newsfirstkannada.com

ಬೆಂಗಳೂರು ಯುವತಿ ಸಾವಿನ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​.. ಇದು ಆತ್ಮಹತ್ಯೆಯಲ್ಲ ಕೊಲೆ

Share :

06-06-2023

    ಯುವತಿ ಸಾವಿನ ಬಗ್ಗೆ ಪೊಲೀಸರಿಗೆ ಅನುಮಾನ

    ಆತ್ಮಹತ್ಯೆ ಕಂಡರು ಕೊಲೆ ಮಾಡಿ ಎಸ್ಕೇಪ್​ ಆಗಿರುವ ವ್ಯಕ್ತಿ

    ಯುವತಿಯನ್ನು ಕೊಲೆ ಮಾಡಿರೋದು ಯಾರು ಗೊತ್ತಾ?

ಬೆಂಗಳೂರು: ನಿನ್ನೆ ಯುವತಿಯೊಬ್ಬಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ ಪ್ರಕರಣ ಜೀವನ್ ಭಿಮಾ ನಗರದ ಕೋಡಿಹಳ್ಳಿಯಲ್ಲಿ ಬೆಳಕಿಗೆ ಬಂದಿತ್ತು. ಆದರೀಗ ಯುವತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂಬುದು ಪೊಲೀಸರಿಂದ ಧೃಡವಾಗಿದೆ.

ಹೈದರಾಬಾದ್ ಮೂಲದ ಆಕಾಂಕ್ಷ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆದರೆ ಯುವತಿ ಸಾವಿನ ಬಗ್ಗೆ ಅನುಮಾನ ಬಂದ ಪೊಲೀಸರಿಗೆ ತನಿಖೆ ವೇಳೆ ನಿಜ ಸಂಗತಿ ಬೆಳಕಿಗೆ ಬಂದಿದೆ. ಗೆಳೆಯ ಆಕಾಂಕ್ಷಳನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.

ಕೊಲೆ ಆರೋಪಿ ಅರ್ಪಿತ್​ ದೆಹಲಿ ಮೂಲದವನಾಗಿದ್ದು, ಆಕಾಂಕ್ಷಾ ಮತ್ತು ಗೆಳೆಯ ಅರ್ಪಿತ್ ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಹಲವಾರು ದಿನಗಳಿಂದ ಇವರಿಬ್ಬರ ನಡುವೆ ಗಲಾಟೆ ಆಗುತಿತ್ತು. ನಿನ್ನೆ ಇಬ್ಬರ ನಡುವೆ ಮತ್ತೊಮ್ಮೆ ಗಲಾಟೆ ಆಗಿದೆ. ಗಲಾಟೆ ವೇಳೆ
ಇಬ್ಬರು ಬೇರೆಯಾಗಬೇಕು ಎಂದು ಮಾತಾಡಿಕೊಂಡಿದ್ದರು. ಈ ನಡುವೆ ನಿನ್ನೆ ಇಬ್ಬರು ಮನೆಯಲ್ಲಿ ಇರುವಾಗ ಗಲಾಟೆ ನಡೆದಿದೆ.

ನಿನ್ನೆ ಅರ್ಪಿತ್​ ಮತ್ತು ಆಕಾಂಕ್ಷ ನಡುವೆ ಗಲಾಟೆ ತಾರಕಕ್ಕೇರಿದೆ. ಈ ವೇಳೆ ಅರ್ಪಿತ್​ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಯುವತಿಯ ಕುತ್ತಿಗೆಗೆ ಬಟ್ಟೆ ಕಟ್ಟಿ ನೇಣು ಹಾಕಿಕೊಂಡು ಸಾವನಪ್ಪಿರುವ ರೀತಿ ಬಿಂಬಿಸಲು ಯತ್ನಿಸಿದ್ದಾನೆ.

ಅರ್ಪಿತ್​ ಕೊಲೆ ಮಾಡಿದ ಬಳಿಕ ಆಕಾಂಕ್ಷ ಮೃತ ದೇಹವನ್ನ ಫ್ಯಾನ್ ಗೆ ಕಟ್ಟಲಾಗದೆ ಕೊನೆಗೆ ನೆಲದ ಮೇಲೆ ಬಿಟ್ಟಿದ್ದಾನೆ. ಬಳಿಕ
ಮನೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ರಾತ್ರಿ ಮತ್ತೊರ್ವ ರೂಂಮೇಟ್​ ಕೆಲಸ ಮುಗಿಸಿ ಮನೆಗೆ ಬಂದಾಗ ಆಕಾಂಕ್ಷ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಮೊದಲಿಗೆ ಅನುಮಾನಾಸ್ಪದ ಸಾವು ಎಂದು ಕೊಂಡಿದ್ದ ಪೊಲೀಸರು ಸ್ಥಳ ಪರಿಶೀಲನೆ ಬಳಿಕ ಕೊಲೆ ಎಂಬದು ಗೊತ್ತಾಗಿದೆ. ಸದ್ಯ ಅರೋಪಿ ವಿರುದ್ದ ಜೀವನ್ ಭಿಮಾ ನಗರ ಪೊಲೀಸರು ಕೊಲೆ ಕೇಸ್ ದಾಖಲು ಮಾಡಿದ್ದಾರೆ. ಅತ್ತ ತಲೆಮರೆಸಿಕೊಂಡಿರೊ ಅರ್ಪಿತ್ ಗಾಗಿ ಪೊಲೀಸರ ಹುಡುಕಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಯುವತಿ ಸಾವಿನ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​.. ಇದು ಆತ್ಮಹತ್ಯೆಯಲ್ಲ ಕೊಲೆ

https://newsfirstlive.com/wp-content/uploads/2023/06/Murder-1-1.jpg

Load More