newsfirstkannada.com

BMW ಹಿಟ್ ಅಂಡ್ ರನ್​ ಕೇಸ್​ಗೆ ಬಿಗ್​ ಟ್ವಿಸ್ಟ್​; ರೆಡ್​ ಬುಲ್ ಕುಡಿದು ಮಹಿಳೆಗೆ ಡಿಕ್ಕಿ ಹೊಡೆದ್ನಂತೆ; ಶಿಕ್ಷೆ ಆಗಲ್ವಾ??

Share :

Published July 9, 2024 at 5:56pm

  ಮುಂಬೈನ ವರ್ಲಿಯ ಕೋಳಿವಾಡ ಪ್ರದೇಶದಲ್ಲಿ ನಡೆದ ಭೀಕರ ಅಪಘಾತ

  ಮೀನು ತರಲೆಂದು ಪತಿಯ ಜತೆ ಬೈಕ್​ನಲ್ಲಿ ಹೋಗುತ್ತಿದ್ದಾಗ ನಡೆದ ಘಟನೆ

  ಅಪಘಾತಕ್ಕೂ ಮುನ್ನ ಮಿಹಿರ್ ಶಾ ಆಲ್ಕೋಹಾಲ್ ಸೇವಿಸಿದ್ದು ನಿಜಾನಾ?

ಮುಂಬೈ: ವರ್ಲಿ ಹಿಟ್ ಅಂಡ್ ರನ್ ಕೇಸ್​ ಪ್ರಮುಖ ಆರೋಪಿ ಮಿಹಿರ್ ಶಾನನ್ನು ಕೊನೆಗೂ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತನ್ನ ಬಿಎಂಡಬ್ಲ್ಯು ಕಾರಿನಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮಹಿಳೆಯನ್ನು ಕೊಂದ ಬಳಿಕ ಜುಲೈ 7 ರಿಂದ ಆರೋಪಿ ಮಿಹಿರ್ ಶಾ ತಲೆಮರೆಸಿಕೊಂಡಿದ್ದ. ಕೊನೆಗೆ ಆರೋಪಿ ಮಿಹಿರ್ ಶಾ ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 24 ವರ್ಷದ ಆರೋಪಿ ಮಿಹಿರ್ ಶಾ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಾಯಕ ರಾಜೇಶ್ ಶಾ ಅವರ ಪುತ್ರನಾಗಿದ್ದಾನೆ.

ಇದನ್ನೂ ಓದಿ: ಪುಣೆ ಬಳಿಕ ಮತ್ತೊಂದು ಭೀಕರ ಅಪಘಾತ.. ಪ್ರಭಾವಿ ನಾಯಕನ ಮಗನಿಂದ Hit & Run; ಮಹಿಳೆ ಸಾವು; ಆಗಿದ್ದೇನು?

ಮಹಿಳೆಯೊಬ್ಬರು ಮೀನು ತರಲೆಂದು ಪತಿಯ ಜತೆ ಬೈಕ್​ನಲ್ಲಿ ತೆರಳಿದ್ದಾಗ ವೇಗವಾಗಿ ಬಿಎಂಡಬ್ಲ್ಯೂ ಕಾರನ್ನು ಚಲಿಸಿಕೊಂಡು ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾವೇರಿ ನಖ್ವಾ (45) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಪತಿ ಪ್ರದೀಪ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದರು. ಇನ್ನು, ಮಹಿಳೆಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಮಿಹಿರ್ ಶಾ ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದ. ಬಳಿಕ ತನ್ನ ಕಾರನ್ನು ಬಾಂದ್ರಾ ಪೂರ್ವದ ಕಲಾ ನಗರದಲ್ಲಿ ಬಿಟ್ಟು ಹೋಗಿರುವುದು ಪತ್ತೆಯಾಗಿತ್ತು.

