/newsfirstlive-kannada/media/post_attachments/wp-content/uploads/2024/11/Maharastra-Election.jpg)
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಮಕಾಡೆ ಮಲಗಿದೆ. ಬಿಜೆಪಿ ನೇತೃತ್ವದ ಮಹಾಯುತಿಗೆ ಅಧಿಕಾರ ದಕ್ಕಿದೆ. 10 ವರ್ಷಗಳ ಬಳಿಕ ಮಹಾ ಗದ್ದುಗೆಯೇರುವ ಕಾಂಗ್ರೆಸ್​ ಕನಸು ಕಮರಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಮಾತಿನ ಮಳೆಗರೆದಿದ್ದಾರೆ. ವಕ್ಫ್ ಬೋರ್ಡ್ ಭೂ ಹಪಾಹಪಿಯನ್ನೂ ಖಂಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್‌ಡಿಎ ಪಡೆಗೆ ಅಭೂತಪೂರ್ವ ಜಯ ಸಿಕ್ಕಿದೆ. ಮಹಾಯುತಿ ಆರ್ಭಟಕ್ಕೆ ಮಹಾ ವಿಕಾಸ್ ಅಘಾಡಿ ಧೂಳಿಪಟವಾಗಿದೆ. ಕಾಂಗ್ರೆಸ್ ಗ್ಯಾರಂಟಿಗೆ ಮನಸೋಲದ ಮತದಾರ.. ಮತ್ತೊಮ್ಮೆ ಮಹಾಯುತಿಗೆ ‘ಮಹಾ’ರಾಜನ ಪಟ್ಟ ಕೊಟ್ಟಿದ್ದಾನೆ.
/newsfirstlive-kannada/media/post_attachments/wp-content/uploads/2024/11/Maharastra-Election-1.jpg)
ಜಿದ್ದಾಜಿದ್ದಿನ ‘ಮಹಾ’ ಕದನದಲ್ಲಿ ‘ಅಘಾಡಿ’ ಆಹುತಿ!
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಪಡೆ ನಿರೀಕ್ಷೆಗೂ ಮೀರಿ ಅಭೂತಪೂರ್ವ ಗೆಲುವು ದಾಖಲಿಸಿದೆ. 288 ಕ್ಷೇತ್ರಗಳ 4,136 ಅಭ್ಯರ್ಥಿಗಳ ಮತ ಭವಿಷ್ಯ ಹೊರಬಿದ್ದಿದ್ದು ಮಹಾಯುತಿ ಎದುರು ಅಘಾಡಿ ಮಕಾಡೆ ಮಲಗಿದೆ. ಬಿಜೆಪಿ-ಶಿವಸೇನೆ ಶಿಂಧೆ ಬಣ ಹಾಗೂ ಎನ್​ಸಿಪಿ ಅಜಿತ್ ಪವಾರ್ ಬಣ ಗೆಲುವಿನ ಕೇಕೆ ಹಾಕಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮಿತ್ರ ಕೂಟ ಮಹಾಯುತಿ 234 ಕ್ಷೇತ್ರಗಳನ್ನ ಗೆದ್ದು ಬೀಗಿದೆ. ಇದರಲ್ಲಿ ಬಿಜೆಪಿ 133 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಏಕ್‌ನಾಥ್ ಶಿಂಧೆಯ ಶಿವಸೇನಾ 57 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 41 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ.
ಮಹಾ ವಿಕಾಸ್ ಅಘಾಡಿ ಕೇವಲ 48 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ 20 ಕ್ಷೇತ್ರಗಳಲ್ಲಿ ಮಾತ್ರ ಖಾತೆ ತೆರೆದಿದೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ 10 ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್ ಕೇವಲ 15 ಸ್ಥಾನಗಳನ್ನ ಮಾತ್ರ ಗೆಲ್ಲುವಲ್ಲಿ ಸಫಲವಾಗಿದೆ. ಇನ್ನೂ 6 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/11/Maharastra-Election-3.jpg)
‘ಮಹಾ’ ಅಭೂತಪೂರ್ವ ಗೆಲುವಿಗೆ ಪ್ರಧಾನಿ ಮೋದಿ ಹರ್ಷ
ಮಹಾರಾಷ್ಟ್ರದಲ್ಲಿ ಮಹಾಯುತಿ ಭರ್ಜರಿ ಜಯ ಗಳಿಸಿದ ಬೆನ್ನಲ್ಲೇ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುವ ಮೂಲಕ ಮಹಾರಾಷ್ಟ್ರ ಫಲಿತಾಂಶವನ್ನು ಸಂಭ್ರಮಿಸಿದ್ದಾರೆ. ಭಾರತೀಯ ಜನತಾ ಪಾರ್ಟಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಭರ್ಜರಿ ಜಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಮಹಾಯುತಿ ಮೈತ್ರಿಯಲ್ಲಿ CM ಸ್ಥಾನಕ್ಕೆ ಪೈಪೋಟಿ; ಘೋಷಣೆಗೂ ಮೊದಲೇ ಪವಾರ್ ‘ಪವರ್’ ಪೋಸ್ಟರ್..!
