯವಂತೆ ಮಾಡಿದೆ.
ಉಳಿದಂತೆ ಎ6 ಜಗದೀಶ್ನನನ್ನ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಿದ್ರೆ, ಎ-8 ರವಿ ಶಂಕರ್, ಎ15 ಕಾರ್ತಿಕ್ , ಎ16 ಕೇಶವಮೂರ್ತಿ , ಎ17 ನಿಖಿಲ್, ಈ ನಾಲ್ಕು ಜರನ್ನ ತುಮೂರಿನ ಜೈಲಿನಲ್ಲಿರಿಸಲಾಗಿದೆ. ಆದ್ರೆ ಈ ಮಧ್ಯೆ 4 ಜನರನ್ನ ಮಾತ್ರ ಪರಪ್ಪನ ಅಗ್ರಹಾರದ ಜೈಲಿನಲ್ಲೇ ಇರಿಸಲಾಗಿದೆ. ದರ್ಶನ್ ಅತ್ಯಾಪ್ತರ ಪೈಕಿ ಆ ಮೂರು ಜನರನ್ನ ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲಾಗಿದೆ.
ಡಿ ಗ್ಯಾಂಗ್ ಛಿದ್ರ ಛಿದ್ರ.. ಬರೀ 3 ಜನ ಪರಪ್ಪನ ಅಗ್ರಹಾರ!
ಪರಪ್ಪನ ಅಗ್ರಹಾರದಲ್ಲಿರುವ ಡಿ ಗ್ಯಾಂಗ್ ಛಿದ್ರ ಛಿದ್ರಗೊಂಡಿದ್ರು.. ಆ ಮೂರು ಜನರನ್ನ ಮಾತ್ರ ಪರಪ್ಪನ ಅಗ್ರಹಾರದಿಂದ ಕಳಿಸಿಲ್ಲ. ಜೊತೆಗಿದ್ದವರೆಲ್ಲ ದೂರ ಹೋಗ್ತಿರೋದು ಆ ಮೂವರಿಗೂ ಕೂಡ ಭೀತಿ ಹೆಚ್ಚು ಮಾಡಿದೆ.

ರೇಣುಕಾಸ್ವಾಮಿ ಕೊಲೆಯ ಮೂಲ ಪವಿತ್ರಾಗೌಡ.. ಆಕೆಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ಅನ್ನೋ ಕಾರಣಕ್ಕೆ ದರ್ಶನ್ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿ ಜೀವ ತೆಗೆದಿರುವ ಆರೋಪ ಎದುರಿಸ್ತಿದ್ದಾರೆ. ಹಾಗಾಗಿ ಪೊಲೀಸರು ಈ ಕೇಸ್ನಲ್ಲಿ ಪವಿತ್ರಾಗೌಡರನ್ನ ಎ1 ಆರೋಪಿಯಾಗಿ ಮಾಡಿದ್ರು. ಹೊರಗಡೆ ಲಕ್ಸುರಿ ಲೈಫ್ ಲೀಡ್ ಮಾಡ್ತಿದ್ದ ಪವಿತ್ರಾಗೌಡ ಬಂಧಿಖಾನೆಯಲ್ಲಿ ಬಂಧನವಾಗಿದ್ಲು. ಹೊರಗಡೆ ಬಿಂದಾಸ್ ಆಗಿದ್ದ ಪವಿತ್ರಾಗೌಡ ಇವತ್ತು ಜೈಲುಹಕ್ಕಿಯಾಗಿ ಒದ್ದಾಡ್ತಿದ್ದಾಳೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಅಪಘಾತ.. ಮಧ್ಯರಾತ್ರಿ ಸೇತುವೆಯಿಂದ ಕೆಳಗೆ ಬಿದ್ದ ಪ್ರವಾಸಿಗರ ಕಾರು..