ಈ ಅಪಘಾತಕ್ಕೂ ಮುನ್ನ ಆರೋಪಿ ರೆಡ್ ಬುಲ್ ಕುಡಿದಿದ್ದ ಎಂದು ಪಬ್ ಮಾಲೀಕರು ಹೇಳಿದ್ದಾರೆ. ಇದೇ ವಿಚಾರವಾಗಿ ಖಾಸಗಿ ವಾಹಿನಿ ಜೊತೆ ಮಾತಾಡಿದ ಅವರು. ನಾಲ್ವರ ಗುಂಪೊಂದು ಮರ್ಸಿಡಿಸ್ ಕಾರಿನಲ್ಲಿ ರಾತ್ರಿ 11:08 ಗಂಟೆಗೆ ಪಬ್‌ಗೆ ಬಂದಿತು. ಅವರು ರಾತ್ರಿಯ ಊಟ ಮತ್ತು ಪಾನೀಯಗಳನ್ನು ಸೇವಿಸಿದರು. ರಾತ್ರಿ 11:26ರ ಸುಮಾರಿಗೆ ಹೊರಟು ಹೋದರು. ಮಿಹಿರ್ ಮಾತ್ರ ರೆಡ್ ಬುಲ್ ಅನ್ನು ಮಾತ್ರ ಸೇವಿಸಿದ್ದಾರೆ. ಯಾವುದೇ ಆಲ್ಕೋಹಾಲ್ ಪಾನೀಯಗಳನ್ನು ಸೇವಿಸಲಿಲ್ಲ. ಪೊಲೀಸರು ಈ ವಿವರಗಳನ್ನು ಸಿಸಿಟಿವಿ ದೃಶ್ಯಗಳೊಂದಿಗೆ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ.. ನಾಯಕತ್ವದ ಬಗ್ಗೆ ಸೂರ್ಯ ಕುಮಾರ್ ಏನಂದ್ರು ಗೊತ್ತಾ?

ಇನ್ನು, ಈ ಕೇಸ್​ ಸಂಬಂಧ ಮಿಹಿರ್ ಶಾ ವಿರುದ್ಧ ಸೆಕ್ಷನ್ 105 (ಅಪರಾಧ ನರಹತ್ಯೆ ಕೊಲೆಗೆ ಸಮನಾಗಿರುವುದಿಲ್ಲ), 281 (ಅದುರಿತ ಮತ್ತು ನಿರ್ಲಕ್ಷ್ಯದ ಚಾಲನೆಯು ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ), 125-ಬಿ (ಜೀವನ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ), 238, 324 (4) (ಉಂಟುಮಾಡುವ ಪ್ರಮಾಣದ ದುಷ್ಕೃತ್ಯವನ್ನು ಎಸಗುವುದು) ಅಡಿಯಲ್ಲಿ ಕೇಸ್​ ದಾಖಲಾಗಿದೆ. ಇದರ ಜೊತೆಗೆ ವಾಹನ ಕಾಯ್ದೆಯ ಸೆಕ್ಷನ್ 184, 134 ಎ, 134 ಬಿ, 187 ರ ಅಡಿಯಲ್ಲಿಯೂ ಅವರ ವಿರುದ್ಧ ಕೇಸ್​ ದಾಖಲಾಗಿದೆ. ಪೊಲೀಸರ ಪ್ರಕಾರ, ಈ ಘಟನೆಯ ನಂತರ ತಂದೆ ರಾಜೇಶ್ ಶಾ ಅವರು ತನ್ನ ಮಗ ಮಿಹಿರ್‌ಗೆ ಕರೆ ಮಾಡಿದ್ದಾರೆ. ಬಳಿಕ ಡ್ರೈವರ್‌ನೊಂದಿಗೆ ಸ್ಥಳವನ್ನು ಬದಲಾಯಿಸಲು ತನ್ನ ಮಗನಿಗೆ ಹೇಳಿದ್ದಾರೆ ಎನ್ನಲಾಗಿದೆ. ತನ್ನ ಮಗನನ್ನು ರಕ್ಷಿಸಲು ಚಾಲಕನ ಮೇಲೆ ಆರೋಪ ಹೊರಿಸುವುದು ರಾಜೇಶ್ ಶಾ ಅವರ ಯೋಚನೆಯಾಗಿತ್ತು ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BMW ಹಿಟ್ ಅಂಡ್ ರನ್​ ಕೇಸ್​ಗೆ ಬಿಗ್​ ಟ್ವಿಸ್ಟ್​; ರೆಡ್​ ಬುಲ್ ಕುಡಿದು ಮಹಿಳೆಗೆ ಡಿಕ್ಕಿ ಹೊಡೆದ್ನಂತೆ; ಶಿಕ್ಷೆ ಆಗಲ್ವಾ??

https://newsfirstlive.com/wp-content/uploads/2024/07/accident2-1.jpg

Load More