newsfirstkannada.com

×

BBK11; ಮನೆಯಲ್ಲಿ ಟ್ರಯಾಂಗಲ್ ಲವ್​ ಸ್ಟೋರಿನಾ.. ಐಶ್ವರ್ಯ, ಧರ್ಮ, ಅನುಷಾ ಮಧ್ಯೆ ಏನ್ ನಡೀತಿದೆ?

Share :

Published October 13, 2024 at 2:57pm

Update October 13, 2024 at 3:17pm

    ಕಿಚ್ಚನ ಪಂಚಾಯತಿಯಲ್ಲಿ ಹೊರ ಬೀಳುತ್ತಾ ಲವ್ ಸ್ಟೋರಿ?

    ಹಳೆಯ ಲವ್​ ಸ್ಟೋರಿ ಕುರಿತು ಹೇಳಿದ ಗೋಲ್ಡ್​ ಸುರೇಶ್

    ಬಿಗ್​ಬಾಸ್​ ಮನೆಯಲ್ಲಿ ಪ್ರೀತಿ- ಪ್ರೇಮನಾ, ಏನಿದರ ಗುಟ್ಟು?

ಬಿಗ್‌ ಬಾಸ್‌ ಸೀಸನ್‌- 11 ಎರಡನೇ ವಾರ ಪೂರ್ಣಗೊಳಿಸಿದೆ. ದಿನದಿಂದ ದಿನಕ್ಕೆ ಬಿಗ್‌ ಬಾಸ್‌ ನೀಡುತ್ತಿರುವ ಟಾಸ್ಕ್‌ ಭರ್ಜರಿಯಾಗಿವೆ. ಕಿಚ್ಚ ಹೇಳಿದಂತೆ ಹೊಸ ಅಧ್ಯಾಯ ಎಂದು ಆರಂಭವಾಗಿರುವ ಈ ಸೀಸನ್‌ನಲ್ಲಿ ಎಲ್ಲ ಹೊಸದಾಗಿಯೇ ಕಾಣುತ್ತಿದೆ. ಇಂದು ಭಾನುವಾರ ಆಗಿದ್ದರಿಂದ ವಾರದ ಕತೆ ಕಿಚ್ಚನ ಜೊತೆ ಏನೇನು ಚರ್ಚೆ ಆಗಬಹುದು ಎಂದು ಕುತೂಹಲ ಮೂಡಿದೆ. ಏಕೆಂದರೆ ಮನೆಯಲ್ಲಿ ಪ್ರೀತಿಯೊಂದು ಅರಳಿದೆ ಎನ್ನಲಾಗುತ್ತಿದೆ.

ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ್ ಅವರ ಮತ್ತೊಂದು ವಿಡಿಯೋ ಔಟ್ ಆಗಿದೆ. ಇದಕ್ಕೆ ಅವಳ ಕಣ್ಣು ಇವನ ಮೇಲೆ, ಇವನ ಕಣ್ಣು ಮತ್ತೊಬ್ಬಳ ಮೇಲೆ, ಬಿಗ್​​ಬಾಸ್​ ಮನೆಯ ಸದಸ್ಯರೆಲ್ಲರ ಕಣ್ಣು ಈ ಮೂವರ ಮೇಲೆ! ಎಂದು ಟ್ಯಾಗ್​ಲೈನ್ ಬರೆಯಲಾಗಿದೆ. ಅಂದರೆ ಬಿಗ್​ಬಾಸ್​ನ ಬಿಗ್ ಹೌಸ್​ನಲ್ಲಿ ಟ್ರಯಾಂಗಲ್ ಲವ್​ ಸ್ಟೋರಿ ಏನಾದರೂ ನಡೆಯುತ್ತಿದೆಯಾ ಎನ್ನುವ ಪ್ರಶ್ನೆ ಎಲ್ಲರನ್ನ ಕಾಡತೊಡಗಿದೆ.

