ಡ್ರೋನ್ ಪ್ರತಾಪ್ ಫೇರ್ ಆಟಕ್ಕೆ ಮನಸೋತ ಬಿಗ್ಬಾಸ್ ಸ್ಪರ್ಧಿಗಳು
ಐದನೇ ವಾರಕ್ಕೆ ಕಳಪೆ ಪಟ್ಟ ಪಡೆದುಕೊಂಡ ಸ್ಪರ್ಧಿಗಳು ಇವರು
ಬಿಗ್ಬಾಸ್ ಕನ್ನಡ ಇತಿಹಾಸದಲ್ಲಿ ಏಕಕಾಲಕ್ಕೆ ಇಬ್ಬರಿಗೆ ಕಳಪೆ ಪಟ್ಟ
ಕನ್ನಡ ಬಿಗ್ಬಾಸ್ ರಿಯಾಲಿಟಿ ಶೋನ ಸೀಸನ್ 10ರ ಐದನೇ ವಾರ ಉತ್ತಮ ಪಟ್ಟ ಡ್ರೋನ್ ಪ್ರತಾಪ್ ಪಡೆದುಕೊಂಡಿದ್ದಾರೆ. ಈ ಬಾರಿ ಕಳಪೆ ಪಟ್ಟವನ್ನು ಇಬ್ಬರು ಸ್ಪರ್ಧಿಗಳು ಪಡೆದುಕೊಂಡು ಜೈಲಿಗೆ ಹೋಗಿದ್ದಾರೆ. ಅದುವೆ ಇಶಾನಿ ಮತ್ತು ನೀತು. ಹೌದು, ಇದೇ ಮೊದಲ ಬಾರಿಗೆ ಬಿಗ್ಬಾಸ್ ಕನ್ನಡ ಇತಿಹಾಸದಲ್ಲಿ ಏಕಕಾಲಕ್ಕೆ ಇಬ್ಬರು ಸ್ಪರ್ಧಿಗಳು ಕಳಪೆ ಪಟ್ಟ ಪಡೆದು ಜೈಲಿಗೆ ತೆರಳಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಪರ ಜೋರಾಗಿ ಮಾತುಕತೆ ನಡೆಯುತ್ತಿದೆ. ಈ ವಾರ ಗಂಧದ ಗುಡಿ ತಂಡದ ನಾಯಕನಾಗಿ ಉಸ್ತುವಾರಿ ವಹಿಸಿ ಡ್ರೋನ್ ಪ್ರತಾಪ್ ತಂಡವನ್ನು ಗೆಲ್ಲಿಸಿದ್ದಾರೆ. ಡ್ರೋನ್ ಪ್ರತಾಪ್ ಫೇರ್ ಆಗಿ ಆಟವಾಡಿದ ರೀತಿ ಇತರೆ ಸ್ಪರ್ಧಿಗಳಿಗೆ ಇಷ್ಟವಾಗಿದೆ. ಹೀಗಾಗಿ ಡ್ರೋನ್ ಪ್ರತಾಪ್ ಅವರಿಗೆ ಉತ್ತಮ ಪಟ್ಟವನ್ನು ನೀಡಿ ಮೆಡಲ್ ತಮ್ಮದಾಗಿಸಿಕೊಂಡಿದ್ದಾರೆ.
ಡ್ರೋನ್ ಪ್ರತಾಪ್‌ಗೆ ಸ್ನೇಹಿತ್, ಕಾರ್ತಿಕ್, ವರ್ತೂರು ಸಂತೋಷ್, ನೀತು, ಮೈಕಲ್ ವೋಟ್ ಹಾಕಿದರು. ಅತಿ ಹೆಚ್ಚು ಮತಗಳನ್ನ ಪಡೆದ ಡ್ರೋನ್ ಪ್ರತಾಪ್ ‘ಉತ್ತಮ’ ಪಟ್ಟ ಪಡೆದುಕೊಂಡರು. ಇಶಾನಿಗೆ ಸಂಗೀತಾ, ಕಾರ್ತಿಕ್, ವರ್ತೂರು ಸಂತೋಷ್, ನೀತು, ಡ್ರೋನ್ ಪ್ರತಾಪ್, ಭಾಗ್ಯಶ್ರೀ ಮತ್ತು ತನಿಶಾ ಕಳಪೆ ಪಟ್ಟ ನೀಡಿದ್ದರು. ತಲಾ ಏಳು ಮತಗಳನ್ನು ಪಡೆದುಕೊಂಡ ನೀತು ಮತ್ತು ಇಶಾನಿ ಒಟ್ಟಿಗೆ ಜೈಲಿಗೆ ತೆರಳಿದ್ದಾರೆ. ಕಳಪೆ ಬಟ್ಟೆ ಬರುತ್ತಿದ್ದಂತೆ ಬಿಗ್ಬಾಸ್ ಸ್ಪರ್ಧಿಗಳು ಶಾಕ್ ಌಂಡ್ ಸರ್ಪ್ರೈಸ್ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