newsfirstkannada.com

ಕಲಬುರಗಿ ಯುವಕನ ಬರ್ಬರ ಕೊಲೆ ಕೇಸ್​​ಗೆ ಬಿಗ್​​ ಟ್ವಿಸ್ಟ್.. ತಂಗಿಯನ್ನು ಪ್ರೀತಿಸಿದ್ಕೆ ರೊಚ್ಚಿಗೆದ್ದ ಅಣ್ಣ..

Share :

Published July 11, 2024 at 9:23am

Update July 11, 2024 at 9:24am

  ಪ್ರೀತಿ, ಪ್ರೇಮ ಎಂದಿದ್ದಕ್ಕೆ ಹರಿಯಿತು ನೆತ್ತರ ಕೊಡಿ

  ಹಾಡಹಗಲೇ ಯುವಕನಿಗೆ ಚಾಕು ಚುಚ್ಚಿ ಬರ್ಬರ ಹತ್ಯೆ

  ಪೊಲೀಸ್ ತನಿಖೆ ವೇಳೆ ಭಯಾನಕ ಮಾಹಿತಿ ರಿವೀಲ್

ಕಲಬುರಗಿ-ಶಾಹಬಾದ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ 24 ವರ್ಷದ ಯುವಕ ಪ್ರವೀಣ್ ಬಿರಾದರ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಪರಚಿತ ಶವ ಪತ್ತೆ ಬೆನ್ನಲ್ಲೇ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಆಗಿದ್ದೇನು..?
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಬೋಮ್ಮ‌ನಹಳ್ಳಿ ಗ್ರಾಮದ ಪ್ರವೀಣ್, ಕಳೆದ ಕೆಲ ವರ್ಷಗಳಿಂದ ಕಲಬುರಗಿ ನಗರದ ಓಝಾ ಲೇಔಟ್​ನಲ್ಲಿ ಕುಟುಂಬದ ಜೊತೆ ವಾಸವಾಗಿದ್ದ. ಇತ್ತೀಚೆಗೆ ವಾಟರ್ ಸಪ್ಲೈ ಮಾಡುವ ಆಟೋ ಓಡಿಸುತ್ತಿದ್ದ. ಅಂದ್ಹಾಗೆ ಪ್ರವೀಣ್ ಕಡು ಬಡತನದಲ್ಲಿ ಬೆಳೆದಿದ್ದ ಹುಡುಗ. ಮನೆ ನಡೆಸಲು ಆತ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಮೊನ್ನೆಯ ದಿನ ಸ್ನೇಹಿತರು ಕರೆದರು ಎಂದು ಹೊರಗೆ ಹೋಗಿದ್ದ. ಬಳಿಕ ಕಲಬುರಗಿ-ಶಾಹಬಾದ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಪ್ರವೀಣ್ ಕೊಲೆಯಾಗಿದ್ದ.

ಗುಲ್ಬರ್ಗ ವಿವಿ ಠಾಣೆ ಪೊಲೀಸರಿಗೆ ವ್ಯಕ್ತಿಯೊಬ್ಬ ಫೋನ್ ಮಾಡಿ ನಿರ್ಜನ ಪ್ರದೇಶದಲ್ಲಿ ಡೆಡ್ ಬಾಡಿ ಬಿದ್ದಿದೆ ಎಂದು ಹೇಳಿದ್ದ. ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಪರೀಶಿಲನೆ ನಡೆಸಿದಾಗ ಮೊದಲಿಗೆ ಮೃತದೇಹ ಯಾರದ್ದು ಎಂದು ಗೊತ್ತಾಗಲಿಲ್ಲ. ತೀವ್ರ ಪರಿಶೀಲನೆ ಬಳಿಕ ಯಾರು ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ:ಓದಿಸಿ ಸರ್ಕಾರಿ ಕೆಲಸ ಕೊಡಿಸಿದ ಪತಿ.. ಡ್ಯೂಟಿಗೆ ಸೇರ್ತಿದ್ದಂತೆ ಗಂಡನ ಬಿಟ್ಟು ಪತ್ನಿ ಪರಾರಿ..!

ಸ್ಥಳಕ್ಕೆ ಆಗಮಿಸಿದ್ದ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದರು. ಯಾಕಂದ್ರೆ ಹತ್ಯೆಯಾಗಿರುವ ಪ್ರವೀಣ್ ತನ್ನ ಸಂಬಂಧಿ ಯುವತಿಯನ್ನೇ ಪ್ರೀತಿಸುತ್ತಿದ್ದನಂತೆ. ಈ ವಿಚಾರವಾಗಿಯೇ ಹುಡುಗಿ ಮನೆಯವರಿಗೂ ಪ್ರವೀಣ್ ಮಧ್ಯೆ ಗಲಾಟೆ ಆಗಿತ್ತು. ಇದೇ ಕಾರಣಕ್ಕೆ ಪ್ರವೀಣ್ ತಾಯಿ, ಮಗನ ಕಳೆದುಕೊಂಡ ನೋವಿನ ಬೆನ್ನಲ್ಲೇ ನಾದಿನಿ ಹಾಗೂ ನಾದಿನಿ ಮಗನ ವಿರುದ್ಧ ದೂರು ನೀಡಿದ್ದಳು.

ಇದನ್ನೂ ಓದಿ:ಗೌತಮ್ ಗಂಭೀರ್​​ಗೆ ಬಿಗ್ ಶಾಕ್​.. ಮುಖ್ಯ ಕೋಚ್​ ಇಟ್ಟಿದ್ದ ದೊಡ್ಡ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ

ಅದರಂತೆ ತನಿಖೆ ನಡೆಸಿದ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ. ತನ್ನ ತಂಗಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಸಿಟ್ಟಿಗೆದ್ದು ಮಲ್ಲಿಕಾರ್ಜುನ ತೆಗ್ಗಿನಮನಿ ಹಾಗೂ ಆತನ ಗೆಳೆಯ ಶಾರುಖ್ ಮುಲ್ಲಾ ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಗುಲ್ಬರ್ಗಾ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಹೃದಯ ವಿದ್ರಾವಕ ಘಟನೆ.. ಅಪ್ಪ, ಮಗ ಕೈ ಕೈ ಹಿಡ್ಕೊಂಡು ರೈಲಿಗೆ ತಲೆಕೊಟ್ಟು ದಾರುಣ ಸಾವು -ವಿಡಿಯೋ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಲಬುರಗಿ ಯುವಕನ ಬರ್ಬರ ಕೊಲೆ ಕೇಸ್​​ಗೆ ಬಿಗ್​​ ಟ್ವಿಸ್ಟ್.. ತಂಗಿಯನ್ನು ಪ್ರೀತಿಸಿದ್ಕೆ ರೊಚ್ಚಿಗೆದ್ದ ಅಣ್ಣ..

https://newsfirstlive.com/wp-content/uploads/2024/07/KLB-PRAVEEN.jpg

Load More