ಇದನ್ನೂ ಓದಿ: ಬಿಗ್​ಬಾಸ್ ಮನೆಯಲ್ಲಿ ಜಗದೀಶ್- ಹಂಸಾ ಡುಯೇಟ್ ಮಾಡಿದ್ರಾ.. ಹೇಗಿರುತ್ತೆ ಇಂದಿನ ಕಿಚ್ಚನ ಪಂಚಾಯತಿ?

ಧರ್ಮ ಅವರು ಅನುಷಾ ಬಳಿ ಮಾತನಾಡಿದ್ರೆ ಐಶ್ವರ್ಯ ಅವರ ಮುಖ ಸಣ್ಣದಾಗುತ್ತೆ ಎಂದು ಸುದೀಪ್ ಹೇಳಿದ್ದಾರೆ. ಇದಕ್ಕೆ ಉಗ್ರಂ ಮಂಜು ಮಾತಾಡಿ, ಏನ್ ಮಾಡುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಅವರನ್ನೇ ನೋಡುತ್ತಿರುತ್ತಾರೆ ಎಂದಿದ್ದಾರೆ. ಆದರೆ ಇದಕ್ಕೆ ಧರ್ಮ ಪ್ರತಿಕ್ರಿಯಿಸಿ, ಅನುಷಾ ಅವರ ಜೊತೆ 4-5 ವರ್ಷದ ಫ್ರೆಂಡ್​ಶಿಪ್ ಇದೆ ಎಂದು ಹೇಳಿದ್ದಾರೆ. ಐಶ್ವರ್ಯ ಮಾತ್ರ ಅವರು ಚೇಂಜ್ ಆಗುತ್ತಿದ್ದಾರೆ ಎಂದು ಹೇಳಿದ್ದಕ್ಕೆ ಅನುಷಾ ನಮ್ಮನ್ನು ಅಬ್ಜರ್ವ್​ ಮಾಡುತ್ತಿರುತ್ತಾರೆ ಎಂದು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಈ IPL ಟೀಮ್​ಗೆ ಬಿಗ್ ಶಾಕ್ ಕೊಡ್ತಾರಾ ರಿಷಬ್ ಪಂತ್.. ಮಿಡ್​ನೈಟ್ ಟ್ವಿಟ್, ಏನಿದರ ಸೀಕ್ರೆಟ್​?

ಇದಕ್ಕೆ ಧರ್ಮ ಮುಖ ಮುಚ್ಚಿಕೊಂಡಿದ್ದು ಐಶ್ವರ್ಯ ಅವರ ಮುಖ ಚಿಕ್ಕದಾಗಬಹುದು, ನನ್ನದಲ್ಲ ಎಂದಿದ್ದಾರೆ. ಆದರೆ ಇದೆಲ್ಲದರ ಮಧ್ಯೆ ಗೋಲ್ಡ್​ ಸುರೇಶ್ ಮಾತನಾಡಿ, ಹಳೆದೊಂದು ಲವ್​ ಸ್ಟೋರಿ ಇದೆ ಸರ್.. ಎಂದು ಇವತ್ತಿನ ಪಂಚಾಯತಿಗೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಇಂದು ನಡೆಯುವ ಕಿಚ್ಚನ ಪಂಚಾಯತಿಯಲ್ಲಿ ಎಲ್ಲವೂ ಗೊತ್ತಾಗಲಿದೆ. ಅದಕ್ಕಾಗಿ ಇನ್ನು ಸ್ವಲ್ಪ ಹೊತ್ತು ಪ್ರೇಕ್ಷಕರು ಕಾಯಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11; ಮನೆಯಲ್ಲಿ ಟ್ರಯಾಂಗಲ್ ಲವ್​ ಸ್ಟೋರಿನಾ.. ಐಶ್ವರ್ಯ, ಧರ್ಮ, ಅನುಷಾ ಮಧ್ಯೆ ಏನ್ ನಡೀತಿದೆ?

https://newsfirstlive.com/wp-content/uploads/2024/10/BBK11_1.jpg

Load More