newsfirstkannada.com

ಮಹಿಳೆಯಿಂದ ಸ್ವಾಮೀಜಿಗೆ 35 ಲಕ್ಷ ದೋಖಾ ಕೇಸ್​ಗೆ ಮತ್ತೊಂದು ಟ್ವಿಸ್ಟ್​​.. ಹಣ ಪಡೆದಿದ್ದು ವರ್ಷಾನೋ, ಮಂಜುಳಾನೋ?

Share :

11-06-2023

    ಸ್ವಾಮೀಜಿ 35 ಲಕ್ಷ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

    ಬಗೆದಷ್ಟೂ ಬಯಲಾಗುತ್ತಿದೆ ಸ್ವಾಮೀಜಿ ಪ್ರಕರಣ

    ನಾನೇ ವರ್ಷಾ ಅಂತ ಸುಳ್ಳು ಹೇಳಿದ್ಳಾ ಮಂಜುಳಾ?

ಬೆಂಗಳೂರು: ಕಂಬಾಳು ಮಠದ ಸ್ವಾಮೀಜಿಗೆ ದೋಖಾ ಪ್ರಕರಣಕ್ಕೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೊನ್ನೆ ಒಂದು ಆಡಿಯೋ ಕ್ಲಿಪ್​​ ಬಯಲಾಗಿತ್ತು.. ಈಗ ಮೊತ್ತೊಂದು ಆಡಿಯೋ ನೀಡ್ತಿದೆ ಕೇಸ್​​ಗೆ ಸ್ಫೋಟಕ ತಿರುವು.. ಸ್ವಾಮೀಜಿಗೆ ಮೋಸ ಮಾಡಿದ್ದ ವರ್ಷಾ ಯಾರು.. ಸ್ವಾಮೀಜಿಯನ್ನು ಉಳಿಸಲು ಪೊಲೀಸರು ಮತ್ತು ಆ ಮಹಿಳೆ ಮುಂದಾಗಿದ್ದೇಕೆ.. ಇದೆಲ್ಲಕ್ಕೂ ಉತ್ತರ ನೀಡ್ತಿದೆ ಆ ಆಡಿಯೋ..

ವದನ ತೋರಿಸದ ಮದನಾರಿ.. ಮುಸುಕು ತೆಗೆಯದ ಮಾಯಾಂಗನೆಯನ್ನು ನಂಬಿ ಸ್ವಾಮೀಜಿ 35 ಲಕ್ಷ ಕಳೆದುಕೊಂಡಿದ್ದರು.. ಮೋಹಿನಿಯ ಮಾಯಾಜಾಲ ಅರಿಯದೇ ಮೋಸ ಹೋಗಿದ್ದರು.. ಕಥೆಯಲ್ಲಿ ಬರುವ ಪ್ರಮುಖ ಪಾತ್ರಧಾರಿ ಆ ಫೇಸ್​​ಬುಕ್ ಸುಂದರಿ.. ಮಾಯಾಂಗನೆಯ ಮಾರ್ಜಾಲದ ನಡೆಯನ್ನು ಹುಡುಕಿಹೊರಟಿದ್ದ ಪೊಲೀಸರ ನಡೆ ಈಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬಗೆದಷ್ಟೂ ಬಯಲಾಗ್ತಿದೆ ಕಂಬಾಳು ಸ್ವಾಮೀಜಿ ಪ್ರಕರಣ!
ಸ್ವಾಮೀಜಿಗೆ ಮೋಸ ಮಾಡಿದ್ದು ವರ್ಷಾನಾ, ಮಂಜುಳಾನಾ?

ನೆಲಮಂಗಲ ಬಳಿ ಇರುವ ಪ್ರಸಿದ್ಧ ಶ್ರೀಕ್ಷೇತ್ರ ಸೂರ್ಯಸಿಂಹಾಸನ ಮಹಾಸಂಸ್ಥಾನಮಠ ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿಗೆ ಮಹಿಳೆಯೊಬ್ಬರು 35 ಲಕ್ಷಕ್ಕೆ ಪಂಗನಾಮ ಹಾಕಿರುವುದು ಬಯಲಾಗಿದೆ. ವರ್ಷಾ ಅಂತ ಪರಿಚಯ ಮಾಡಿಕೊಂಡಿದ್ದ ಸುಂದರಿ ತನ್ನ ಸ್ನೇಹಿತೆ ಮಂಜುಳಾ ಖಾತೆಗೆ ದುಡ್ಡು ಹಾಕಿಸಿಕೊಂಡಿದ್ದಳು ಅಂತ ಸ್ವಾಮೀಜಿ ಈ ಮೊದಲು ಪೊಲೀಸರಿಗೆ ದೂರು ನೀಡಿದ್ದರು..

