newsfirstkannada.com

ಹುಲಿ ಉಗುರು ಕೇಸ್​​; ದರ್ಶನ್​ಗೆ ನೋಟಿಸ್​​, ಸಂತೋಷ್​ ವಿರುದ್ಧ ಮಾತ್ರ ಕ್ರಮ ಯಾಕೆ? ಎಂದು ಪ್ರಶ್ನೆ

Share :

26-10-2023

    ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದ ಬಿಗ್​ಬಾಸ್​​ ಸ್ಪರ್ಧಿ

    ಬಿಗ್​ಬಾಸ್​​ ಸ್ಪರ್ಧಿ ವರ್ತೂರು ಸಂತೋಷ್​ ಅರೆಸ್ಟ್..!

    ಈ ಬಗ್ಗೆ ವರ್ತೂರು ಸಂತೋಷ್​ ಪರ ವಕೀಲರು ಏನಂದ್ರು?

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದಕ್ಕೆ ಬಿಗ್​ಬಾಸ್​​ ಸ್ಪರ್ಧಿ ವರ್ತೂರು ಸಂತೋಷ್​ ಅವರನ್ನು ಅರೆಸ್ಟ್​ ಮಾಡಲಾಗಿದೆ. ಈ ಸಂಬಂಧ ವರ್ತೂರು ಸಂತೋಷ್​ ಪರ ವಕೀಲ ಕೆ. ನಟರಾಜ್​ ಮಾತಾಡಿದ್ದಾರೆ.

ವರ್ತೂರು ಸಂತೋಷ್​​​ ಕೃಷಿ ಕುಟುಂಬದಿಂದ ಬಂದವರು. ಯಾವುದೇ ಅಪರಾಧ ಪ್ರಕರಣಗಳ ಹಿನ್ನೆಲೆ ಇಲ್ಲ. ಬಹಳ ದಿನಗಳಿಂದಲೂ ಹುಲಿ ಉಗುರನ್ನು ಪೂಜಿಸಿಕೊಂಡು ಬಂದ ವ್ಯಕ್ತಿ ವರ್ತೂರು ಸಂತೋಷ್​​ ಎಂದರು.

ಸಂತೋಷ್​ ವಿರುದ್ಧ ಮಾತ್ರ ಕ್ರಮ ಯಾಕೆ?

ನಟ ದರ್ಶನ್​​, ಜಗ್ಗೇಶ್​​, ರಾಕ್​​ಲೈನ್​ ವೆಂಕಟೇಶ್​​, ನಿಖಿಲ್​​ ಕುಮಾರಸ್ವಾಮಿ ಅವರಿಗೆ ನೋಟಿಸ್​ ನೀಡಿದ್ದಾರೆ. ಅವರ ಬಳಿಯಿದ್ದ ಎಲ್ಲಾ ಪೆಂಡೆಂಟ್​ಗಳನ್ನು ವಶಕ್ಕೆ ಪಡೆದು ಎಫ್​ಎಸ್​ಎಲ್​ಗೆ ಕಳಿಸಲಾಗಿದೆ. ಆದರೆ, ಇದ್ಯಾವುದು ಮಾಡದೆ ವರ್ತೂರು ಸಂತೋಷ್​ ವಿರುದ್ಧ ಮಾತ್ರ ಕ್ರಮ ತೆಗೆದುಕೊಂಡಿದ್ದಾರೆ ಎಂದರು.

ಇನ್ನು, ವರ್ತೂರು ಸಂತೋಷ್​​ ವಿರುದ್ಧ ಹುಲಿಯನ್ನು ಕೊಂದು ಉಗುರು ತಂದ ಸೆಕ್ಷನ್​​ಗಳಡಿ ಕೇಸ್​ ಮಾಡಲಾಗಿದೆ. ಹೀಗಾಗಿ ಇದು ಸುಳ್ಳಾಗಿದ್ದು, ಮಾನ್ಯ ನ್ಯಾಯಲಯ ವಾದ ಪುರಸ್ಕರಿಸಿ ಜಾಮೀನು ನೀಡೋ ವಿಶ್ವಾಸ ಇದೆ. ನಾಳೆಯೇ ಸಂತೋಷ್​ ಜಾಮೀನು ಸಿಗೋ ಸಾಧ್ಯತೆ ಇದೆ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಲಿ ಉಗುರು ಕೇಸ್​​; ದರ್ಶನ್​ಗೆ ನೋಟಿಸ್​​, ಸಂತೋಷ್​ ವಿರುದ್ಧ ಮಾತ್ರ ಕ್ರಮ ಯಾಕೆ? ಎಂದು ಪ್ರಶ್ನೆ

https://newsfirstlive.com/wp-content/uploads/2023/10/Darshan-Varthur-Santhosh.jpg

Load More