ಸುಮಾರು ವರ್ಷಗಳಿಂದ ಪ್ರೀತಿಯಲ್ಲಿದ್ದ ಯುವತಿ ಕಂಪ್ಲೇಂಟ್ ಕೊಟ್ಟಿದ್ದೇಕೆ?
ನಿನ್ನೆಯಿಂದ ಸುದ್ದಿಯಲ್ಲಿದ್ದಾರೆ ‘ಬೃಂದಾವನ’ ಸೀರಿಯಲ್ ನಟ ವರುಣ್
ನಟ ವರುಣ್ ಆರಾಧ್ಯ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದಿದ್ದು ನಿಜಾನಾ?
ನಿನ್ನೆಯಿಂದ ‘ಬೃಂದಾವನ’ ಸೀರಿಯಲ್ ನಟ ವರುಣ್ ಆರಾಧ್ಯ ವಿರುದ್ಧ ದಾಖಲಾಗಿರೋ FIRನದ್ದೇ ಸದ್ದು ಸುದ್ದಿ. ಯುವತಿಯೊಬ್ಬರು ಬಸವೇಶ್ವರ ನಗರ ಸೆನ್ ಪೊಲೀಸ್ ಠಾಣೆಯಲ್ಲಿ ವರುಣ್ ವಿರುದ್ಧ ಸೆಪ್ಟಂಬರ್ 7ನೇ ತಾರೀಖು ಕೇಸ್ವೊಂದನ್ನು ದಾಖಲಿಸಿದ್ರು. ತನ್ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ ಅಂತ ಆರೋಪ ಮಾಡಿ ವರುಣ್ ಆರಾಧ್ಯ ವಿರುದ್ಧ ಸುಮಾರು ವರ್ಷಗಳಿಂದ ವರುಣ್ ಜೊತೆ ಪ್ರೀತಿಯಲ್ಲಿದ್ದ ಯುವತಿ ಕಂಪ್ಲೇಂಟ್ ಕೊಟ್ಟಿದ್ದಾಳೆ.
ಇದನ್ನೂ ಓದಿ: ವರುಣ್ ಆರಾಧ್ಯ ಮತ್ತು ಮಾಜಿ ಪ್ರೇಯಸಿಯ ಕತೆಯಲ್ಲಿ ಬಿಗ್ ಟ್ವಿಸ್ಟ್! ಇನ್ಸ್ಟಾಗ್ರಾಂನಲ್ಲಿ ಹೀಗೊಂದು ಪೋಸ್ಟ್
4 ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದ ವರುಣ್ ಆರಾಧ್ಯ ತನ್ನನ್ನ ಪ್ರೀತಿಸಿ ವಂಚಿಸಿದ್ದಾನೆ. ನಾನು ವರುಣ್ ಫೋನ್ನಲ್ಲಿ ಆತ ಬೇರೆ ಯುವತಿ ಜೊತೆಗಿರೋ ಖಾಸಗಿ ಫೋಟೋ ನೋಡಿದೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನಮ್ಮಿಬ್ಬರ ಲವ್ ಬ್ರೇಕಪ್ ಆಗಿತ್ತು. ಲವ್ ಬ್ರೇಕಪ್ ಆಗುತ್ತಿದ್ದಂತೆ ವರುಣ್ ನನ್ನ ಬ್ಲ್ಯಾಕ್ ಮೇಲ್ ಮಾಡ್ತಿದ್ದಾನೆ. ಖಾಸಗಿ ಫೋಟೋಗಳ ಬಗ್ಗೆ ಎಲ್ಲೂ ಬಾಯ್ಬಿಡದಂತೆ ನನಗೆ ಧಮ್ಕಿ ಹಾಕಿದ್ದಾನೆ ಅಂತ ಕಂಪ್ಲೇಂಟ್ ಕೊಟ್ಟಿದ್ರು.
ಅಷ್ಟೇ ಅಲ್ಲ 2023ರ ಸೆಪ್ಟೆಂಬರ್ 10ನೇ ತಾರೀಕು ವರುಣ್ ವಾಟ್ಸ್ಆ್ಯಪ್ ನಂಬರ್ನಿಂದ ವಾಟ್ಸ್ಆ್ಯಪ್ ನಂಬರ್ಗೆ ನನ್ನ ಖಾಸಗಿ ಫೋಟೋವನ್ನು ಕಳುಹಿಸಿದ್ದಾನೆ. ಇದನ್ನು ನೋಡಿ ಶಾಕ್ ಆಗಿ, ಈ ರೀತಿ ಯಾಕೆ ಕಳುಹಿಸುತ್ತಿದ್ದೀಯಾ ಅಂತ ನಾನು ಕೇಳಿದ್ದೆ. ತನ್ನ ಹತ್ತಿರ ಇನ್ನೂ ಹೆಚ್ಚಿನ ಖಾಸಗಿ ಫೋಟೋ ಮತ್ತು ವಿಡಿಯೋಗಳಿವೆ. ಅವುಗಳನ್ನು ನಾನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡ್ತೀನಿ ಅಂತ ನನಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಹಾಗೂ ಮುಂದೆ ನೀನು ಯಾರನ್ನಾದ್ರು ಮದುವೆಯಾದ್ರೆ, ಮದುವೆಯಾಗೋ ಹುಡುಗನನ್ನೂ ಸೇರಿ ನಿನ್ನನ್ನು ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದಾನೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ರು.
