/newsfirstlive-kannada/media/post_attachments/wp-content/uploads/2024/08/PSI-Wife-1.jpg)
ಯಾದಗಿರಿಯಲ್ಲಿ ದಕ್ಷ ಪೊಲೀಸ್ ಅಧಿಕಾರಿ ಪರಶುರಾಮ್ ಅಂತ್ಯಕ್ರಿಯೆ ಕುಟುಂಬಸ್ಥರ ಆಕ್ರಂದನಗಳ ನಡುವೆ ನಡೆದಿದೆ. ಪಿಎಸ್​ಐ ಸಾವಿನ ಹಿಂದೆ ಅನುಮಾನಗಳ ಹುತ್ತ ಬೆಳೆದಿದ್ದು ಸಚಿವ ಶಿವರಾಜ ತಂಗಡಗಿ ಎದುರು ಕುಟುಂಬ ನ್ಯಾಯಕ್ಕಾಗಿ ಕಣ್ಣೀರಿಟ್ಟಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಗೆ ಆದೇಶ ನೀಡಿದ್ದಾರೆ.
ಬೇಕೇ ಬೇಕು ನ್ಯಾಯ ಬೇಕು.. ಯಾತಕ್ಕಾಗಿ ಹೋರಾಟ ನ್ಯಾಯಕ್ಕಾಗಿ ಹೋರಾಟ.. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ.. ಈ ಅಕ್ರೋಶದ ಕೂಗು ಕೇಳಿಬಂದಿರೋದು ಯಾದಗಿರಿಯಲ್ಲಿ. ರಾಜ್ಯದಲ್ಲಿ ಮತ್ತೋರ್ವ ದಕ್ಷ ಪೊಲೀಸ್ ಅಧಿಕಾರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪ್ರಕರಣದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮೃತ ಪಿಎಸ್​ಐ ಕುಟುಂಬ ನ್ಯಾಯಕ್ಕಾಗಿ ಮೊರೆ ಇಟ್ಟಿದೆ.
/newsfirstlive-kannada/media/post_attachments/wp-content/uploads/2024/08/PSI-death-1.jpg)
ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು
ಯಾದಗಿರಿ ನಗರ ಪೊಲಸ್ ಸಬ್​ ಇನ್ಸ್​ ಪೆಕ್ಟರ್ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮೊದಲು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಮೃತ ಪಿಎಸ್​ಐ ಪತ್ನಿ ಶ್ವೇತಾ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪನಗೌಡ ವಿರುದ್ಧ ದೂರು ಸಲ್ಲಿಸಿದ್ದಾರೆ. ಮತ್ತೊಂದೆಡೆ ಪಿಎಸ್​ಐ ಪರಶುರಾಮ್ ಸಾವು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು, ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶ ನೀಡಿದ್ದಾರೆ.
ಇದನ್ನೂ ಓದಿ: ಕೊನೆಗೂ ದರ್ಶನ್ ಬಳಸಿದ SIM ಪತ್ತೆ ಹಚ್ಚಿದ ಪೊಲೀಸರು; ಆಪರೇಷನ್ ಹೇಗಿತ್ತು? ಪಿನ್ ಟು ಪಿನ್ ಮಾಹಿತಿ!
/newsfirstlive-kannada/media/post_attachments/wp-content/uploads/2024/08/PSI-Wife-2.jpg)
ಅಂತ್ಯಕ್ರಿಯೆಯಲ್ಲಿ ಸಚಿವ ಶಿವರಾಜ ತಂಗಡಗಿ ಭಾಗಿ
ಪಿಎಸ್​ಐ ಪರಶುರಾಮ್ ಅಂತ್ಯಕ್ರಿಯೆ ಹುಟ್ಟೂರು ಕೊಪ್ಪಳದ ಸೋಮನಾಳ ಗ್ರಾಮದಲ್ಲಿ ನಡೀತು. ಪರಶುರಾಮ್ ಜಮೀನಿನಲ್ಲಿ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಪರಶುರಾಮ್ ತಾಯಿ, ತುಂಬು ಗರ್ಭಿಣಿಯಾಗಿರುವ ಪತ್ನಿ ಸೇರಿ ಕುಟುಂಬಸ್ಥರ ಕಣ್ಣೀರ ಕೋಡಿ ಹರಿದಿತ್ತು. ಅಂತ್ಯಕ್ರಿಯೆಯಲ್ಲಿ ಸಚಿವ ಶಿವರಾಜ ತಂಗಡಗಿ ಭಾಗಿಯಾಗಿದ್ದರು. ಸಚಿವರ ಎದುರು ಕುಟುಂಬ ನ್ಯಾಯಕ್ಕಾಗಿ ಮೊರೆ ಇಟ್ಟಿದೆ. ತಪ್ಪಿತಸ್ಥರನ್ನು ಬಂಧಿಸುವಂತೆ ಆಕ್ರೋಶ ಹೊರ ಹಾಕಿದೆ.
ಇದನ್ನೂ ಓದಿ:ಬಾಡಿಗೆ ಕಟ್ಟಲಾಗದೇ IAS ಆಕಾಂಕ್ಷಿ ಸಾವಿಗೆ ಶರಣು.. ಅಮ್ಮ, ಅಪ್ಪಗೆ ಯುವತಿ ಹೇಳಿದ್ದೇನು?
/newsfirstlive-kannada/media/post_attachments/wp-content/uploads/2024/08/PSI-Wife.jpg)
ಒಟ್ಟಾರೆ.. ಪಿಎಸ್​ಐ ಪರಶುರಾಮ್​ ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಾನಾ ಅನುಮಾನ ಮೂಡಿದೆ. ಪೋಸ್ಟಿಂಗ್​ಗಾಗಿ ಡೀಲಿಂಗ್​ ಆರೋಪವೂ ಕೇಳಿ ಬಂದಿದೆ. ಸದ್ಯ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸಿಐಡಿ ಅಧಿಕಾರಿಗಳು ಸೂಕ್ತ ರೀತಿ ತನಿಖೆಯ ಮೂಲಕ ಅಸಲಿ ಸತ್ಯವನ್ನು ಪತ್ತೆ ಹಚ್ಚಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us