ಯುವತಿಯ ಮದುವೆ ಟಾರ್ಚರ್‌ಗೆ ಪ್ರಾಣ ಬಿಟ್ಟ ಯುವಕ
ಮದುವೆ ವಿಚಾರಕ್ಕೆ ಮನನೊಂದು ಸೇರಿ ಬಿಟ್ಟ ಮಸಣ..!
ನಿನ್ನೆ ಪಾರ್ಟಿ ಮಾಡಲು ಮದನ್ನ ಮನೆಗೆ ಕರೆದಿದ್ದ ವೀಣಾ
ಬೆಂಗಳೂರು: ಈ ಪ್ರೀತಿ ಒಂಥರ ಕಚಗುಳಿ. ಯಾಮಾರಿದ್ರೆ, ಈ ಪ್ರೀತಿನೇ ಹರಿಸಿತ್ತು ರಕ್ತದೋಕುಳಿ. ಇಲ್ಲೂ ಅಷ್ಟೇ ಕಣ್ ಕಣ್ಣ ಸಲುಗೆ ಬಳಿಕ ಇಬ್ಬರ ಮನಸ್ಸು ಪ್ರೀತಿಯಲ್ಲಿ ಜಾರಿತ್ತು. ಇನ್ಫ್ಯಾಕ್ಟ್ ಒಂದೇ ಮನೆಯಲ್ಲಿ ಲಿವಿನ್ನಲ್ಲಿದ್ರು. ಅದೇನ್ ಅನಿಸ್ತೋ, ರಾತ್ರಿ ವೇಳೆ ಪಾರ್ಟಿ ಮಾಡೋಣ ಅಂದ್ಕೊಂಡವ್ರು ಕಂಠ ಪೂರ್ತಿ ಏರಿಸಿಕೊಂಡಿದ್ರು. ಎಣ್ಣೆಯ ಮತ್ತು ನೆತ್ತಿಗೇರಿತ್ತು. ಕಣ್ಣ ನೋಟ ಮಂಜಾಗಿತ್ತು. ಬಳಿಕ ವಾಷ್ರೂಂಗೆ ಅಂತಾ ಹೋದ ಆ ಯುವಕ ವಾಪಾಸ್ ಆಗ್ಲೇ ಇಲ್ಲ!
ಮಗನೇ ಎದ್ದೇಳೊ.. ಅಯ್ಯೋ ಮಗನೇ ಎಳೋ. ಸತ್ತು ಮಲಗಿರುವ ಮಗನ ಮೃತದೇಹಕ್ಕೆ ಮುತ್ತು ಕೊಟ್ಟು ದೃಷ್ಟಿ ತೆಗೆಯುತ್ತಿರುವ ತಾಯಿ.. ಗೋಳಾಡ್ತಿರುವ ತಂದೆ.. ಕಣ್ಣೀರು.. ಬರೀ ಕಣ್ಣೀರು.. ಹೆತ್ತವರ ಹೆತ್ತೊಡಲ ಸಂಕಟ ಇದ್ಯಲ್ಲ.. ಇದು ಯಾವ ನೋವಿಗೂ ಸಮ ಇಲ್ಲ.. ಅಷ್ಟಕ್ಕೂ ಇವ್ರ ನೋವಿಗೆ ಕಾರಣ ಪ್ರೀತಿ.. ಹದಿಹರೆಯದ ಪ್ರೀತಿ.
ಇವಳ ಹೆಸರು ವೀಣಾ. ಖಾಸಗಿ ವಾಹಿನಿಯ ಧಾರಾವಾಹಿಯ ನಟಿ. ಹೀಗೆ ಬಾಯ್ಫ್ರೆಂಡ್ ಬಗ್ಗೆ ರೀಲ್ಸ್ ಮಾಡ್ಕೊಂಡು ಬಿಲ್ಡಪ್ ಕೊಟ್ಕೊಂಡು ಓಡಾಡ್ತಿದ್ದ ಈ ಚೆಲುವೆ. ನಿಜವಾದ ಬಾಯ್ ಫ್ರೆಂಡ್ಗೆ ಏನ್ ಮಾಡಿದ್ಲು ಅಂತಾ ಕೇಳಿದ್ರೆ ಒಂದ್ ಕ್ಷಣ ಶಾಕ್ ಆಗುತ್ತೆ.