ಇಷ್ಟೆಲ್ಲಾ ನಡೆದಿದ್ದು, 2019ರ ಮೇಯಿಂದ 2023ರ ಸೆಪ್ಟೆಂಬರ್ವರೆಗೆ. ವರುಣ್ ಆರಾಧ್ಯನ ಪ್ರಾಣ ಬೆದರಿಕೆಗೆ ಹೆದರಿ ಇಲ್ಲಿವರೆಗೆ ದೂರು ನೀಡಿರ್ಲಿಲ್ಲ ಅಂತಾನೂ ಕಂಪ್ಲೇಂಟ್‌ನಲ್ಲಿ ಉಲ್ಲೇಖಿಸಿದ್ರು. ಆದ್ರೆ ಕಂಪ್ಲೆಂಟ್ ಕೊಟ್ಟ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ವರದಿಯಾಗ್ತಿದ್ದಂತೆ ಮಾಜಿ ಪ್ರೇಯಸಿ ಹಾಗೂ ವರುಣ್ ಆರಾಧ್ಯ ಇಬ್ಬರೂ ಕೇಸ್ಗೆ ಟ್ವಿಸ್ಟ್ ಕೊಟ್ಟಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಮಾಜಿ ಪ್ರೇಯಸಿ ಪೋಸ್ಟ್ ಒಂದನ್ನ ಹಾಕಿದ್ದು, ಅದರಲ್ಲಿ ನಾನು ಕಂಪ್ಲೇಂಟ್ ಕೊಟ್ಟಿರೋದು ಸೋಷಿಯಲ್ ಮೀಡಿಯಾದಲ್ಲಿ ಹಳೇ ರೀಲ್ಸ್ಗಳನ್ನ ತೆಗೆದುಹಾಕೋ ಬಗ್ಗೆ ಅಷ್ಟೇ. ಬೇರೆಲ್ಲಾ ಸುಳ್ಳು ಸುದ್ದಿ ಅಂತ ಆರೋಪಿಸಿದ್ದಾರೆ. ಮತ್ತೊಂದ್ಕಡೆ ವರುಣ್ ಆರಾಧ್ಯ ಕೂಡಾ ಇದೇ ರೀತಿ ಒಂದು ವೀಡಿಯೋ ಮಾಡಿ ಮೀಡಿಯಾದಲ್ಲಿ ಬರ್ತಿರೋದೆಲ್ಲಾ ಸುಳ್ಳು ಎಂದಿದ್ದಾರೆ.
ಇದನ್ನೂ ಓದಿ: ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡಿದ್ದ ಸೀರಿಯಲ್ ನಟ ಕೇಸ್ಗೆ ಬಿಗ್ ಟ್ವಿಸ್ಟ್; ಅಸಲಿಗೆ ಆಗಿದ್ದೇನು?
ಈ ಹೇಳಿಕೆಗಳಿಗೆ ಅಸಲಿ ಕಾರಣ ಇಬ್ಬರ ಮಧ್ಯೆ ಠಾಣೆಯಲ್ಲಿ ಆಗಿರೋ ಕಾಂಪ್ರೋಮೈಸ್. ಇಬ್ಬರ ಮಧ್ಯೆ ಬ್ರೇಕಪ್ ಆಗಿತ್ತು, ಗಲಾಟೆಯಾಗಿತ್ತು, ದೂರು ಕೊಟ್ಟ ಮೇಲೆ ಈಗ ಠಾಣೆಯಲ್ಲಿ ಕಾಂಪ್ರಮೈಸ್ ಆಗಿದ್ದಾರೆ. ಎಲ್ಲವೂ ಓಕೆ. ಸಂಬಂಧ ಅಂದಮೇಲೆ ಕೆಲವು ಸಾರಿ ಭಿನ್ನಾಭಿಪ್ರಾಯಗಳು ಬರೋದು ಸಹಜ. ಈಗ ಭಿನ್ನಭಿಪ್ರಾಯಗಳನ್ನ ಇಬ್ಬರು ಬಗೆಹರಿಸಿಕೊಂಡಿದ್ದಾರೆ. ಅವರಿಬ್ಬರ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆನೇ. ಆದರೆ, ಅವರಿಬ್ಬರು ಕಾಂಪ್ರಮೈಸ್ ಆದ್ರು ಅಂತಾ ಈಗ ಮಾಧ್ಯಮಗಳ ಮೇಲೆ ಗೂಬಿ ಕೂರಿಸ್ತಿದ್ದಾರೆ. ಮಾಧ್ಯಮಗಳಲ್ಲಿ ಬರ್ತಿರೋದು ಸುಳ್ಳು ಸುದ್ದಿ ಅಂತಾ ಬೊಬ್ಬೆ ಹೊಡೆಯುತ್ತಿದ್ದಾರೆ. ಇದು ನಿಜವಾದ ಡ್ರಾಮಾ ಅಲ್ವಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