ಇದೊಂದು ಐತಿಹಾಸಿಕ ಮಹಾ ವಿಜಯ. ಮಹಾರಾಷ್ಟ್ರದಲ್ಲಿ ವಿಕಾಸವಾದವು ಜಯವನ್ನ ಗಳಿಸಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಆಡಳಿತಕ್ಕೆ ಗೆಲುವಾಗಿದೆ. ಮಹಾರಾಷ್ಟ್ರದಲ್ಲಿ ಸತ್ಯವಾದ ಸಾಮಾಜಿಕ ನ್ಯಾಯಕ್ಕೆ ಜಯ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಕ್ಫ್ ಆಸ್ತಿ ಹಪಾಹಪಿ ಎತ್ತಿ ಕಾಂಗ್ರೆಸ್ ವಿರುದ್ಧ ನಮೋ ಕೆಂಡ
ಚುನಾವಣೆೆ ಗೆಲುವಿನ ಸಂಭ್ರಮದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಗುಡುಗಿದ್ದಾರೆ. ಜೊತೆಗೆ ವಕ್ಫ್ ಬೋರ್ಡ್ ಆಸ್ತಿ ಹಪಾಹಪಿ ವಿರುದ್ಧ ಕಿಡಿಕಾರಿದ್ದಾರೆ. ಅಂಬೇಡ್ಕರ್ ನೀಡಿದ ದೇಶದ ಸಂವಿಧಾನದಲ್ಲಿ ವಕ್ಫ್ ಕಾನೂನಿಗೆ ಸ್ಥಾನವಿಲ್ಲ. ತುಷ್ಟೀಕರಣಕ್ಕಾಗಿ ಕಾಂಗ್ರೆಸ್​ ಈ ಕಾನೂನು ಮಾಡಿದೆ ಅಂತ ಕಿಡಿಕಾರಿದ್ದಾರೆ.
ಒಟ್ಟಾರೆ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಧೂಳಿಪಟವಾಗಿದೆ. ವಿಪಕ್ಷ ಸ್ಥಾನದಲ್ಲಿ ಕೂರಲೂ ಅರ್ಹತೆ ಇಲ್ಲದಮಟ್ಟಿಗೆ ಕಾಂಗ್ರೆಸ್, ಎನ್‌ಸಿಪಿ, ಶಿವಸೇನಾ ಹೀನಾಯ ಸೋಲು ಕಂಡಿವೆ. ಕಳೆದ ಮೂರು ದಶಕಗಳಲ್ಲಿಯೇ ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿ ಈ ಮಟ್ಟಿಗೆ ಮತದಾನ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಮತದಾರ ಮಾಡಲಿಲ್ಲ. ಹೀಗಾಗಿಯೇ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಪಡೆಗೆ ಲೋಕಸಭೆ ಚುನಾವಣಾ ಫಲಿತಾಂಶಕ್ಕಿಂತ ವ್ಯತಿರಿಕ್ತವಾದ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಿದ್ದು ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸೋಲು ಅನುಭವಿಸಿದ್ದ ಬಿಜೆಪಿಗೆ ಹಾಗೂ ನರೇಂದ್ರ ಮೋದಿಗೆ ಈ ಒಂದು ಗೆಲುವು ಬೂಸ್ಟರ್ ಡೋಸ್ ಆಗಿದೆ. ಉತ್ತರಪ್ರದೇಶದಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಮತ್ತೆ ಎರಡು ಸ್ಥಾನ ಹೆಚ್ಚು ಗಳಿಸಿದ್ದೂ ಕೂಡ ಇಲ್ಲಿ ಪ್ರಾಮುಖ್ಯತೆ ಪಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us