newsfirstkannada.com

×

ಭಾಗ್ಯಳ ಮಾಡ್ರನ್ ಲುಕ್​ಗೆ ಫ್ಯಾನ್ಸ್​ ಫುಲ್​ ಫಿದಾ! ಇನ್ಮುಂದೆ ಭಾಗ್ಯಲಕ್ಷ್ಮೀ ಸಿರೀಯಲ್​ಗೆ ಬಿಗ್​ ಟ್ವಿಸ್ಟ್​

Share :

Published September 27, 2024 at 6:14am

    ಭಾಗ್ಯಾಳ ಪ್ರಶ್ನೆಗೆ ಉತ್ತರ ಕೊಡುವ ಸ್ಥಿತಿಯಲ್ಲಿಲ್ಲ ಅತ್ತೆ ಕುಸುಮಾ

    ದಿನೇ ದಿನೇ ಹೊಸ ಟ್ವಿಸ್ಟ್​ ಪಡೆದುಕೊಳ್ತಿದೆ ಭಾಗ್ಯಲಕ್ಷ್ಮೀ ಸೀರಿಯಲ್

    ಭಾಗ್ಯಳನ್ನು ಮಾಡ್ರನ್ ಲುಕ್​ನಲ್ಲಿ ನೋಡಲು​ ರೆಡಿಯಿಲ್ಲ ವೀಕ್ಷಕರು!

ಅಬ್ಬಬ್ಬಾ ಒಂದೊಂದು ಸೀನ್​ಗಳು ವೀಕ್ಷಕರಲ್ಲಿ ಮತ್ತಷ್ಟೂ ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಈಗಂತೂ ವೀಕ್ಷಕರಲ್ಲಿ ಕೌತುಕ ಹೆಚ್ಚಿಸಿವೆ ಭಾಗ್ಯಲಕ್ಷ್ಮೀ ಸೀರಿಯಲ್​ ಸನ್ನಿವೇಶಗಳು. ತಾಂಡವ್​ನ ನಿಜ ರೂಪ ಕುಸುಮಾ ಮುಂದೆ ಬಯಲಾಗಿದೆ. ಯಾಕೆ ಹೀಗೆ ಮಾಡಿದೆ ತಾಂಡವ್​ ಅಂತ ಕೇಳಿದ್ದಕ್ಕೇ ಎಲ್ಲಾ ನಿನ್ನಿಂದಲೇ ಆಗಿದ್ದು ಅಮ್ಮ ಅಂತ ಶಾಕ್​ ಕೊಟ್ಟಿದ್ದಾನೆ​.

ಇದನ್ನೂ ಓದಿ: BIGG BOSS​ನಲ್ಲಿ ಕನ್ನಡತಿಯದ್ದೇ ಹವಾ; ನಟಿ ಪ್ರೇರಣಾ ಕಂಬಂ ಆಟಕ್ಕೆ ಕನ್ನಡಿಗರು ಫುಲ್​ ಖುಷ್!

ಭಾಗ್ಯ ಮಾಡ್ರನ್​ ಆಗಿಲ್ಲ, ಅಂತವಳನ್ನು ನನಗೆ ತಂದು ಗಂಟು ಹಾಕಿದ್ದೀಯಾ ಅದಕ್ಕೆ ನಾನು ಶ್ರೇಷ್ಠಾಳನ ಮದುವೆ ಆಗೋ ನಿರ್ಧಾರ ಮಾಡಿದ್ದೇನೆ ಅಂತ ಅಮ್ಮನ ಮೇಲೆ ಆರೋಪ ಮಾಡಿದ್ದಾನೆ. ತಾಂಡವ್​ ಮಾತಿಗೆ ಶಾಕ್​ ಆಗಿ ಕುಸುಮಾ ಕೂಡ ಸವಾಲ್​ ಹಾಕಿದ್ದಾಳೆ. ಇನ್ನು, ಒಂದು ತಿಂಗಳಲ್ಲಿ ನಿನಗೆ ಹೇಗೆ ಬೇಕು ಹಾಗೇ ಭಾಗ್ಯನ ತಯಾರು ಮಾಡ್ತೀನಿ ಅಂತ ಅಬ್ಬರಿಸಿದ್ದಾಳೆ.

