newsfirstkannada.com

ಮಹಿಳೆ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​.. ಕಾರು ಚಾಲಕನಿಂದಲೇ ಹಣಕ್ಕಾಗಿ ಪ್ರಳಯಾಂತಕ ಕೃತ್ಯ.. ತನಿಖೆಯಲ್ಲಿ ರೋಚಕ ಸತ್ಯ..!

Share :

30-06-2023

    ಕೊಲೆ ಮಾಡಿ 35 ಲಕ್ಷ ಹಣ ದೋಚಿತ್ತು ಗ್ಯಾಂಗ್

    ಮಗನ ಓದಿಗಾಗಿ ಇಟ್ಕೊಂಡಿದ್ದು ಲಕ್ಷ ಲಕ್ಷ ಹಣ

    ಶಿವಮೊಗ್ಗ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ

ಶಿವಮೊಗ್ಗ: ನಗರದಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿರುವ ತುಂಗಾನಗರ ಠಾಣೆ ಪೊಲೀಸರು, 7 ಆರೋಪಿಗಳನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ ಹನುಮಂತ ನಾಯ್ಕ ಸೇರಿ ಒಟ್ಟು 7 ಜನರ ಬಂಧನವಾಗಿದೆ. ಪ್ರದೀಪ್, ಅಪ್ಪು ನಾಯ್ಕ, ಪ್ರಭು ನಾಯ್ಕ, ಸತೀಶ್, ರಾಜು ಹಾಗೂ ಕಾರು ನೀಡಿದ್ದ ಕೌಶಿಕ್ ಬಂಧಿತ ಆರೋಪಿಗಳು.

ಬಂಧಿತರಿಂದ 33.74 ಲಕ್ಷ ನಗದು, 1 ಕಾರು 3 ಬೈಕ್ 7 ಹೊಸ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು 41.14 ಲಕ್ಷ ರೂ. ಮೌಲ್ಯದ ನಗದು ಹಾಗೂ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯನ್ನು ಮುಂದುವರಿಸಿದ್ದಾರೆ.

ಜೂನ್ 17 ರಂದು ಕೊಲೆ

ನೀರಾವರಿ ಇಲಾಖೆಯ EE ಮಲ್ಲಿಕಾರ್ಜುನ್ ಪತ್ನಿ ಕಮಲಮ್ಮ (57) ಅವರು ಜೂನ್ 17 ರಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಪ್ರಕರಣದ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಕೊನೆಯಲ್ಲಿ ಸ್ಫೋಟಕ ಸತ್ಯ ಗೊತ್ತಾಗಿದೆ.

ಏನಿದು ಪ್ರಕರಣ..?

ಮಲ್ಲಿಕಾರ್ಜುನ್ ನಿವಾಸದಲ್ಲಿ ಹಣ ಇರೋದು ಆರೋಪಿ ಹನುಮಂತ್​ಗೆ ಗೊತ್ತಿತ್ತು. ಅದಕ್ಕಾಗಿ ಸ್ಕೆಚ್ ಹಾಕಿದ್ದ ಹನುಮಂತ್ ಹಲವು ಭಾರಿ ಹಣ ನೀಡುವಂತೆ ಕೇಳಿಕೊಂಡಿದ್ದ. ಆದರೆ ಆತನಿಗೆ ಹಣವನ್ನು ನೀಡಿರಲಿಲ್ಲ. ಅದಕ್ಕಾಗಿ ತನ್ನ ಸ್ನೇಹಿತರ ನೆರವು ಪಡೆದು, ಜೂನ್ 16ರ ರಾತ್ರಿ 11 ಗಂಟೆಗೆ ಮಲ್ಲಿಜಾರ್ಜುನ್ ಮನೆಗೆ ತೆರಳಿ ಕಮಲಮ್ಮರ ಬಳಿ ಹಣ ಕೇಳಿದ್ದ. ಹಣ ಸಿಗದಿದ್ದರಿಂದ ವಾಪಸ್ ಆಗಿದ್ದ ಆರೋಪಿಗಳು ಜೂನ್ 17 ರಂದು ಮಧ್ಯಾಹ್ನ ಕಮಲಮ್ಮರ ಮನೆಗೆ ಬಂದಿದ್ದರು. ಕಮಲಮ್ಮ ಬಳಿ ಹಣ ಕೇಳಿದ್ದಾರೆ. ಆಗಲೂ ಕಮಲಮ್ಮ ಹಣ ನೀಡಲು ನಿರಾಕರಿಸಿದ್ದಾರೆ.

ಕೊನೆಗೆ ಹಣ ಬೇಡ ನೀರು ತೆಗೆದುಕೊಂಡು ಬನ್ನಿ ಎಂದು ಆರೋಪಿಗಳು ಹೇಳಿದ್ದಾರೆ. ಕಮಲಮ್ಮ ನೀರು ತರಲು ಹೋದಾಗ ಆಕೆಯ ಬಾಯಿ ಮುಚ್ಚಿ, ತೆಂಗಿನಕಾಯಿ ಒಡೆಯುವ ರಾಡ್​ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಕಮಲಮ್ಮ ಹಣ ಇಟ್ಟಲ್ಲಿಗೆ ಆರೋಪಿಗಳು ಹೋಗಿದ್ದಾರೆ. ಬೀರುವಿನಲ್ಲಿದ್ದ 35 ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ಆರೋಪಿಗಳು ಎಸ್ಕೇಪ್ ಆಗಿದ್ದರು. ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೊಸ ಮೊಬೈಲ್, ಹೊಸ ಸಿಮ್ ಖರೀದಿಸಿ ತಲೆ ಮರೆಸಿಕೊಂಡಿದ್ದರು.

ಆರೋಪಿಯು, ಮಲ್ಲಿಕಾರ್ಜುನ್ ಅವರ ಕಾರು ಚಾಲಕನಾಗಿದ್ದ. ಈತನಿಗೆ ಮನೆಯಲ್ಲಿ ಹಣ ಇರೋದು ಗೊತ್ತಿತ್ತು. ಕಮಲಮ್ಮ ಅವರು, ಮಗನ ಮೆಡಿಕಲ್ ಓದಿಗಾಗಿ 35 ಲಕ್ಷ ರೂಪಾಯಿ ತಂದಿಟ್ಟಿದ್ದರು. ಈ ವಿಚಾರ ಗೊತ್ತಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ. ಇನ್ನು 35 ಲಕ್ಷ ರೂಪಾಯಿ ಹಣದಲ್ಲಿ 7 ಮಂದಿ ತಲಾ 5 ಲಕ್ಷ ರೂಪಾಯಿಯಂತೆ ಹಂಚಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​.. ಕಾರು ಚಾಲಕನಿಂದಲೇ ಹಣಕ್ಕಾಗಿ ಪ್ರಳಯಾಂತಕ ಕೃತ್ಯ.. ತನಿಖೆಯಲ್ಲಿ ರೋಚಕ ಸತ್ಯ..!

https://newsfirstlive.com/wp-content/uploads/2023/06/SMG_MRDDER.jpg

Load More