ರೀಲ್ಸ್ ರಾಣಿ ವೀಣಾ ಮೇಲೆ ಮದನ್ ಇಟ್ಟಿದ್ದ ಪ್ರಾಣ..!
ಹೌದು, ಈ ರೀಲ್ಸ್ ರಾಣಿ ವೀಣಾ, 25 ವರ್ಷದ ಮದನ್ ಎಂಬಾತನನ್ನ ಪ್ರೀತಿ ಮಾಡ್ತಾಯಿದ್ದಳು. ಸಿಲಿಕಾನ್ ಸಿಟಿಯ ಗಲ್ಲಿ ಗಲ್ಲಿಯಲ್ಲಿ ಈ ಜೋಡಿ ಕೈ ಕೈ ಹಿಡಿದು ಪಾರ್ಕ್, ಪಬ್, ಸಿನಿಮಾ ಅಂತೆಲ್ಲಾ ಸುತ್ತಾಡಿತ್ತು. ಆದ್ರೆ, ಇದೇ ಪ್ರೀತಿ.. ಇದೇ ಪ್ರೀತಿ ಇವತ್ತು ಮದನ್ನ ಸಾವಿನ ಮನೆ ಸೇರುವಂತೆ ಮಾಡಿಬಿಟ್ಟಿದೆ.
ಬಾ ಚಿನ್ನ ಪಾರ್ಟಿ ಮಾಡೋಣ ಅಂದವಳು ಟಾರ್ಚರ್ ಕೊಟ್ಳು!
ಪ್ರೀತಿ ಮಾಡೋದು ಮುಖ್ಯವಲ್ಲ.. ಪ್ರೀತಿ ಉಳಿಸಿಕೊಳ್ಳೇದೆ ಮುಖ್ಯ ಅನ್ನೋದು ಇದಕ್ಕೆ ಅನ್ಸುತ್ತೆ.. ಮದನ್ನ ಮನಸ್ಸಾರೆ ಇಷ್ಟ ಪಟ್ಟಿದ್ದ ವೀಣಾನಿಗೆ ಬೇರೆ ಹುಡುಗರ ಪರಿಚಯವೂ ಇತ್ತು.. ಹೀಗಾಗಿ, ವೀಣಾ ಮೇಲೆ ಅನುಮಾನ ಪಟ್ಟಿದ್ದ ಮದನ್ ಮದುವೆಗೆ ಒಲ್ಲೆ ಅಂದಿದ್ದ.. ಬಳಿಕ ಕೋಪಗೊಂಡಿದ್ದ ವೀಣಾ ಒಮ್ಮೆ ಮದನ್ ಮನೆ ಮುಂದೆ ಹೋಗಿ ಕೈ ಕೊಯ್ದುಕೊಂಡು ಮನೆ ಮುಂದೆ ಬೀದಿ ರಂಪಾಟ ಮಾಡಿದ್ಳು. ಕೈ ಕಟ್ ಮಾಡ್ಕೊಂಡು ಡ್ರಾಮಾ ಮಾಡಿದ್ಲು ಅನ್ನೋ ಮಾಹಿತಿ ಇದೆ.
ಗಲಾಟೆಯ ನಡುವೆಯೂ ಇವರಿಬ್ಬರ ಪ್ರೇಮಾಂಕುರಕ್ಕೇನು ಫುಲ್ ಸ್ಟಾಪ್ ಬಿದ್ದಿರ್ಲಿಲ್ಲ. ಆದ್ರೆ, ಈ ಮಧ್ಯೆಯೇ ಮದನ್ನ ಮದುವೆಯಾಗುವಂತೆ ವೀಣಾ ಹಿಂಸೆ ಕೊಡ್ತಾಯಿದ್ಳು ಅನ್ನೋ ಗುಮಾನಿ ಕೂಡ ಇದೆ. ಇನ್ನು ನಿನ್ನೆ ರಾತ್ರಿ ಹೊತ್ತಲ್ಲಿ ಮದನ್ಗೆ ಪಾರ್ಟಿ ಮಾಡೋಣ ಅಂತಾ ಕರೆದಿದ್ಳು. ಆದ್ರೆ, ನಗುನಗುತ್ತಲೇ ಶುರುವಾಗಿದ್ದ ಎಣ್ಣೆ ಪಾರ್ಟಿ, ಕೊನೆಗೆ ಮದನ್ ಮಸಣ ಸೇರಿಬಿಟ್ಟಿದ್ದ.