ಈ ಮಧ್ಯೆ ಜೈಲಿನಿಂದ ಹೊರ ಬರೋದಕ್ಕೆ ಜಾಮೀನಿಗಾಗಿ ಅರ್ಜಿ ಕೂಡ ಸಲ್ಲಿಸಿದ್ದಾಳೆ. ಆದ್ರೆ ರಾಜಾತಿಥ್ಯ ಫೋಟೋ ಬಳಿಕ ಪವಿತ್ರಾಗೌಡ ಕೂಡ ಒಂಟಿಯಾಗಿದ್ದಾಳೆ. ಯಾಕಂದ್ರೆ ದರ್ಶನ್ ಸೇರಿದಂತೆ ಉಳಿದ ಆರೋಪಿಗಳನ್ನ ಬೇರೆ ಬೇರೆ ಕಡೆ ಎತ್ತಂಗಡಿ ಮಾಡಿದ್ರೆ, ಪವಿತ್ರಾಗೌಡಳನ್ನ ಮಾತ್ರ ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಾಗಿದೆ. ಹೀಗಾಗಿ ಪವಿತ್ರಗೌಡಗೆ ಒಂಟಿಯಾಗಿರುವ ಭಾವನೆ ಕಾಡ್ತಿರಲುಬಹುದು. ಇಷ್ಟು ದಿನ ಎಲ್ಲ ಪರಪ್ಪನ ಅಗ್ರಹಾರದಲ್ಲೇ ಒಟ್ಟಾಗಿದ್ರು, ಆದ್ರೀಗ ಒಂದೊಂದು ದಿಕ್ಕಿಗೆ ಒಬ್ಬೊಬ್ಬರು ಶಿಫ್ಟ್ ಆಗಿರೋದು ಪವಿತ್ರಗೌಡಗೂ ಆತಂಕಕ್ಕೆ ಎಡೆ ಮಾಡಿರೋದ್ರಲ್ಲಿ ಅನುಮಾನವಿಲ್ಲ.
ಇನ್ನು ಪವಿತ್ರಾಗೌಡ ಜೊತೆ A 13 ದೀಪಕ್ ಹಾಗೂ A 17 ಅನುಕುಮಾರ್.. ಈ ಇಬ್ಬರನ್ನ ಸಹ ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲಾಗಿದೆ. ರೇಣುಕಾಸ್ವಾಮಿ ಕೊಲೆಯ ಬಳಿಕ ಡೀಲ್ ಕುದುರಿಸೋದಕ್ಕೆ ದೀಪಕ್ ಸಹಾಯ ಮಾಡಿದ್ರೆ, ಇನ್ನು ಅನುಕಮಾರ್ ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನ ಕರ್ಕೊಂಡು ಬಂದಿದ್ದ. ದುರಂತ ಏನಂದ್ರೆ ಈ ಅನುಕುಮಾರ್ ಮಗ ಜೈಲು ಸೇರಿದ್ದು ಕೇಳಿ ಹಾರ್ಟ್ ಅಟ್ಯಾಕ್ ಆಗಿ ಪ್ರಾಣ ಬಿಟ್ಟಿದ್ರು. ಈಗ ಡಿ ಗ್ಯಾಂಗ್ ದೂರ ದೂರ ಆಗ್ತಿರೋದು ಅನುಕುಮಾರ್ಗೂ ಸಂಕಷ್ಟ ತಂದೊಡ್ಡಿದೆ. ಯಾಕಂದ್ರೆ ದರ್ಶನ್ ಜೊತೆಗಿದ್ದಾಗ ಸಹಾಯ ಮಾಡ್ತಾರೆ.. ಏನಾದ್ರೂ ಮಾಡಿ ಹೊರಗೆ ಕರ್ಕೊಂಡು ಬರ್ತಾರೆ ಅನ್ನೋ ನಂಬಿಕೆಯಿತ್ತು. ಆದ್ರೀಗ ರಾಜಾತಿಥ್ಯ ಫೋಟೋ ಡಿ ಗ್ಯಾಂಗ್ ಛಿದ್ರ ಛಿದ್ರ ಮಾಡಿದ್ದು, ಎಲ್ಲರೂ ಒಂದೊಂದು ದಿಕ್ಕಿಗೆ ಹೋಗಿರೋದು ಅನುಕುಮಾರ್ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