newsfirstkannada.com

ದರ್ಶನ್​ ಗ್ಯಾಂಗ್​ನಿಂದ ಕೊಲೆ ಕೇಸ್​​ಗೆ ಟ್ವಿಸ್ಟ್​​​.. ಪವಿತ್ರಾಗೆ ರೇಣುಕಾಸ್ವಾಮಿ ಮಾಡಿದ್ದೇನು?

Share :

Published June 28, 2024 at 10:23pm

  ಸಾವನ್ನಪ್ಪಿದ ರೇಣುಕಾಸ್ವಾಮಿ ಬಗ್ಗೆ ಬಿತ್ತು ಅಚ್ಚರಿ ವಿಚಾರ..!

  ಇನ್​​ಸ್ಟಾಗ್ರಾಮ್​​ನಲ್ಲಿ ಆಶ್ಲೀಲ ಮೆಸೇಜ್ ಮಾಡಿದ್ದ ರೇಣುಕಾ

  ಮೆಸೇಜ್‌ ಬಗ್ಗೆ ಸಾಕ್ಷ್ಯ ಸಂಗ್ರಹ.. ಇನ್​ಸ್ಟಾಗೆ ಪೊಲೀಸರ ಪತ್ರ

ಬೆಂಗಳೂರು: ಡಿ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 17 ಆರೋಪಿಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಈಗ ರೇಣುಕಾಸ್ವಾಮಿ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಇದಕ್ಕಾಗಿ ನೇರವಾಗಿ ಇನ್​ಸ್ಟಾಗ್ರಾಮ್​ ಸಂಸ್ಥೆಗೆ ಪತ್ರ ಬರೆಯಲು ಮುಂದಾಗಿದ್ದಾರೆ.

ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿ ಸದ್ಯ ದರ್ಶನ್ ಌಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಸೇರಿ ಮುದ್ದೆ ಮುರಿಯುತ್ತಿದ್ದಾರೆ. ಇಷ್ಟು ದಿನ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್, ಪವಿತ್ರಾ ಈಗ ಜೈಲು ವಾಸ ಅನುಭವಿಸಲಾಗದೇ ಪರದಾಡ್ತಿದ್ದಾರೆ. ಇತ್ತ ಸಾವನ್ನಪ್ಪಿದ ರೇಣುಕಾಸ್ವಾಮಿ ಬಗೆಗೆ ಅಚ್ಚರಿ ವಿಚಾರಗಳು ಹೊರಬರ್ತಿವೆ.

ಪವಿತ್ರಾ ಗೌಡಗೆ 200 ಮೆಸೇಜ್ ಕಳುಹಿಸಿದ್ದ ರೇಣುಕಾಸ್ವಾಮಿ

ದರ್ಶನ್​ & ಗ್ಯಾಂಗ್​ನ ಸಾಕಷ್ಟು ವಿಚಾರಗಳು ಪೊಲೀಸರ ತನಿಖೆಯಲ್ಲಿ ಹೊರಬರ್ತಿವೆ. ​ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ 200 ಮೆಸೇಜ್ ಕಳುಹಿಸಿದ್ದ ಅನ್ನೋದು ಗೊತ್ತಾಗಿದೆ. ಅದು ಕೂಡ ಇನ್​​ಸ್ಟಾಗ್ರಾಮ್​​ನಲ್ಲಿ ಅಶ್ಲೀಲ ಮೆಸೇಜ್ ಮಾಡಿದ್ದ ಅಂತ ತನಿಖೆಯಲ್ಲಿ ತಿಳಿದುಬಂದಿದೆ. ಆತನ ಕಾಟ ಅತಿಯಾದಾಗ ಈ ವಿಚಾರವನ್ನ ಪವಿತ್ರಾ ಪವನ್​​ಗೆ ತಿಳಿಸಿದ್ದಳು. ಈ ಎಲ್ಲಾ ವಿಚಾರಗಳನ್ನು ಪವಿತ್ರಾ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.