ಪ್ರೀತಿ ಕೊಂದ ಕೊಲೆಗಾತಿ..!
ಪಾರ್ಟಿ ಮಾಡೋಣ ಅಂತಾ ಮದನ್ನ ವೀಣಾ ಮನೆಗೆ ಕರೆದಿದ್ಳು. ಇಬ್ಬರು ರಾತ್ರಿ ಕಂಠ ಪೂರ್ತಿ ಕುಡಿದ್ದಿದ್ದಾರೆ. ಎಣ್ಣೆ ಕಿಕ್ಕೂ ನೆತ್ತಿಗೆ ಏರ್ತಾ ಏರ್ತಾ ಇದ್ದಂತೆ ಇಬ್ಬರ ಮಾತಿನ ವರಸೆ ಬದಲಾಗಿದೆ. ವರಸೆ ಬದಲಿಸಿದ್ದ ವೀಣಾ ಮದುವೆ ಮ್ಯಾಟ್ರೂ ತೆಗೆದಿದ್ದಾಳೆ.. ಸುಮಾರು 8.30ರ ವೇಳೆಗೆ ಇಬ್ಬರ ಮಧ್ಯೆ ಮದುವೆ ಪ್ರಸ್ತಾಪವಾಗಿದೆ.. ಜಗಳದ ಮಧ್ಯೆಯೇ ವಾಶ್ರೂಂಗೆ ಹೋಗ್ಬರ್ತೀನಿ ಅಂತಾ ಮದನ್ ಎದ್ದು ಹೋಗಿದ್ದಾನೆ.. ಆದ್ರೆ, ತುಂಬಾ ಹೊತ್ತಿನ ಬಳಿಕವಾದ್ರೂ ಮದನ್ ವಾಪಾಸ್ ಬಂದಿಲ್ಲ.. ಹೀಗಾಗಿ, ಏನಾಯ್ತು ಅಂತಾ ನೋಡಲು ಹೋದ ವೀಣಾ ಅಕ್ಷರಷಃ ಶಾಕ್ ಆಗಿದ್ದಾಳೆ. ಯಾಕಂದ್ರೆ, ಆತನ ದೇಹ ಫ್ಯಾನ್ನಲ್ಲಿ ನೇತಾಡ್ತಿತ್ತು.
ಅತ್ತ, ವೀಣಾ ಮದನ್ ಸ್ನೇಹಿತನನ್ನ ಪ್ರೀತಿ ಮಾಡ್ತಿದ್ದು, ಹೀಗಿದ್ರು ಮದನ್ನ್ನ ಪ್ರೀತಿ ಮಾಡುವಂತೆ ಒತ್ತಾಯಿಸಿದ್ಳಂತೆ. ಮದನ್ ಇಷ್ಟ ಇಲ್ಲ ಅಂದ್ರ ಮನೆ ಹತ್ತಿರ ಬಂದು ಗಲಾಟೆ ಮಾಡ್ತಿದ್ದಳು ಅಂತ ಮದನ್ ತಾಯಿ ಆರೋಪಿಸಿದ್ದಾರೆ.
ವೀಣಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರೋದಾಗಿ ಹುಳಿಮಾವು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವೀಣಾಳನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಏನೇ ಹೇಳಿ.. ಇಲ್ಲಿ ವೀಣಾ ನಿಜಕ್ಕೂ ಪ್ರೀತಿ ಮಾಡಿದ್ಳಾ? ಪ್ರೀತಿ ಹೆಸ್ರಲ್ಲಿ ನಾಟಕವಾಡಿದ್ಳಾ? ಅನ್ನೋದು ತನಿಖೆ ಮೂಲಕವೇ ಬಯಲಾಗಬೇಕು.
ಇದನ್ನೂ ಓದಿ: ಮತ್ತೊಂದು ತಿರುವಿಗೆ ಬಂದು ನಿಂತ ಮುಡಾ ಕೇಸ್; ಆರ್ ಅಶೋಕ್ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