newsfirstkannada.com

ಕೊನೆಗೂ ಗೊತ್ತಾಯ್ತು.. ಶ್ರೇಷ್ಠಳ ಹುಡುಗನನ್ನು ನೋಡಿ ಕುಸಿದು ಬಿದ್ದ ಕುಸುಮಾ; ಇನ್ಮುಂದೆ ರೋಚಕ ಟ್ವಿಸ್ಟ್

Share :

Published September 1, 2024 at 8:21am

    ಮದುವೆಯಾಗೋ ತವಕದಲ್ಲಿದ್ದ ಶ್ರೇಷ್ಠಗೆ ಬಿಗ್ ​ಶಾಕ್​​

    ಶ್ರೇಷ್ಠಳಿಗೆ ಬುದ್ಧಿ ಕಲಿಸುವುದಾಗಿ ಪಣತೊಟ್ಟಿರೋ ಭಾಗ್ಯ

    ಭಾಗ್ಯಳನ್ನು ಬಿಟ್ಟು ಶ್ರೇಷ್ಠಳನ್ನು ಮದುವೆ ಆಗ್ತಾನಾ ತಾಂಡವ್​

ಕನ್ನಡ ಕಿರುತೆರೆಯಲ್ಲೇ ಹೊಸ ಸಂಚಲನ ಸೃಷ್ಟಿಸುತ್ತಿದೆ ಭಾಗ್ಯಲಕ್ಷ್ಮೀ ಧಾರಾವಾಹಿ. ಮೊದಲು ಅತ್ತೆ-ಸೊಸೆ ಮೂಲಕ ವೀಕ್ಷಕರಿಗೆ ಹತ್ತಿರವಾಗಿದ್ದ ಸೀರಿಯಲ್​ ರೋಚಕ ತಿರುವು ಪಡೆದುಕೊಂಡಿದೆ. ಹೇಗಾದರೂ ಮಾಡಿ ತಾಂಡವ್​ನನ್ನು ಮದುವೆ ಆಗೇ ಆಗ್ತೀನಿ ಅಂತ ಕೈಯಲ್ಲಿ ತಾಳಿ ಹಿಡಿದು ತುದಿಗಾಲಲ್ಲಿ ನಿಂತಿದ್ದಾಳೆ ಶ್ರೇಷ್ಠ.

ಇದನ್ನೂ ಓದಿ: ಇದು ನಮ್ಮ ಭಾಗ್ಯ ಅಂದ್ರೆ.. ಶ್ರೇಷ್ಠಾ ನಿನಗೆ ಮುಂದೆ ಇದೆ ಮಾರಿ ಹಬ್ಬ; ಭಾಗ್ಯಲಕ್ಷ್ಮೀ ಸೀರಿಯಲ್​ಗೆ ಭಾರೀ ಮೆಚ್ಚುಗೆ

ಮತ್ತೊಂದು ಕಡೆ ಯಾವ ವಿಚಾರವೂ ಗೊತ್ತಿಲ್ಲದ ಭಾಗ್ಯ ಶ್ರೇಷ್ಠಳ ಮದುವೆ ನಿಲ್ಲಿಸಬೇಕು ಅಂತ ಪಣತೊಟ್ಟಿದ್ದಾಳೆ. ಇದರ ಮಧ್ಯೆ ತಾಂಡವ್​ ತಾಯಿ, ಭಾಗ್ಯಳ ಅತ್ತೆ ಕುಸುಮಾ ಕೈಗೆ ಶ್ರೇಷ್ಠಳ ಲಗ್ನ ಪತ್ರಿಕೆ ಸಿಕ್ಕಿದೆ. ಇದು ಭಾಗ್ಯಲಕ್ಷ್ಮೀ ಸೀರಿಯಲ್​ನ ಸದ್ಯದ ಕಥೆ. ಇಷ್ಟು ದಿನ ಶ್ರೇಷ್ಠ ಮದುವೆ ಆಗೇ ಆಗ್ತೀನಿ ಅಂತ ಹಾಡಿದ್ದು ಏಕೆ ಅಂತ ಈಗ ಕುಸುಮಾಗೆ ತಿಳಿಯಲಿದೆ. ತಂದೆ ಆಸ್ಪತ್ರೆಗೆ ಸೇರಿದ್ರು ನಾನು ಮದುವೆ ಆಗೇ ಆಗ್ತೀನಿ. ಈ ಮದುವೆ ನಿಲ್ಲಿಸಲು ಯಾರಿದಂಲೂ ಸಾಧ್ಯ ಇಲ್ಲ ಅಂತ ಹೇಳಿದ್ದಳು ಶ್ರೇಷ್ಠ.

ಇಷ್ಟು ದಿನ ಮನೆಯಲ್ಲೇ ಇದ್ದ ಲಗ್ನ ಪತ್ರಿಕೆಯನ್ನು ಮನೆಯವರು ನೋಡಿರಲಿಲ್ಲ. ಇದೀಗ ಶ್ರೇಷ್ಠಳ ಮದುವೆ ಪತ್ರಿಕೆಯನ್ನು ನೋಡಿದ ತಾಂಡವ್​ ಅಮ್ಮ ಕುಸುಮಾ ಬೆಚ್ಚಿ ಬಿದ್ದಿದ್ದಾರೆ. ಕಾರಣ ಮನೆಹಾಳಿ ಶ್ರೇಷ್ಠಳನ್ನು ಮದುವೆ ಆಗ್ತಾ ಇರೋದು ತನ್ನ ಮಗನೇ ಅಂತ ತಿಳಿದ ಕುಸುಮಾ ಅಕ್ಷರಶಃ ಬೆಚ್ಚಿ ಬಿದ್ದಿದ್ದಾಳೆ. ನನ್ನ ಮುದ್ದಾದ ಸೊಸೆಯನ್ನು ಬಿಟ್ಟು ಹಾಳಾದ ಶ್ರೇಷ್ಠಳನ್ನು ನನ್ನ ಮಗ ಮದುವೆ ಆಗ್ತಾ ಇದ್ದಾನಾ ಅಂತ ಕುಸುಮಾ ಕಣ್ಣೀರು ಹಾಕುತ್ತಿದ್ದಾಳೆ. ಮದುವೆ ಆಗೇ ಆಗ್ತೀನಿ ಅಂತ ಪಣ ತೊಟ್ಟ ಶ್ರೇಷ್ಠಳ ಪ್ಲಾನ್​ ಉಲ್ಟಾ ಆಗುತ್ತಾ? ಶ್ರೇಷ್ಠ ಹಾಗೂ ತಾಂಡವ್​ಗೆ ತಕ್ಕ ಬುದ್ದಿ ಕಲಿಸುತ್ತಾಳಾ ಅಂತ ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಗೊತ್ತಾಯ್ತು.. ಶ್ರೇಷ್ಠಳ ಹುಡುಗನನ್ನು ನೋಡಿ ಕುಸಿದು ಬಿದ್ದ ಕುಸುಮಾ; ಇನ್ಮುಂದೆ ರೋಚಕ ಟ್ವಿಸ್ಟ್

https://newsfirstlive.com/wp-content/uploads/2024/09/laxmi-baramma7.jpg

Load More