ಮೆಸೇಜ್‌ ಬಗ್ಗೆ ಸಾಕ್ಷ್ಯ ಸಂಗ್ರಹಕ್ಕಾಗಿ ಇನ್​ಸ್ಟಾಗ್ರಾಮ್​ಗೆ ಪೊಲೀಸರ ಪತ್ರ

ಇನ್ನು ರೇಣುಕಾಸ್ವಾಮಿ ಕಳಿಸಿದ ಮೆಸೇಜ್​​​ಗಳ​​ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ. ಇನ್​ಸ್ಟಾಗ್ರಾಮ್ ಸಂಸ್ಥೆಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

ಇನ್​ಸ್ಟಾಗ್ರಾಂಗೆ ಪೊಲೀಸರ ಮನವಿ

ತನ್ನ ಇನ್​ಸ್ಟಾಗ್ರಾಮ್ ಐಡಿಯಿಂದ‌ ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದ, ಆತ ಮಾಡಿರುವ ಚಾಟ್ ಡೇಟಾವನ್ನ ರಿಟ್ರೀವ್ ಮಾಡಬೇಕಿದೆ. ಹೀಗಾಗಿ ರೇಣುಕಾಸ್ವಾಮಿ ಬಳಸುತ್ತಿದ್ದ ಇನ್​ಸ್ಟಾಗ್ರಾಮ್ ಸಂದೇಶದ ಬಗ್ಗೆ ಮಾಹಿತಿ ಕೊಡಲು ಪೊಲೀಸರು ಮನವಿ ಮಾಡಲಿದ್ದಾರೆ. ಯಾಱರಿಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ. ಆತನ ಇನ್​ಸ್ಟಾಗ್ರಾಂ ಖಾತೆಯಿಂದ ಸೆಂಡ್ ಆಗಿರುವ ಎಲ್ಲಾ ಮೆಸೇಜ್​ಗಳ ಮಾಹಿತಿ ಬೇಕು ಅಂತ ಕೇಳಲಿದ್ದಾರೆ. ಹಾಗಾಗಿ ಆತನ ಖಾತೆಯ ಸಂಪೂರ್ಣ ಮಾಹಿತಿಯನ್ನ ಪೊಲೀಸರು ಕೇಳಿದ್ದಾರೆ. ಇದರ ಜೊತೆಗೆ ಇನ್ನೂ ಬೇರೆ ಯಾರಿಗಾದ್ರೂ ಮೆಸೇಜ್ ಮಾಡಿದ್ನಾ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.

ಇನ್ನು ರೇಣುಕಾಸ್ವಾಮಿ ಮೊಬೈಲ್​ನಿಂದ ಮೆಸೇಜ್​ಗಳ ಮಾಹಿತಿ ಪಡೆಯೋಣ ಅಂದ್ರೆ ಆತನ ಮೊಬೈಲ್​ನ್ನ ಆರೋಪಿಗಳು ಮೊಬೈಲ್​​ ನಾಶ ಮಾಡಿದ್ದಾರೆ. ಹೀಗಾಗಿ ಇನ್​​ಸ್ಟಾಗ್ರಾಂ ಚಾಟ್ ಡೇಟಾವನ್ನು ರಿಟ್ರೀವ್ ಮಾಡಲು ಸಿದ್ಧತೆ ನಡೆಸಿದ್ದು ಇದಕ್ಕಾಗಿ ಇನ್​ಸ್ಟಾಗ್ರಾಂ ಸಂಸ್ಥೆಗೆ ಮನವಿ ಮಾಡಲಿದ್ದಾರೆ.

ಇದನ್ನೂ ಓದಿ: ಫಸ್ಟ್​ ವೆಡ್ಡಿಂಗ್​​ ಆ್ಯನಿವರ್ಸರಿ; ರೇಣುಕಾಸ್ವಾಮಿ ಫೋಟೋ ಹಿಡಿದು ಬಿಕ್ಕಿಬಿಕ್ಕಿ ಅತ್ತ ಸಹನಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಗ್ಯಾಂಗ್​ನಿಂದ ಕೊಲೆ ಕೇಸ್​​ಗೆ ಟ್ವಿಸ್ಟ್​​​.. ಪವಿತ್ರಾಗೆ ರೇಣುಕಾಸ್ವಾಮಿ ಮಾಡಿದ್ದೇನು?

https://newsfirstlive.com/wp-content/uploads/2024/06/DARSHAN_PAVITRA-1.jpg

Load More