ನಾನೇ ವರ್ಷಾ ಅಂತ ಸುಳ್ಳು ಹೇಳಿದಳಾ ಮಂಜುಳಾ?

ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮಂಜುಳಾನೇ ವರ್ಷಾ ಅಂತ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಆದ್ರೆ ವರ್ಷಾನೇ ಬೇರೆ, ಮಂಜುಳಾನೇ ಬೇರೆ ಅಂತ ಸಾಕ್ಷ್ಯ ಹೇಳ್ತಿದೆ ಆರೋಪಿಗಳ ಆ ಆಡಿಯೋ ಸಾಕ್ಷಿ.

ಸ್ವಾಮೀಜಿ ಸೇಫ್​​ ಮಾಡಲು ಯತ್ನಿಸಿದ್ರಾ ಪೊಲೀಸರು?

ಇನ್ನು ಸ್ವಾಮೀಜಿ ಹಾಗೂ ವರ್ಷಾ ನಡುವೆ ಖಾಸಗಿ ಮಾತುಕತೆ ನಡೆದಿದೆ. ರಾತ್ರಿಯೆಲ್ಲಾ ವಿಡಿಯೋ ಕಾಲ್​​ನಲ್ಲಿ ಮಾತನಾಡಿದ್ದಾರೆ.

ಆರೋಪಿ ಮಂಜುಳಾ, ವರ್ಷಾ ಒಬ್ಬರೇನಾ, ಬೇರೆನಾ?

ಪ್ರಕರಣ ಆರಂಭ ಆದಾಗಿನಿಂದಲೂ ಕಾಡ್ತಿರೋದು ಒಂದೇ ಪ್ರಶ್ನೆ ಸ್ವಾಮೀಜಿಗೆ ಮೋಸ ಮಾಡಿದ್ದು ವರ್ಷಾನಾ, ಮಂಜುಳಾನಾ ಅಂತ.. ಸ್ವಾಮೀಜಿ ನನ್ನನ್ನ ತಂಗಿ ಅಂತ ಕರೆದಿದ್ದಕ್ಕಾದ್ರೂ ಋಣಿಯಾಗಿರಬೇಕು ಅಂತ ಮೊದಲನೇ ಆರೋಪಿ ಮಂಜುಳಾ ಮಾತಾಡಿದ್ದಾರೆ.. ಪೊಲೀಸರು ಮಂಜುಳಾಳಿಂದ ಬಲವಂತದ ಹೇಳಿಕೆ ಪಡೆದ್ರಾ ಅನ್ನೋ ಅನುಮಾನ ಮೂಡಿಸಿದೆ.

ಇನ್ನು, ಆಡಿಯೋದಲ್ಲಿ ಸಹಾಯದ ಋಣ ತೀರಿಸಲು ನಾನು ಆರೋಪ ಹೊತ್ತುಕೊಂಡೆ ಅಂತ ಮಂಜುಳಾ ಹೇಳ್ತಿದ್ದಾಳೆ.. ಇದ್ರಿಂದ ಗೊತ್ತಾಗುತ್ತೆ ವರ್ಷಾನೇ ಬೇರೆ, ಮಂಜುಳಾನೇ ಬೇರೆ, ಮುಸುಕು ತೆಗೆಯದ ಮಾಯಾಂಗನೆ ನಿಜವಾದ ವರ್ಷಾ ಹೊರಗೆ ಬಂದ್ರೆ ಸ್ವಾಮೀಜಿಯ ಪುರಾಣ ಬಯಲಾಗಲಿದೆ. ಮತ್ತೊಂದೆಡೆ ಪೊಲೀಸರೂ ಕೂಡ ವರ್ಷಾ ಹೊರಬರದಂತೆ ನೋಡಿಕೊಂಡು ಸ್ವಾಮೀಜಿಯನ್ನು ರಕ್ಷಣೆ ಮಾಡಲು ಯತ್ನಿಸಿದ್ರಾ ಅನ್ನೋ ಅನುಮಾನದ ಗೆರೆ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆಯಿಂದ ಸ್ವಾಮೀಜಿಗೆ 35 ಲಕ್ಷ ದೋಖಾ ಕೇಸ್​ಗೆ ಮತ್ತೊಂದು ಟ್ವಿಸ್ಟ್​​.. ಹಣ ಪಡೆದಿದ್ದು ವರ್ಷಾನೋ, ಮಂಜುಳಾನೋ?

https://newsfirstlive.com/wp-content/uploads/2023/06/Swamiji-3.jpg

Load More