newsfirstkannada.com

ನನ್ನ ಅಣ್ಣ ದರ್ಶನ್ ತಪ್ಪು ಮಾಡಿದ್ದರೆ.. ಬಿಗ್‌ಬಾಸ್ ಸ್ಪರ್ಧಿ ಇಶಾನಿ ಪೋಸ್ಟ್ ಫುಲ್ ವೈರಲ್‌; ಫ್ಯಾನ್ಸ್ ಏನಂದ್ರು?

Share :

Published June 20, 2024 at 6:43pm

Update June 20, 2024 at 6:44pm

    ಇಶಾನಿ ಶೇರ್ ಮಾಡಿದ ಪೋಸ್ಟ್​ಗೆ ಜೈ ಡಿಬಾಸ್​ ಎಂದ ಫ್ಯಾನ್ಸ್​

    ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ-ಇಶಾನಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಇಶಾನಿ ಪೋಸ್ಟ್​

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಅರೆಸ್ಟ್​ ಆಗುತ್ತಿದ್ದಂತೆ ಇಡೀ ಕನ್ನಡ ಚಿತ್ರರಂಗವೇ ಶಾಕ್​ಗೆ ಒಳಗಾಗಿತ್ತು. ಈ ಕೊಲೆ ಕೇಸ್​ ಬಗ್ಗೆ ಸ್ಯಾಂಡಲ್​ವುಡ್ ನಟ ನಟಿಯರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಬಿಗ್​ಬಾಸ್ ಸೀಸನ್​ 10ರ ಮಾಜಿ ಸ್ಪರ್ಧಿ ಇಶಾನಿ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್‌ ಗ್ಯಾಂಗ್ ವಿರುದ್ಧ 8 ಹೊಸ ಸೆಕ್ಷನ್‌ ಸೇರಿಸಿದ ಪೊಲೀಸರು.. ಯಾವ್ಯಾವ ಸೆಕ್ಷನ್‌ಗೆ ಎಷ್ಟು ವರ್ಷ ಶಿಕ್ಷೆ?

ಈ ಹಿಂದೆ ನಟ ದರ್ಶನ್ ಜೊತೆಗಿನ ಕೆಲವೊಂದು ಫೋಟೋಗಳನ್ನು ಇಶಾನಿ ಶೇರ್ ಮಾಡಿಕೊಂಡಿದ್ದರು. ಈಗ ದರ್ಶನ್​ ಅರೆಸ್ಟ್ ಆದ ಬೆನ್ನಲ್ಲೇ ಇನ್​ಸ್ಟಾಗ್ರಾಮ್ ಪೋಸ್ಟ್ ಶೇರ್ ಮಾಡಿಕೊಂಡು ‘ಒಬ್ಬ ಅಣ್ಣನ ರೂಪದಲ್ಲಿ ನಾನು ಕಂಡ ದರ್ಶನ್ ಸರ್ ನಿಜಕ್ಕೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಳಿದಾಗ ನಂಬಲು ಸಾಧ್ಯವಾಗಲಿಲ್ಲ ಅಂತ ಹೇಳಿದ್ದಾರೆ.

View this post on Instagram

A post shared by Eshani (@eshanimusic)

ಇಶಾನಿ ಶೇರ್ ಮಾಡಿಕೊಂಡಿರೋ ಪೋಸ್ಟ್​ನಲ್ಲಿ ಏನಿದೆ?

ನಿಜಕ್ಕೂ ಇದು ಅಘಾತಕಾರಿ ಸುದ್ದಿ.! ಒಬ್ಬ ಅಣ್ಣನ ರೂಪದಲ್ಲಿ ನಾನು ಕಂಡ ದರ್ಶನ್ ಸರ್ ನಿಜಕ್ಕೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಳಿದಾಗ ನಂಬಲು ಸಾಧ್ಯವಾಗಲಿಲ್ಲ. ತನ್ನನ್ನು ನಂಬಿದ ಒಂದು ಹೆಣ್ಣು ಜೀವದ ಶ್ರೇಯೋಭಿಲಾಷಿಯಾಗಿ ಅವರು ಮಾಡಿದ ಕೆಲಸ ಸೂಕ್ತವೆ ಎಂದು ಅನಿಸಿದರೂ ಸಹ, ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಮಗಾರಿಗೂ ಸಹ ಅಧಿಕಾರವಿಲ್ಲ. ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ, ಆದರೆ ಅದುವರೆಗೂ ಇಲ್ಲ ಸಲ್ಲದ ಸುದ್ದಿಗಳನ್ನು ಹರಡಿ ಅವರ ತೇಜೋವಧೆ ಮಾಡುವುದು ಸರಿಯಲ್ಲ. ಕಾಲಾಯ ತಸ್ಮೈ ನಮಃ ಎಂದು ಇಶಾನಿ ಅವರು ಪೋಸ್ಟ್ ಹಾಕಿದ್ದಾರೆ. ಇನ್ನು ಇದೇ ಪೋಸ್ಟ್​ ನೋಡಿದ ಅಭಿಮಾನಿಗಳು ಇದು ನಿಜ ಮೇಡಂ ನೀವು ನಂಬಲೇಬೇಕು, ಜೈ ಡಿ ಬಾಸ್​ ಅಂತ ಕಾಮೆಂಟ್​​ ಮಾಡಿದ್ದಾರೆ. ಸದ್ಯ ಇದೇ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಅಣ್ಣ ದರ್ಶನ್ ತಪ್ಪು ಮಾಡಿದ್ದರೆ.. ಬಿಗ್‌ಬಾಸ್ ಸ್ಪರ್ಧಿ ಇಶಾನಿ ಪೋಸ್ಟ್ ಫುಲ್ ವೈರಲ್‌; ಫ್ಯಾನ್ಸ್ ಏನಂದ್ರು?

https://newsfirstlive.com/wp-content/uploads/2024/06/ishani.jpg

Load More