ಇದಕ್ಕೆ ತಾಂಡವ್​ ಒಂದು ತಿಂಗಳಲ್ಲಿ ನಿನ್ನಿಂದ ಈ ಚಾಲೆಂಜ್​ನ ಪೂರ್ಣ ಮಾಡೋಕೆ ಆಗ್ಲಿಲ್ಲ ಅಂದ್ರೇ ನೀನೇ ನಿನ್ನ ಕೈಯಾರೆ ಭಾಗ್ಯ ಕಡೆಯಿಂದ ಡಿವೋರ್ಸ್​​ ಕೊಡಿಸಬೇಕು ಅಂತ ತಿರುಗೇಟು ಕೊಟ್ಟಿದ್ದಾನೆ. ಇತ್ತ ಶ್ರೇಷ್ಠಾ ಅವಮಾನ ಪ್ರತಿಕಾರದಲ್ಲಿ ಕುದಿತಿದ್ದಾಳೆ. ತೆರೆ ಮೇಲೆ ಅಬ್ಬರಸ್ತಿರೋ ಕಲಾವಿದರು ಬೀರುಸಿನ ಶೂಟಿಂಗ್​ ನಡುವೆ ಸಖತ್​ ಮಜಾ ಮಾಡ್ತಿದ್ದಾರೆ. ಮದುವೆ ಮಂಟಪದಲ್ಲಿ ಶ್ರೇಷ್ಠಾ, ತಾಂಡವ್​, ಭಾಗ್ಯಾ ಫನ್​ ಮಾಡ್ತಾ ಇರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಇನ್ನೂ ಭಾಗ್ಯ ಮಾಡ್ರನ್​ ಮಹಿಳೆಯಾಗಿ ತಯಾರಾಗ್ತಾಳೆ ಅನ್ನೋ ಪ್ರೊಮೋಗೆ ವೀಕ್ಷಕರ ಕಡೆಯಿಂದ ವಿರೋಧ ವ್ಯಕ್ತವಾಗ್ತಿದೆ. ಹೆಣ್ಮಕ್ಕಳೇ ಯಾಕೆ ಬದಲಾಗಬೇಕು? ತಾಂಡವ್​ಗೆ ಒತ್ತಾಯ ಮಾಡೋ ಬದಲು ಭಾಗ್ಯನ ಸ್ವತಂತ್ರ್ಯ ಮಾಡಿ. ತಾಂಡವ್​ಗೆ ಬುದ್ಧಿ ಕಲಿಸಿ. ಅದು ಬಿಟ್ಟು ಗೃಹಿಣಿ ಆಗಿ ಅಚ್ಚು ಕಟ್ಟಾಗಿರೋ ಭಾಗ್ಯನ ಬದಲಾಯಿಸಬೇಡಿ. ಇದ್ರಿಂದ ಬ್ಯಾಡ್​ ಮೇಸೆಜ್​ ರವಾನೆ ಆಗುತ್ತೆ ಅಂತ ಹಲವರು ಈ ಸೀನ್​ ವಿರುದ್ಧ ಹರಿಹಾಯ್ದಿದ್ದಾರೆ. ಒಟ್ಟಿನಲ್ಲಿ ಭಾಗ್ಯ ಪಾತ್ರ ತುಂಬಾ ಜನಕ್ಕೆ ಸ್ಪೂರ್ತಿ ನೀಡುತ್ತಿದ್ದು, ಪಾತ್ರದಲ್ಲಿ ಕೊಂಚ ಬದಲಾವಣೆ ಆದ್ರು ವೀಕ್ಷಕರ ಮೇಲೆ ಪ್ರಭಾವ ಬೀರೋದ್ರಲ್ಲಿ ಡೌಟೇ ಇಲ್ಲ. ಮುಂದೆ ಯಾವ ರೀತಿ ಕಥೆ ಹೋಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾಗ್ಯಳ ಮಾಡ್ರನ್ ಲುಕ್​ಗೆ ಫ್ಯಾನ್ಸ್​ ಫುಲ್​ ಫಿದಾ! ಇನ್ಮುಂದೆ ಭಾಗ್ಯಲಕ್ಷ್ಮೀ ಸಿರೀಯಲ್​ಗೆ ಬಿಗ್​ ಟ್ವಿಸ್ಟ್​

https://newsfirstlive.com/wp-content/uploads/2024/09/bhagya-laxmi1-1.jpg

Load More